ಮೀಟಿಂಗ್‌ಗೆ ಚಕ್ಕರ್, ಕಮೆಂಟರಿಗೆ ಹಾಜರ್; ಗಂಭೀರ್ ಕಾಲೆಳೆದ ಫ್ಯಾನ್ಸ್!

Published : Nov 15, 2019, 03:21 PM IST
ಮೀಟಿಂಗ್‌ಗೆ ಚಕ್ಕರ್, ಕಮೆಂಟರಿಗೆ ಹಾಜರ್; ಗಂಭೀರ್ ಕಾಲೆಳೆದ ಫ್ಯಾನ್ಸ್!

ಸಾರಾಂಶ

ಸಂಸದ ಗೌತಮ್ ಗಂಭೀರ್ ಪ್ರತಿ ಬಾರಿ ಟ್ವೀಟ್ ಮೂಲಕ ಇತರರನ್ನು ಟೀಕಿಸುತ್ತಿದ್ದರು. ಇದೀಗ ಸ್ವತಃ  ಗೌತಮ್ ಗಂಭೀರ್ ಅಭಿಮಾನಿಗಳ ಕಂಗಣ್ಣಿಗೆ ಗುರಿಯಾಗಿದ್ದಾರೆ.

ಇಂದೋರ್(ನ.15): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್, ದೆಹಲಿ ಮಾಲಿನ್ಯ ಹಾಗೂ ಆಮ್ ಆದ್ಮಿ ಕೈಗೊಂಡ ನಿರ್ಣಗಳ ಕುರಿತು ಸರಣಿ ಟ್ವೀಟ್ ಮಾಡಿ ಕುಟುಕಿದ್ದರು. ಇದೀಗ ಇದೇ ದೆಹಲಿ ಮಾಲಿನ್ಯ ನಿಯಂತ್ರಣ ಕುರಿತ ಮೀಟಿಂಗ್‌ ತೆರಳದೇ, ಇಂದೋರ್ ಟೆಸ್ಟ್ ಪಂದ್ಯದ 2ನೇ ವೀಕ್ಷಕ  ವಿವರಣೆಗೆ ಹಾಜರಾಗೋ ಮೂಲಕ ಅಭಿಮಾನಿಗಳ ಕೆಂಗಣ್ಣಿಗ ಗುರಿಯಾಗಿದ್ದಾರೆ.

ಇದನ್ನೂ ಓದಿ: ಇಂದೋರ್ ಟೆಸ್ಟ್: ಮಯಾಂಕ್ ಅಗರ್‌ವಾಲ್ ಖಾತೆಗೆ ಮತ್ತೊಂದು ಶತಕ

ಸಂಸತ್ತಿನ ನಗರಾಭಿವೃದ್ದಿ ಸಮಿತಿ ಮಾಲಿನ್ಯ ನಿಯಂತ್ರಣದ ಕುರಿತು ಮಹತ್ವದ ಮೀಟಿಂಗ್  ಕರೆದಿತ್ತು. ಪೂರ್ವ ದೆಹಲಿ ಕ್ಷೇತ್ರದಿಂದ ಆಯ್ಕೆಯಾಗಿರುವ ಗೌತಮ್ ಗಂಭೀರ್ ಕೂಡ ಈ ಸಭೆಗೆ ಹಾಜರಾಗಬೇಕಿತ್ತು. ಆದರೆ ಗಂಭೀರ್ ಮೀಟಿಂಗ್ ಹಾಜರಾಗದೇ, ಇಂದೋರ್‌ನಲ್ಲಿ ನಡೆಯುಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದ ವೀಕ್ಷಕ ವಿವರಣೆಗೆ ತೆರಳಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ನೆಟ್ಸ್‌ನಲ್ಲಿ ರವಿ ಶಾಸ್ತ್ರಿ ಬೌಲ್, ನೆಟ್ಟಿಗರಿಂದ ಟ್ರೋಲ್!

ಗಂಭೀರ್ ನಡೆಗೆ ವಿರೋಧ ವ್ಯಕ್ತವಾಗಿದೆ. ಕ್ರಿಕೆಟ್ ಬಗ್ಗೆ ಇರುವ ಕಾಳದಿ ಮೆಚ್ಚುಗೆ ಇದೆ. ಆದರೆ ಸಂಸದನಾಗಿ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಸಭೆಯಲ್ಲಿ ಹಾಜರಾಗದೆ ಕಮೆಂಟರಿಯತ್ತ ತೆರಳಿದ್ದು ಎಷ್ಟು ಸರಿ, ಕಮೆಂಟರಿ ಮುಖ್ಯವಾಗಿದ್ದರೆ, ಚುನಾವಣೆಯಲ್ಲಿ ಸ್ಪರ್ಧಿಸಿದ್ದೇಕೆ? ದೆಹಲಿ ಜನ, ನಿಮ್ಮನ್ನು ಕಮೆಂಟರಿಗೆ ಮಾಡಲು ಆಯ್ಕೆ ಮಾಡಿಲ್ಲ ಎಂದು ಟ್ವಿಟರ್ ಮೂಲಕ ಗಂಭೀರ್‌ಗೆ ತಿರುಗೇಟು ನೀಡಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