ಆ ದಿನಗಳನ್ನು ನೆನಪಿಸಿದ ಜಹೀರ್ ಖಾನ್ ಯಾರ್ಕರ್..!

By Web DeskFirst Published Nov 23, 2019, 4:13 PM IST
Highlights

ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಟಿ10 ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಚುಟುಕು ಕ್ರಿಕೆಟ್‌ನಲ್ಲಿ ಕಮಾಲ್ ಮಾಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಅಬುದಾಬಿ[ನ.23]: ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ವೇಗದ ಬೌಲರ್’ಗಳಲ್ಲಿ ಒಬ್ಬರೆನಿಸಿರುವ ಜಹೀರ್ ಖಾನ್, ಇದೀಗ ಅಬುದಾಬಿ ಟಿ10 ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ನಿವೃತ್ತಿಯಾಗಿ ವರ್ಷಗಳೇ ಕಳೆದರು ತಮ್ಮ ಮೊನಚಿನ ದಾಳಿಯನ್ನು ಉಳಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ಪ್ರಿಂಟೌಟ್ ಇಲ್ಲದ ಕಾರಣ ಪಂದ್ಯ ರದ್ದು; ಕ್ರಿಕೆಟ್ ಇತಿಹಾಸದಲ್ಲೇ ಮೊದಲು!

ಹೌದು, ಅಬುದಾಬಿ ಟಿ10 ಲೀಗ್’ನಲ್ಲಿ ಡೆಲ್ಲಿ ಬುಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ 41 ವರ್ಷದ ಜಹೀರ್ ಖಾನ್, ಖಲಂದರಸ್ ತಂಡದ ವಿರುದ್ಧ ಆಕ್ರಮಣಕಾರಿ ಬೌಲಿಂಗ್ ನಡೆಸಿ ಎರಡು ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ತಮ್ಮ ಕರಾರುವಕ್ಕಾದ ದಾಳಿಗೆ ಹೆಸರುವಾಸಿಯಾಗಿದ್ದ ಜಹೀರ್ ಖಾನ್, ಮತ್ತೊಮ್ಮೆ ಆ ದಿನಗಳನ್ನು ನೆನಪಿಸುವಂತ ಬೌಲಿಂಗ್ ದಾಳಿಯನ್ನು ಸಂಘಟಿಸಿದ್ದಾರೆ. ಎರಡು ಓವರ್ ಮಾಡಿದ ಜಹೀರ್ ಖಾನ್ ಕೇವಲ 8 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಹೇಳಿ-ಕೇಳಿ ಟಿ10 ಲೀಗ್ ಎಂದರೆ ಅಲ್ಲಿ ಬ್ಯಾಟ್ಸ್’ಮನ್’ಗಳದ್ದೇ ಅಬ್ಬರವಿರುತ್ತದೆ. ಇಷ್ಟಾಗಿಯೂ ಜಹೀರ್ 5 ಚುಕ್ಕೆ ಎಸೆತ ಹಾಕುವಲ್ಲಿ ಯಶಸ್ವಿಯಾಗಿದ್ದರು. ಇದರೊಂದಿಗೆ ವಯಸ್ಸು ಕೇವಲ ಸಂಖ್ಯೆಯಷ್ಟೇ ಎನ್ನುವುದನ್ನು ಜ್ಯಾಕ್ ಸಾಬೀತು ಮಾಡಿದ್ದಾರೆ.

ಹೀಗಿತ್ತು ನೋಡಿ ಜಹೀರ್ ಪಡೆದ ಆ ಎರಡು ವಿಕೆಟ್ ಗಳು:

ಜಹೀರ್ ಖಾನ್ ಮಾರಕ ದಾಳಿಯ ಹೊರತಾಗಿಯೂ ಡೆಲ್ಲಿ ಬುಲ್ಸ್ ತಂಡದ ವಿರುದ್ಧ ಖಲಂದರಸ್ ತಂಡ 3 ವಿಕೆಟ್’ಗಳ ಜಯ ಸಾಧಿಸಿತು. 
 

click me!