
ಕೋಲ್ಕತಾ[ನ.22]: ಟೀಂ ಇಂಡಿಯಾ ವೇಗಿಗಳ ಮಾರಕ ದಾಳಿಗೆ ತತ್ತರಿಸಿರುವ ಬಾಂಗ್ಲಾದೇಶ ತಂಡ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಕೇವಲ 12 ಓವರ್ ಮುಗಿಯುವುದರೊಳಗಾಗಿ 38 ರನ್’ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಉಮೇಶ್ ಯಾದವ್ ಒಂದೇ ಓವರ್’ನಲ್ಲಿ 2 ವಿಕೆಟ್ ಪಡೆದರೆ, ಇಶಾಂತ್ ಹಾಗೂ ಶಮಿ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
ಡೇ & ನೈಟ್ ಟೆಸ್ಟ್: ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ
ಹೌದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ಆರಂಭಿಕ ಆಘಾತ ಅನುಭವಿಸಿದೆ. 7ನೇ ಓವರ್’ನಲ್ಲಿ ಇಶಾಂತ್ ಶರ್ಮಾ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. 4 ರನ್ ಬಾರಿಸಿದ್ದ ಇಮ್ರಲ್ ಕಯೀಸ್ ಅವರನ್ನು ಎಲ್ ಬಿ ಬಲೆಗೆ ಕೆಡುವುದಕ್ಕೆ ಇಶಾಂತ್ ಯಶಸ್ವಿಯಾದರು. ಇದಾದ ಬಳಿಕ 11ನೇ ಓವರ್ ದಾಳಿಗಿಳಿದ ಉಮೇಶ್ ಯಾದವ್ ಒಂದೇ ಓವರ್’ನಲ್ಲಿ 2 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಮೊದಲ ಎಸೆತದಲ್ಲಿ ನಾಯಕ ಮೊಮಿನುಲ್ ಹಕ್ ಬ್ಯಾಟ್ ಸವರಿದ ಚೆಂಡು ರೋಹಿತ್ ಶರ್ಮಾ ಹಿಡಿದ ಅಧ್ಭುತ ಕ್ಯಾಚ್’ಗೆ ಪೆವಿಲಿಯನ್ ಸೇರಬೇಕಾಯಿತು. ಆ ನಂತರ ಮೂರನೇ ಎಸೆತದಲ್ಲಿ ಮೊಹಮ್ಮದ್ ಮಿಥುನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಪ್ರವಾಸಿಗರಿಗೆ ಎರಡೆರಡು ಆಘಾತ ನೀಡಿದರು. ಇದಾದ ಬಳಿಕ ಮೊಹಮ್ಮದ್ ಶಮಿ ಬಾಂಗ್ಲಾ ಅನುಭವಿ ಕ್ರಿಕೆಟಿಗ ಮುಷ್ಫೀಕುರ್ ರಹೀಮ್ ಅವರನ್ನು ಬೌಲ್ಡ್ ಮಾಡುವ ಮೂಲಕ ಮತ್ತೊಂದು ಹೊಡೆತ ನೀಡಿದರು. ಇನ್ನು 15ನೇ ಓವರ್‌ನಲ್ಲಿ ಶಾದಮನ್ ಇಸ್ಲಾಂ ಅವರನ್ನು ಬಲಿ ಪಡೆಯುವಲ್ಲಿ ಉಮೇಶ್ ಯಶಸ್ವಿಯಾಗಿದ್ದಾರೆ.
ನೀವೂ ಸಂಜು ಬ್ಯಾಟಿಂಗ್ ಪರೀಕ್ಷಿಸುತ್ತಿದ್ದಿರೋ ಇಲ್ಲಾ ಹೃದಯವನ್ನೋ..?
ಚೊಚ್ಚಲ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಈಡನ್ ಗಾರ್ಡನ್ಸ್ ಮೈದಾನದಲ್ಲಿ ಜಮೆಯಾಗಿದ್ದು, ಟೀಂ ಇಂಡಿಯಾಗೆ ಮತ್ತಷ್ಟು ಹುರುಪು ತುಂಬುತ್ತಿದ್ದಾರೆ. ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಟೀಂ ಇಂಡಿಯಾ ದಿಗ್ಗಜರಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಸೇರಿದಂತೆ ಹಲವು ಪ್ರಮುಖರು ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.