T20 World Cup: ಒಬೆಡ್ ಮೆಕಾಯ್‌ ಬದಲಿಗೆ ವೆಸ್ಟ್ ಇಂಡೀಸ್ ತಂಡ ಕೂಡಿಕೊಂಡ ಜೇಸನ್ ಹೋಲ್ಡನ್‌..!

By Suvarna News  |  First Published Oct 28, 2021, 1:56 PM IST

* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿಂಡೀಸ್ ತಂಡ ಕೂಡಿಕೊಂಡ ಜೇಸನ್ ಹೋಲ್ಡರ್

* ಒಬೆಡ್ ಮೆಕಾಯ್‌ ಬದಲಿಗೆ ಜೇಸನ್ ಹೋಲ್ಡರ್‌ಗೆ ಒಲಿದ ಅವಕಾಶ

* ಸತತ ಎರಡು ಸೋಲು ಕಂಗೆಟ್ಟಿರುವ ಹಾಲಿ ಚಾಂಪಿಯನ್‌ ವೆಸ್ಟ್ ಇಂಡೀಸ್


ದುಬೈ(ಅ.28): ಕಾಲಿನ ಗಾಯಕ್ಕೆ ಒಳಗಾಗಿದ್ದ ವಿಂಡೀಸ್ ವೇಗಿ ಒಬೆಡ್ ಮೆಕಾಯ್‌ (Obed McCoy) ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಿಂದ ಹೊರಬಿದ್ದಿದ್ದು,  ಮೆಕಾಯ್ ಬದಲಿಗೆ ವೆಸ್ಟ್ ಇಂಡೀಸ್ ತಂಡಕೂಡಿಕೊಳ್ಳಲು ಜೇಸನ್‌ ಹೋಲ್ಡರ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಅನುವು ಮಾಡಿಕೊಟ್ಟಿದೆ. 

ಈ ಕುರಿತಂತೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಐಸಿಸಿ, ಜೇಸನ್ ಹೋಲ್ಡರ್ (Jason Holder) ಈಗಾಗಲೇ ಮೀಸಲು ಆಟಗಾರರಾಗಿ ತಂಡದ ಜತೆಗಿದ್ದರು. ಕೋವಿಡ್ 19 (COVID 19) ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಮೀಸಲು ಆಟಗಾರರು ಸಹ ಕ್ವಾರಂಟೈನ್ ಅವಧಿ ಪೂರೈಸಿದ್ದರು. ಒಂದು ವೇಳೆ ಬದಲಿ ಆಟಗಾರರನ್ನು ತಂಡದೊಳಗೆ ಸೇರ್ಪಡೆಗೊಳಿಸಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಐಸಿಸಿ ತಿಳಿಸಿದೆ.

Tap to resize

Latest Videos

undefined

T20 World Cup: ನ್ಯೂಜಿಲೆಂಡ್ ಎದುರಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗುಡ್‌ ನ್ಯೂಸ್‌..!

ಅದರಂತೆ ಮೀಸಲು ಆಟಗಾರರಾಗಿದ್ದ ಜೇಸನ್ ಹೋಲ್ಡರ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ವಿಂಡೀಸ್ ಕ್ರಿಕೆಟ್‌ ಮಂಡಳಿ ಐಸಿಸಿ (ICC) ತಾಂತ್ರಿಕ ಸಮಿತಿಯ ಬಳಿ ಮನವಿ ಮಾಡಿಕೊಂಡಿತ್ತು. ಇದೀಗ ಹೋಲ್ಡರ್‌ ವಿಂಡೀಸ್ ತಂಡ ಕೂಡಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ವಿಂಡೀಸ್ ಪರ 27 ಪಂದ್ಯಗಳನ್ನಾಡಿರುವ ಹೋಲ್ಡರ್:

