T20 world Cup: ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಕಾರಣವೇನು..?

Kannadaprabha News   | Asianet News
Published : Nov 02, 2021, 08:08 AM IST
T20 world Cup: ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಕಾರಣವೇನು..?

ಸಾರಾಂಶ

*ಐಪಿಎಲ್‌ ಮುಗಿದ ತಕ್ಷಣವೇ ಟಿ20 ವಿಶ್ವಕಪ್‌  *ಲೀಗ್‌ನಲ್ಲೇ ಹೊರಬೀಳೋ ಭೀತಿಯಲ್ಲಿ ಕೊಹ್ಲಿ ಪಡೆ *2009, 2010ರಲ್ಲೂ ಎದುರಾಗಿತ್ತು ಇದೇ ಸ್ಥಿತಿ

ದುಬೈ (ನ. 2) : ಟಿ20 ವಿಶ್ವಕಪ್‌ಗೂ (T20 World Cup)ಮುನ್ನ ಐಪಿಎಲ್‌ ನಡೆಸಿದರೆ ಭಾರತ ತಂಡಕ್ಕೆ ಲಾಭವಾಗಲಿದೆ. ಆಟಗಾರರು ಲಯ ಕಂಡುಕೊಳ್ಳಲಿದ್ದಾರೆ ಎನ್ನುವ ಕಲ್ಪನೆ ಇದೆ. ಆದರೆ ಇದು ಸುಳ್ಳು ಎನ್ನುತ್ತವೆ ಅಂಕಿ-ಅಂಶಗಳು. ಐಪಿಎಲ್‌ (IPL) ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್‌ ನಡೆದಾಗಲೆಲ್ಲಾ ಭಾರತ ತಂಡ ನಾಕೌಟ್‌ ಹಂತಕ್ಕೇರುವಲ್ಲಿ ವಿಫಲವಾಗಿದೆ.

ಸೇಮಿಸ್ ಕನಸು ಬಲುದೂರ ಎಂದ ಸೆಹ್ವಾಗ್ ಕೊಟ್ಟ ಅಂಕಿ ಅಂಶ

ಈ ಬಾರಿಯೂ ಐಪಿಎಲ್‌ ಅನುಭವ ಭಾರತ ತಂಡದ (Indian cricket Team) ಕೈಹಿಡಿಯುತ್ತಿಲ್ಲ. ತಂಡ ಲೀಗ್‌ನಲ್ಲೇ ಹೊರಬೀಳುವ ಪರಿಸ್ಥಿತಿ ತಂದುಕೊಂಡಿದೆ. ಈ ಹಿಂದೆ 2 ಬಾರಿ ಐಪಿಎಲ್‌ ಆವೃತ್ತಿ ಮುಗಿದ 10 ದಿನಗಳೊಳಗೆ ಟಿ20 ವಿಶ್ವಕಪ್‌ ನಡೆದಿತ್ತು. ಆ ಎರಡೂ ವರ್ಷವೂ ಭಾರತ ನಾಕೌಟ್‌ ಪ್ರವೇಶಿಸಲಿಲ್ಲ. ಐಪಿಎಲ್‌ ಟೂರ್ನಿಯಿಂದ ದಣಿದಿದ್ದ ಆಟಗಾರರು ಕಳಪೆ ಪ್ರದರ್ಶನ ತೋರಿದ್ದರು.

2009ರ ಟಿ20 ವಿಶ್ವಕಪ್‌

2009ರ ಮೇ 24ಕ್ಕೆ ಐಪಿಎಲ್‌ ಮುಕ್ತಾಯಗೊಂಡಿತ್ತು. ಜೂ.5ರಿಂದ ಇಂಗ್ಲೆಂಡ್‌ನಲ್ಲಿ (England) ಟಿ20 ವಿಶ್ವಕಪ್‌ ಆರಂಭಗೊಂಡಿತ್ತು. ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ ಭಾರತ ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದಿತ್ತು. ಒಂದು ಐರ್ಲೆಂಡ್‌ (Ireland) ವಿರುದ್ಧ ಮತ್ತೊಂದು ಬಾಂಗ್ಲಾದೇಶ (Bangladesh) ವಿರುದ್ಧ. ಸೂಪರ್‌ 8 ಹಂತದಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಭಾರತ ಪರಾಭವಗೊಂಡಿತ್ತು. ವೆಸ್ಟ್‌ಇಂಡೀಸ್‌, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ವಿರುದ್ಧ ಸೋತು ಹೊರಬಿದ್ದಿತ್ತು.

ಅನುಮಾನ ಬೇಡ, ಈಗಲೂ ಇದೆ ಟೀಂ ಇಂಡಿಯಾಗೆ ಸೆಮೀಸ್‌ಗೇರುವ ಅವಕಾಶ..!

