ಹಿತಾಸಕ್ತಿಯ ಸಂಘರ್ಷ; ಮೋಹನ್‌ ಬಗಾನ್‌ಗೆ BCCI ಅಧ್ಯಕ್ಷ ಗಂಗೂಲಿ ವಿದಾಯ.?

By Suvarna News  |  First Published Oct 28, 2021, 11:32 AM IST

* 2022ರ ಐಪಿಎಲ್ ಟೂರ್ನಿಗೆ ಎರಡು ಹೊಸ ತಂಡಗಳ ಸೇರ್ಪಡೆ

* ಹಿತಾಸಕ್ತಿ ಸಂಘರ್ಷ ಎದುರಿಸುವ ಆತಂಕದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ 

* ಟಿಕೆ ಮೋಹನ್‌ ಬಗಾನ್‌ ತಂಡದ ನಿರ್ದೇಶಕ ಸ್ಥಾನದಿಂದ ಸೌರವ್ ಕೆಳಗಿಳಿಯುವ ಸಾಧ್ಯತೆ


ನವದೆಹಲಿ(ಅ.28): ಹಿತಾಸಕ್ತಿಯ ವೈರುಧ್ಯ ಆರೋಪಗಳಿಂದ ಮುಕ್ತರಾಗಲು ಬಿಸಿಸಿಐನ ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly) ಅವರು ಸಂಜೀವ್‌ ಗೋಯೆಂಕಾ ಮಾಲೀಕತ್ವದ ಎಟಿಕೆ ಮೋಹನ್‌ ಬಗಾನ್‌ (ATK Mohun Bagan) ತಂಡದ ನಿರ್ದೇಶಕ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಸೋಮವಾರ ನಡೆದ ಬಿಡ್‌ನಲ್ಲಿ ಕೋಲ್ಕತ ಮೂಲದ ಸಂಜೀವ್ ಗೋಯೆಂಕಾ (Sanjiv Goenka) ನೇತೃತ್ವದ RPSG ಕಂಪನಿಯು 7,090 ಕೋಟಿ ರುಪಾಯಿಗೆ ಲಖನೌ ತಂಡವನ್ನು ಖರೀದಿಸಿತ್ತು. ಇದೇ ಗೋಯೆಂಕಾ ಮಾಲೀಕತ್ವದ ಮೋಹನ್‌ ಬಗಾನ್‌ ಫುಟ್ಬಾಲ್‌ ತಂಡದ ನಿರ್ದೇಶಕ ಮಂಡಲಿಯಲ್ಲಿ ಗಂಗೂಲಿ ಸದಸ್ಯರಾಗಿದ್ದು, ಜತೆಗೆ ಕೊಂಚ ಷೇರನ್ನು ಹೊಂದಿದ್ದರು. ಭಾರತದ ಫುಟ್ಬಾಲ್ ಇತಿಹಾಸದಲ್ಲಿ ಕೋಲ್ಕತ ಮೂಲದ ಮೋಹನ್ ಬಗಾನ್ ತಂಡವು ತನ್ನದೇ ಆದ ಛಾಪು ಮೂಡಿಸಿದೆ. ಇಂಡಿಯನ್ ಸೂಪರ್ ಲೀಗ್ (Indian Super League) ಫುಟ್ಬಾಲ್ ಟೂರ್ನಿಯಲ್ಲಿ ಎಟಿಕೆ ಮೋಹನ್ ಬಗಾನ್ ತಂಡವು 2 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು 2020-21ನೇ ಸಾಲಿನಲ್ಲಿ ಎಟಿಕೆ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

Latest Videos

undefined

ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಅರ್ಜಿ ಹಾಕಿದ ರಾಹುಲ್ ದ್ರಾವಿಡ್!

