ಭಾರತೀಯ ಕ್ರಿಕೆಟ್‌ ತಂಡ ಪಾಕ್‌ಗಿಂತ ಶ್ರೇಷ್ಠ: ನೆರೆ ರಾಷ್ಟ್ರ ಕಾಲೆಳೆದ ಮೋದಿ!

ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕಿಂತ ಶ್ರೇಷ್ಠ ಎಂದು ಹೇಳಿದ್ದಾರೆ. ಅಮೆರಿಕದ ಪಾಡ್‌ಕಾಸ್ಟರ್‌ ಲೆಕ್ಸ್‌ ಪ್ರೀಡ್‌ಮನ್‌ ಜೊತೆಗಿನ ಸಂವಾದದಲ್ಲಿ ಕ್ರೀಡೆಯ ಮಹತ್ವವನ್ನು ಅವರು ಒತ್ತಿ ಹೇಳಿದರು.

PM Narendra Modi takes indirect dig at Pakistan after team's poor show in Champions Trophy 2025 kvn

ನವದೆಹಲಿ: ಇತ್ತೀಚಿನ ಫಲಿತಾಂಶಗಳನ್ನು ಗಮನಿಸಿದರೆ ಭಾರತೀಯ ಕ್ರಿಕೆಟ್‌ ತಂಡ ಪಾಕಿಸ್ತಾನಕ್ಕಿಂತ ಶ್ರೇಷ್ಠ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಮೆರಿಕದ ಖ್ಯಾತ ಪಾಡ್‌ಕಾಸ್ಟರ್‌ ಲೆಕ್ಸ್‌ ಪ್ರೀಡ್‌ಮನ್‌ ಜೊತೆಗಿನ ಸಂವಾದದಲ್ಲಿ ಪ್ರಧಾನಿ ಮೋದಿ ಅವರು, ಭಾರತ ಹಾಗೂ ವಿಶ್ವದ ಕ್ರೀಡಾ ಬೆಳವಣಿಗೆ ಬಗ್ಗೆ ಮಾತನಾಡಿದರು. ಕ್ರಿಕೆಟ್‌ ಬಗ್ಗೆ ಮಾತನಾಡಲು ತಾವು ಸೂಕ್ತ ವ್ಯಕ್ತಿಯಲ್ಲ ಎಂದ ಹೊರತಾಗಿಯೂ, ಇತ್ತೀಚಿನ ದಿನಗಳಲ್ಲಿ ಗಮನಿಸಿದ ಫಲಿತಾಂಶಗಳನ್ನು ಆಧರಿಸಿ ಭಾರತೀಯ ಕ್ರಿಕೆಟ್‌ ಶ್ರೇಷ್ಠ ಎಂದಿದ್ದಾರೆ. ‘ಕ್ರೀಡೆ ಬಗ್ಗೆ ಮಾತನಾಡುವಷ್ಟು ಪರಿಣತ ವ್ಯಕ್ತಿ ನಾನಲ್ಲ. ಕ್ರಿಕೆಟ್‌ನ ತಂತ್ರಗಳ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ತಜ್ಞರೇ ಮಾತನಾಡುತ್ತಾರೆ. ಆದರೆ ಇತ್ತೀಚೆಗೆ ನಡೆದ ಭಾರತ-ಪಾಕಿಸ್ತಾನ ಪಂದ್ಯವನ್ನು ನೋಡಿ ಹೇಳುವುದಾದರೆ, ಯಾವ ತಂಡ ಶ್ರೇಷ್ಠ ಎಂಬುದು ನಮಗೆ ಗೊತ್ತಾಗುತ್ತದೆ’ ಎಂದಿದ್ದಾರೆ.

Latest Videos

ಐಪಿಎಲ್‌ನಲ್ಲಿ ಧೂಳೆಬ್ಬಿಸ್ತೇನೆ; ಉಳಿದ ತಂಡಗಳಿಗೆ ಕಾಶ್ಮೀರಿ ವೇಗಿ ಖಡಕ್ ವಾರ್ನಿಂಗ್!

ಕ್ರೀಡೆ ಇಡೀ ಜಗತ್ತಿಗೇ ಶಕ್ತಿ ತುಂಬುವ ಕೆಲಸ ಮಾಡುತ್ತದೆ. ಬೇರೆ ಬೇರೆ ದೇಶಗಳ ಜನರನ್ನು ಒಗ್ಗೂಡಿಸುವ ಕಲೆ ಕ್ರೀಡೆಗಿದೆ. ಹೀಗಾಗಿಯೇ ಕ್ರೀಡೆಗಳ ಬಗ್ಗೆ ಅನಗತ್ಯ ಹೇಳಿಕೆಗಳನ್ನು ಇಷ್ಟಪಡುವುದಿಲ್ಲ. ಮಾನವನ ವಿಕಾಸದಲ್ಲಿ ಕ್ರೀಡೆ ಮಹತ್ವದ ಪಾತ್ರ ಬಹಿಸುತ್ತದೆ. ಇದು ಬರೀ ಕ್ರೀಡೆಯಲ್ಲ, ಅದು ಮನುಷ್ಯರನ್ನು ಒಗ್ಗೂಡಿಸುತ್ತದೆ’ ಎಂದು ಹೇಳಿದರು.

ಅಂದು ಮರಡೋನಾ, ಇಂದು ಮೆಸ್ಸಿ ಹೀರೋ

ಪಾಡ್‌ಕಾಸ್ಟ್‌ನಲ್ಲಿ ತಮ್ಮ ನೆಚ್ಚಿನ ಫುಟ್ಬಾಲ್‌ ಆಟಗಾರ ಯಾರು ಎಂಬ ಪ್ರಶ್ನೆ ಪ್ರಧಾನಿ ಮೋದಿ ಅವರಿಗೆ ಎದುರಾಯಿತು. ಇದಕ್ಕೆ ಉತ್ತರಿಸಿದ ಅವರು, ‘1980ರ ದಶಕದಲ್ಲಿ ಯಾವಾಗಲೂ ಒಂದು ಹೆಸರು ಪ್ರತಿಧ್ವನಿಸುತ್ತಿತ್ತು. ಅದು ಮರಡೋನಾ. ಆ ಪೀಳಿಗೆಗೆ ಮರಡೋನಾ ನಿಜವಾದ ಹೀರೋ. ನೀವು ಇಂದಿನ ಪೀಳಿಗೆಯನ್ನು ಕೇಳಿದರೆ, ಅವರು ಲಿಯೋನೆಲ್ ಮೆಸ್ಸಿ ಹೆಸರು ಹೇಳುತ್ತಾರೆ’ ಎಂದು ಉತ್ತರಿಸಿದರು.

click me!