2010ರ ಟಿ20 ವಿಶ್ವಕಪ್‌

2010ರಲ್ಲಿ ಏ.25ರಂದು ಐಪಿಎಲ್‌ ಮುಕ್ತಾಯಗೊಂಡಿತ್ತು. ಏ.30ರಿಂದ ವೆಸ್ಟ್‌ಇಂಡೀಸ್‌ನಲ್ಲಿ (West Indies) ಟಿ20 ವಿಶ್ವಕಪ್‌ ಆರಂಭಗೊಂಡಿತ್ತು. ಈ ಆವೃತ್ತಿಯಲ್ಲೂ ಮೊದಲ ಸುತ್ತಿನಲ್ಲಿ ಭಾರತ 2 ಪಂದ್ಯ ಗೆದ್ದಿತ್ತು. ಒಂದು ಅಫ್ಘಾನಿಸ್ತಾನ (Afghanistan) ವಿರುದ್ಧ ಮತ್ತೊಂದು ದಕ್ಷಿಣ ಆಫ್ರಿಕಾ (South Africa) ವಿರುದ್ಧ. ಸೂಪರ್‌ 8 ಹಂತದಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಕ್ರಮವಾಗಿ ಆಸ್ಪ್ರೇಲಿಯಾ, ವೆಸ್ಟ್‌ಇಂಡೀಸ್‌ ಹಾಗೂ ಶ್ರೀಲಂಕಾ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.

IPL Auction: BCCI ನಿಂದ ಐಪಿಎಲ್ ಹರಾಜಿನ ಅಧಿಕೃತ ರೂಲ್ಸ್‌ ಪ್ರಕಟ..!

2021ರ ಟಿ20 ವಿಶ್ವಕಪ್‌

ಈ ಸಲ ಅ.15ಕ್ಕೆ ಐಪಿಎಲ್‌ ಮುಕ್ತಾಯಗೊಂಡಿತು. ಅ.23ಕ್ಕೆ ವಿಶ್ವಕಪ್‌ ಪ್ರಧಾನ ಸುತ್ತು ಆರಂಭಗೊಂಡಿತು. ಐಪಿಎಲ್‌ನಿಂದ ದಣಿದಿದ್ದ ಭಾರತ ತಂಡ, ಸೂಪರ್‌-12 ಹಂತದಲ್ಲೇ ಹೊರಬೀಳುವ ಭೀತಿಗೆ ಸಿಲುಕಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ (Pakistan) ವಿರುದ್ಧ ಸೋತಿದ್ದ ಭಾರತ, 2ನೇ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ (New Zealand) ಶರಣಾಯಿತು. ಇನ್ನುಳಿದ 3 ಪಂದ್ಯಗಳಲ್ಲಿ ದೊಡ್ಡ ಅಂತರದಲ್ಲಿ ಗೆದ್ದು, ನ್ಯೂಜಿಲೆಂಡ್‌ ಪಂದ್ಯ ಸೋಲುವ ಜೊತೆಗೆ ನೆಟ್‌ ರನ್‌ರೇಟ್‌ (Net Run Rate) ಲೆಕ್ಕಾಚಾರ ಕೈಹಿಡಿದರೆ ಭಾರತ ಸೆಮೀಸ್‌ಗೇರುವ ಅವಕಾಶ ಇರಲಿದೆ.

9 ತಿಂಗಳ ವಿರಾಟ್‌ ಮಗಳು ವಮಿಕಾಗೆ ಅತ್ಯಾಚಾರದ ಬೆದರಿಕೆ..! ಇದೇನಾ ಸಂಸ್ಕೃತಿ..?

ಸೆಮಿಫೈನಲ್ ಎಂಟ್ರಿ ಬಹುತೇಕ ಖಚಿತಪಡಿಸಿದ ಇಂಗ್ಲೆಂಡ್!

T20 World Cup 2021 ಟೂರ್ನಿಯಲ್ಲಿ ಇಂಗ್ಲೆಂಡ್(England) ಮೊದಲ ತಂಡವಾಗಿ ಸೆಮಿಫೈನಲ್ (Semifinal) ಪ್ರವೇಶವನ್ನು ಖಚಿತಪಡಿಸಿದೆ. ಜೋಸ್ ಬಟ್ಲರ್(Jos buttler) ಆಕರ್ಷಕ ಶತಕ ಹಾಗೂ ಬೌಲರ್‌ಗಳ ಅದ್ಭುತ ಪ್ರದರ್ಶನದಿಂದ ಇಂಗ್ಲೆಂಡ್, ಶ್ರೀಲಂಕಾ(Sri Lanka) ವಿರುದ್ಧ ರನ್ ಗೆಲುವು ದಾಖಲಿಸಿದೆ. ಸತತ 4 ಗೆಲುವು ದಾಖಲಿಸಿದ ಇಂಗ್ಲೆಂಡ್ ನೇರವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚೇರ್ ಮೇಲೆ ಕೂತು ಹೋಮ ಹವನ ಮಾಡಿದ ಶ್ರೇಯಸ್ ಅಯ್ಯರ್, ಸನಾತನಿಯೋ, ಅಲ್ವೋ ಚರ್ಚೆ!
ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?