ಪಿಂಕ್ ಬಾಲ್ ಟೆಸ್ಟ್; ಸಂಕಷ್ಟದಲ್ಲಿರುವ ಬಾಂಗ್ಲಾಗೆ ರಹೀಮ್-ಮೊಹಮ್ಮದುಲ್ಲಾ ಆಸರೆ!

By Chethan KumarFirst Published Nov 23, 2019, 7:25 PM IST
Highlights

ಪಿಂಕ್ ಬಾಲ್ ಟೆಸ್ಟ್ ಪಂದ್ಯದ 2ನೇ ದಿನ ಬಾಂಗ್ಲಾದೇಶ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. 2ನೇ ಇನಿಂಗ್ಸ್ ಆರಂಭಿಸಿರು ಬಾಂಗ್ಲಾ, ಮತ್ತೆ ಟೀಂ ಇಂಡಿಯಾ ದಾಳಿಗೆ ತತ್ತರಿಸಿದೆ. 

ಕೋಲ್ಕತಾ(ನ.23): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯ ವೀಕ್ಷಿಸಲು ಕಾತರಗೊಂಡಿರುವ ಅಭಿಮಾನಿಗಲಿಗೆ ನಿರಾಸೆಯಾಗುವು ಸಾಧ್ಯತೆಗಳಿವೆ. ಕಾರಣ 5 ದಿನದ ಪಂದ್ಯ ಎರಡೇ ದಿನಕ್ಕೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿದೆ. ಭಾರಿ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿರುವ ಬಾಂಗ್ಲಾದೇಶ ಆರಂಭದಲ್ಲೇ 4 ವಿಕೆಟ್ ಕಳದುಕೊಂಡಿದೆ.

ಇದನ್ನೂ ಓದಿ: ಪಿಂಕ್ ಬಾಲ್ ಟೆಸ್ಟ್: ಟೀಂ ಇಂಡಿಯಾ ಮೊದಲ ಇನಿಂಗ್ಸ್ ಡಿಕ್ಲೇರ್, ಭರ್ಜರಿ ಮುನ್ನಡೆ

ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 347 ರನ್ ಸಿಡಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ 241 ರನ್ ಮುನ್ನಡೆ ಪಡೆಯಿತು. ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಬಾಂಗ್ಲಾದೇಶ 2ನೇ ಇನಿಂಗ್ಸ್‌ನಲ್ಲೂ ಚೇತರಿಸಿಕೊಳ್ಳಲಿಲ್ಲ. ಬಾಂಗ್ಲಾದೇಶ ಖಾತೆ ತೆರೆಯುವ ಮೊದಲೇ ಶದ್ಮನ್ ಇಸ್ಲಾಂ ವಿಕೆಟ್ ಪತನಗೊಂಡಿತು.

ಇದನ್ನೂ ಓದಿ: ಸೆಂಚುರಿ ಸಿಡಿಸಿ ಪಾಂಟಿಂಗ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!

ಶದ್ಮನ್ ಶೂನ್ಯ ಸುತ್ತಿದರೆ, ಇಮ್ರುಲ್ ಕೈಸ್ 5 ರನ್ ಸಿಡಿಸಿ ಔಟಾದರು. ನಾಯಕ ಮೊಮಿನಲ್ ಹಕ್ ಡಕೌಟ್ ಆದರು. ಮೊಹಮ್ಮದ್ ಮಿಥುನ್ 6 ರನ್ ಸಿಡಿಸಿ ನಿರ್ಗಮಿಸಿದರು. ಕೇವಲ 13 ರನ್‌ಗೆ ಬಾಂಗ್ಲಾದೇಶ 4 ವಿಕೆಟ್ ಕಳೆದುಕೊಂಡಿತು. ಆದರೆ ಮುಶ್ಫಿಕರ್ ರಹೀಮ್ ಹಾಗೂ ಮೊಹಮ್ಮದುಲ್ಲಾ ಹೋರಾಟದಿಂದ ಬಾಂಗ್ಲಾ ದಿಢೀರ್ ವಿಕೆಟ್ ಪತನಕ್ಕೆ ಬ್ರೇಕ್ ಬಿದ್ದಿದೆ. ಆದರೆ ಪಂದ್ಯ ಉಳಿಸಿಕೊಳ್ಳುವುದು ಸಾಧ್ಯವಿಲ್ಲ. ಕನಿಷ್ಠ ಪಂದ್ಯವನ್ನು ಮೂರನೇ ದಿನಕ್ಕೆ ಕೊಂಡೊಯ್ಯವ ಸಾಧ್ಯತೆಗಳು ಮಾತ್ರ ಬಾಂಗ್ಲಾಗೆ ಉಳಿದಿದೆ.

click me!