ಇದೀಗ ಗೋಯೆಂಕಾ ಐಪಿಎಲ್‌ ತಂಡವನ್ನು ಖರೀದಿಸಿರುವ ಕಾರಣ, ಬಿಸಿಸಿಐ (BCCI) ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಹಿತಾಸಕ್ತಿಯ ವೈರುಧ್ಯ ಆರೋಪ ಕೇಳುಬರುವ ಸಾಧ್ಯತೆಗಳು ದಟ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷರಾಗಿರುವ ಕಾರಣ ಮೋಹನ್‌ ಬಗಾನ್‌ ತಂಡದಿಂದ ದೂರ ಉಳಿಯಲು ದಾದಾ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಸಂಜೀವ್ ಗೋಯೆಂಕಾ, ಮೋಹನ್ ಬಗಾನ್‌ನಿಂದ ಅವರು ಸಂಪೂರ್ಣವಾಗಿ ದೂರ ಉಳಿಯುವ ಸಾಧ್ಯತೆಯಿದೆ ಎಂದು ನನಗನಿಸುತ್ತಿದೆ. ಅದನ್ನು ಸ್ವತಃ ಸೌರವ್ ಗಂಗೂಲಿ ಅವರೇ ಘೋಷಿಸುವ ಸಾಧ್ಯತೆಯಿದೆ ಎಂದು CNBC-TV 19 ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ಮೊದಲು 2019ರಲ್ಲಿ ಸಹಾ ಸೌರವ್ ಗಂಗೂಲಿ ಹಿತಾಸಕ್ತಿ ಸಂಘರ್ಷದ ಟೀಕೆ ಎದುರಿಸಿದ್ದರು. ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದುಕೊಂಡೇ ಸೌರವ್ ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡದ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಈ ಕುರಿತಂತೆ ಹಿತಾಸಕ್ತಿ ಸಂಘರ್ಷವನ್ನು ದಾದಾ ಎದುರಿಸಿದ್ದರು. 

IPL 2022: ಎರಡು ಹೊಸ ತಂಡ ಸೇರ್ಪಡೆ; ಲಖನೌ ತಂಡಕ್ಕೆ ಹೊಸ ಹೆಸರಿಟ್ಟ ಯೋಗಿ...!

2022ರ ಐಪಿಎಲ್‌ (IPL 2022) ಟೂರ್ನಿಗೆ ಹೊಸ ಎರಡು ತಂಡಗಳ ಸೇರ್ಪಡೆ: ಹೌದು, ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸದ್ಯ 8 ತಂಡಗಳು ಪಾಲ್ಗೊಳ್ಳುತ್ತಿವೆ. ಆದರೆ 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಇನ್ನೆರಡು ಹೊಸ ತಂಡಗಳು ಸೇರ್ಪಡೆಯಾಗಿವೆ. ಅಕ್ಟೋಬರ್ 25ರಂದು ನಡೆದ ಹೊಸ ತಂಡಗಳ ಬಿಡ್ಡಿಂಗ್‌ನಲ್ಲಿ ಸಂಜೀವ್ ಗೋಯೆಂಕಾ ಒಡೆತನದ RPSG ಗ್ರೂಪ್ ಹಾಗೂ ಸಿವಿಸಿ ಗ್ರೂಪ್‌ಗಳು ದಾಖಲೆ ಪ್ರಮಾಣದ ಬಿಡ್ಡಿಂಗ್‌ ಮಾಡಿ ಲಖನೌ ಹಾಗೂ ಅಹಮದಾಬಾದ್ ತಂಡಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿವೆ. 

ಹೊಸ ಎರಡು ತಂಡಗಳನ್ನು ಖರೀದಿಸಲು ಬಿಸಿಸಿಐ ಆಕಾಂಕ್ಷಿಗಳಿಗೆ 2,000 ಕೋಟಿ ರುಪಾಯಿ ಮೂಲ ಬೆಲೆಯನ್ನು ನಿಗದಿ ಮಾಡಿತ್ತು. ತಂಡಗಳನ್ನು ಖರೀದಿಸಲು ಹಲವು ಪ್ರತಿಷ್ಠಿತ ಉಧ್ಯಮಿಗಳು ಆಸಕ್ತಿ ತೋರಿದ್ದರು. ಈ ಪೈಕಿ ಲಖನೌ ತಂಡ ಖರೀದಿಸಲು ಸಂಜೀವ್ ಗೋಯೆಂಕಾ ಒಡೆತನದ RPSG ಗ್ರೂಪ್‌ ಅತಿ ಹೆಚ್ಚು ಅಂದರೆ 7,090 ಕೋಟಿ ರುಪಾಯಿ ಬಿಡ್‌ ಮಾಡಿ ತಂಡವನ್ನು ಖರೀದಿಸಲು ಯಶಸ್ವಿಯಾಯಿತು. ಇನ್ನು CVC Capitals ಗ್ರೂಪ್ 5,166 ಕೋಟಿ ರುಪಾಯಿ ಬಿಡ್ ಮಾಡಿ ಅಹಮದಾಬಾದ್ ತಂಡವನ್ನು ಖರೀದಿಸಿದೆ.

click me!