ದಶ​ಕದ ಬಳಿಕ ಪಾಕ್‌ಗೆ ಟೆಸ್ಟ್‌ ಕ್ರಿಕೆಟ್‌ ವಾಪಸ್‌!

Published : Nov 15, 2019, 03:05 PM IST
ದಶ​ಕದ ಬಳಿಕ ಪಾಕ್‌ಗೆ ಟೆಸ್ಟ್‌ ಕ್ರಿಕೆಟ್‌ ವಾಪಸ್‌!

ಸಾರಾಂಶ

ಬರೋಬ್ಬರಿ ಒಂದು ದಶಕದ ಬಳಿಕ ಶ್ರೀಲಂಕಾ ತಂಡವು ಪಾಕಿಸ್ತಾನದಲ್ಲಿ ಟೆಸ್ಟ್ ಪಂದ್ಯವನ್ನಾಡಲು ರೆಡಿಯಾಗಿದೆ. 2009ರಲ್ಲಿ ಲಂಕಾ ತಂಡದ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕ ಯಾವೊಂದು ತಂಡವು ಟೆಸ್ಟ್ ಆಡಲು ಪಾಕ್ ಪ್ರವಾಸ ಕೈಗೊಂಡಿರಲಿಲ್ಲ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ಲಾಹೋರ್‌(ನ.15): ದಶ​ಕಕ್ಕೂ ಹೆಚ್ಚು ಸಮ​ಯದ ಬಳಿಕ ಪಾಕಿ​ಸ್ತಾ​ನಕ್ಕೆ ಟೆಸ್ಟ್‌ ಕ್ರಿಕೆಟ್‌ ವಾಪ​ಸಾ​ಗ​ಲಿದೆ. ಮುಂದಿನ ತಿಂಗಳು ಪಾಕಿ​ಸ್ತಾನ ಪ್ರವಾಸ ಕೈಗೊ​ಳ್ಳು​ವು​ದಾಗಿ ಶ್ರೀಲಂಕಾ ಖಚಿತಪಡಿ​ಸಿದೆ. 

ಡೇವಿಸ್ ಕಪ್: ಪಾಕ್‌ ವಿರುದ್ಧ ಪಂದ್ಯಕ್ಕೆ ಭಾರತ ತಂಡ ಪ್ರಕಟ

ಸದ್ಯ ಚಾಲ್ತಿಯ​ಲ್ಲಿ​ರುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿ​ಯನ್‌ಶಿಪ್‌ ವ್ಯಾಪ್ತಿಗೆ ಸರಣಿ ಸೇರ​ಲಿದೆ. 2 ಪಂದ್ಯ​ಗಳ ಟೆಸ್ಟ್‌ ಸರ​ಣಿ​ಯ​ನ್ನು ಆಡಲು ಲಂಕಾ ತಂಡ ತೆರ​ಳ​ಲಿದ್ದು ಮೊದಲ ಪಂದ್ಯ ಡಿ.11ರಿಂದ 15ರ ವರೆಗೂ ರಾವ​ಲ್ಪಿಂಡಿ​ಯಲ್ಲಿ ನಡೆ​ಯ​ಲಿದೆ. ಡಿ.19ರಿಂದ 23ರ ವರೆಗೂ ಕರಾ​ಚಿ​ಯಲ್ಲಿ 2ನೇ ಪಂದ್ಯ ನಿಗ​ದಿ​ಯಾ​ಗಿದೆ. 

ವಾರ್ನರ್ ಗುಡುಗು: ಲಂಕಾ ಎದುರು ಆಸಿಸ್ T20 ಸರಣಿ ಕ್ಲೀನ್ ಸ್ವೀಪ್

ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಲಂಕಾ ತಂಡ ಪಾಕಿ​ಸ್ತಾ​ನ​ದಲ್ಲಿ ದ್ವಿಪ​ಕ್ಷೀಯ ಏಕ​ದಿ​ನ ಹಾಗೂ ಟಿ20 ಸರ​ಣಿ​ಯನ್ನು ಆಡಿತ್ತು. ಪ್ರಮುಖ 10 ಆಟ​ಗಾ​ರರು ಪ್ರವಾಸಕ್ಕೆ ಗೈರಾ​ಗಿ​ದ್ದರು. 2009ರಲ್ಲಿ ಶ್ರೀಲಂಕಾ ತಂಡ ಪಾಕಿ​ಸ್ತಾನ ಪ್ರವಾಸದಲ್ಲಿದ್ದ ವೇಳೆ ಆಟ​ಗಾ​ರರ ಮೇಲೆ ಭಯೋ​ತ್ಪಾ​ದ​ಕರು ದಾಳಿ ನಡೆ​ಸಿ​ದ್ದರು. ಆ ಬಳಿಕ ಯಾವುದೇ ತಂಡ ಟೆಸ್ಟ್‌ ಆಡಲು ಪಾಕಿ​ಸ್ತಾ​ನಕ್ಕೆ ತೆರ​ಳಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