
ಕೋಲ್ಕತಾ(ನ.22): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್‌ಗೆ ಅದ್ದೂರಿ ಚಾಲನೆ ಸಿಕ್ಕಿದೆ. ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸಿನಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಸೇರಿದಂತೆ ಹಲವು ಗಣ್ಯರು ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಸಾಕ್ಷಿಯಾಗಿದ್ದಾರೆ. ಈ ಮಹತ್ವದ ಪಂದ್ಯದ ಮೊದಲ ದಿನವೇ ಭಾರತಕ್ಕೆ ಮೇಲಗೈ ಸಿಕ್ಕಿದೆ. ಬಾಂಗ್ಲಾ ತಂಡ ಪ್ರಮುಖ 6 ವಿಕೆಟ್ ಕಬಳಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ.
ಇದನ್ನೂ ಓದಿ: ವಿಂಡೀಸ್ ಸರಣಿಗೆ ಭಾರತ ತಂಡ ಪ್ರಕಟ; ಇಬ್ಬರು ಕನ್ನಡಿಗರಿಗೆ ಚಾನ್ಸ್!
ಇದೇ ಮೊದಲ ಬಾರಿಗೆ ಆಯೋಜಿಸಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಟಾಸ್ ಗೆಲ್ಲೋ ಅದೃಷ್ಠ ಇರಲಿಲ್ಲ. ಬಾಂಗ್ಲಾ ತಂಡ ಬ್ಯಾಟಿಂಗ್ ಆಯ್ಕೆಮಾಡಿಕೊಂಡು, ಬೃಹತ್ ಮೊತ್ತ ಪೇರಿಸೋ ಲೆಕ್ಕಾಚಾರದಲ್ಲಿತ್ತು. ಆದರೆ ಟೀಂ ಇಂಡಿಯಾ ವೇಗಿಗಳ ದಾಳಿಗೆ ಸಿಲುಕಿದ ಬಾಂಗ್ಲಾ, ವಿಕೆಟ್ ಉಳಿಸಿಕೊಳ್ಳು ಪರದಾಡಿತು.
ಇದನ್ನೂ ಓದಿ: 762 ರನ್ ಟಾರ್ಗೆಟ್; ಗುರಿ ಬೆನ್ನಟ್ಟಿದ ತಂಡ ಕೇವಲ 7 ರನ್‌ಗೆ ಆಲೌಟ್!
ಇಮ್ರುಲ್ ಕೈಸ್ 4 ರನ್ ಸಿಡಿಸಿದರೆ, ನಾಯಕ ಮೊಮಿನಲ್ ಹಕ್, ಮೊಹಮ್ಮದ್ ಮಿಥುನ್, ಮುಶ್ಫಿಕರ್ ರಹೀಮ್ ಡೌಕೌಟ್ ಆದರು. ಆರಂಭಿಕ ಶದ್ಮನ್ ಇಸ್ಲಾಂ ತಿರುಗೇಟು ನೀಡೋ ಪ್ರಯತ್ನ ಮಾಡಿದರು. ಆದರೆ ಶದ್ಮನ್ ಹೋರಾಟ 29 ರನ್‌ಗಳಿಗೆ ಅಂತ್ಯವಾಯಿತು. ಲಿಟ್ಟನ್ ದಾಸ್ ಅಜೇಯ 24 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭೋಜನ ವಿರಾಮದ ವೇಳೆ ಬಾಂಗ್ಲಾದೇಶ 6 ವಿಕೆಟ್ ನಷ್ಟಕ್ಕೆ 73 ರನ್ ಸಿಡಿಸಿದೆ.
ಭಾರತದ ಪರ ಉಮೇಶ್ ಯಾದವ್ 3, ಇಶಾಂತ್ ಶರ್ಮಾ 2 ಹಾಗೂ ಮೊಹಮ್ಮದ್ ಶಮಿ 1 ವಿಕೆಟ್ ಕಬಳಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.