ಸ್ಟಾರ್ ಆಲ್ರೌಂಡರ್ ಆಗಿರುವ ಜೇಸನ್‌ ಹೋಲ್ಡರ್‌ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ (West Indies Cricket) ಪರ 27 ಟಿ20 ಪಂದ್ಯಗಳನ್ನಾಡಿ ಬ್ಯಾಟಿಂಗ್‌ನಲ್ಲಿ 201 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 22 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಟಿ20 ಕ್ರಿಕೆಟ್‌ ಮಾತ್ರವಲ್ಲದೇ ಜೇಸನ್ ಹೋಲ್ಡರ್ 51 ಟೆಸ್ಟ್ ಹಾಗೂ 121 ಏಕದಿನ ಪಂದ್ಯಗಳಲ್ಲಿ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಹೋಲ್ಡರ್ ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಕ್ರಮವಾಗಿ 137 ಹಾಗೂ 140 ವಿಕೆಟ್ ಕಬಳಿಸಿದ್ದಾರೆ.

ಹಿತಾಸಕ್ತಿಯ ಸಂಘರ್ಷ; ಮೋಹನ್‌ ಬಗಾನ್‌ಗೆ BCCI ಅಧ್ಯಕ್ಷ ಗಂಗೂಲಿ ವಿದಾಯ.?

ಕೀರನ್ ಪೊಲ್ಲಾರ್ಡ್‌ (Kieron Pollard) ನೇತೃತ್ವದ ವೆಸ್ಟ್‌ ಇಂಡೀಸ್ ತಂಡವು ಸೂಪರ್ 12 ಹಂತದ ಮೊದಲೆರಡು ಪಂದ್ಯಗಳಲ್ಲಿ ಆಘಾತಕಾರಿ ಸೋಲು ಕಂಡಿದೆ. ಈ ಮೂಲಕ ಗ್ರೂಪ್ 1 ಅಂಕಪಟ್ಟಿಯಲ್ಲಿ ಹಾಲಿ ಚಾಂಪಿಯನ್‌ ವೆಸ್ಟ್ ಇಂಡೀಸ್‌ ಕೊನೆಯ ಸ್ಥಾನದಲ್ಲಿದೆ. ವಿಂಡೀಸ್ ತಾನಾಡಿದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಹೀನಾಯ ಸೋಲು ಕಂಡಿತ್ತು. ಇದಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲೂ ವಿಂಡೀಸ್‌ 8 ವಿಕೆಟ್‌ ಅಂತರದ ಸೋಲು ಕಂಡು ಮುಖಭಂಗ ಅನುಭವಿಸಿದೆ. ಇದೀಗ ಜೇಸನ್‌ ಹೋಲ್ಡರ್ ತಂಡ ಸೇರ್ಪಡೆ ವಿಂಡೀಸ್ ತಂಡದ ಅದೃಷ್ಟವನ್ನು ಬದಲಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಹಿಂದೂಗಳ ನಡುವೆ ರಿಜ್ವಾನ್ ನಮಾಜ್‌ನಿಂದ ಹೆಚ್ಚು ತೃಪ್ತಿ; ವಕಾರ್ ಹೇಳಿಕೆಗೆ ಹರ್ಷಾ ಬೋಗ್ಲೆ ತಿರುಗೇಟು!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ ಏಕೈಕ ತಂಡ ಎನ್ನುವ ಹೆಗ್ಗಳಿಕೆ ವೆಸ್ಟ್ ಇಂಡೀಸ್ ಕ್ರಿಕೆಟ್‌ ತಂಡದ್ದು. ಡೇರನ್‌ ಸ್ಯಾಮಿ ನೇತೃತ್ವದ ವಿಂಡೀಸ್ ತಂಡವು 2012ರಲ್ಲಿ ಹಾಗೂ 2016ರಲ್ಲಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಪೊಲ್ಲಾರ್ಡ್ ಪಡೆ ಸೆಮೀಸ್‌ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ಅಕ್ಟೋಬರ್ 29ರಂದು ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರೀ ಅಂತರದಲ್ಲಿ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಒಂದು ವೇಳೆ ಬಾಂಗ್ಲಾದೇಶ (Bangladesh Cricket) ಎದುರು ವಿಂಡೀಸ್‌ ಮುಗ್ಗರಿಸಿದರೆ, ಬಹುತೇಕ ವಿಂಡೀಸ್‌ ತಂಡದ ಸೆಮೀಸ್‌ ಕನಸು ಭಗ್ನವಾಗಲಿದೆ.

click me!