
ಕರಾಚಿ (ಡಿ. 25): ಪಾಕಿಸ್ತಾನದ (Pakistan) ದೇಶೀಯ ಕ್ರಿಕೆಟ್ ನ ಮಹತ್ವದ ಟೂರ್ನಿ ಕ್ವೈದ್-ಇ-ಅಜಮ್ ಟ್ರೋಫಿಯ (Quaid-e-Azam Trophy ) ಫೈನಲಿಸ್ಟ್ ತಂಡಗಳಿಗೆ ಕನಿಷ್ಠ ಹೋಟೆಲ್ ವ್ಯವಸ್ಥೆಯನ್ನು ಸೂಕ್ತವಾಗಿ ಮಾಡಲಾಗದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board ) ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಟೀಕಾ ಪ್ರಹಾರ ವ್ಯಕ್ತವಾಗಿದೆ. ಸ್ಥಳೀಯ ಪಂಚತಾರಾ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡದ ಹಿನ್ನೆಲೆಯಲ್ಲಿ ಅಲ್ಲಿನ ಹೋಟೆಲ್ ಮ್ಯಾನೇಜ್ ಮೆಂಟ್ ನಡು ರಾತ್ರಿ ಫೈನಲಿಸ್ಟ್ ತಂಡಗಳ ಕ್ರಿಕೆಟಿಗರ ಬ್ಯಾಗ್ ಹಾಗೂ ಕಿಟ್ ಗಳನ್ನು ಎತ್ತಿ ರಸ್ತೆಗೆ ಹಾಕಿದೆ. ಈ ಕುರಿತಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲಿಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಚೇರ್ಮನ್ ಹಾಗೂ ಮಾಜಿ ಆಟಗಾರ ರಮೀಜ್ ರಾಜಾ (Pakistan Cricket Board Chairman Ramiz Raja) ತನಿಖೆಗೆ ಆದೇಶಿಸಿದ್ದಾರೆ.
ಒಟ್ಟಿನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಈ ಘಟನೆ ಸಂಭವಿಸಿದೆ. ಫೈನಲ್ ಹಂತಕ್ಕೆರಿದ್ದ ಖೈಬರ್ ಪಕ್ತುಂಕ್ವಾ (Khyber Pakhtunkhwa)ಹಾಗೂ ನಾರ್ದರ್ನ್ (Northern) ತಂಡಗಳ ಕ್ರಿಕೆಟಿಗರು ಮಾತ್ರವಲ್ಲ, ಕೋಚ್ ಮತ್ತು ಸಿಬ್ಬಂದಿಯನ್ನೂ ಹೋಟೆಲ್ ನಿಂದ ಹೊರಹಾಕಲಾಗಿದೆ. ಜಿಯೋ ಸೂಪರ್ ವರದಿಯ ಪ್ರಕಾರ, ಪಿಸಿಬಿ ಡಿಸೆಂಬರ್ 22 ರವರೆಗೆ ಕ್ಲಬ್ ರೋಡ್ ನಲ್ಲಿದ್ದ ಪಂಚತಾರಾ ಹೋಟೆಲ್ ನಲ್ಲಿ ರೂಮ್ ಗಳನ್ನು ಬುಕ್ ಮಾಡಿತ್ತು. ಆದರೆ, ಫೈನಲಿಸ್ಟ್ ತಂಡಗಳಿಗೆ ಮುಂಗಡವಾಗಿ ಬುಕ್ಕಿಂಗ್ ಮಾಡಿರಲಿಲ್ಲ.
ಇನ್ನೊಂದು ವರರದಿಯ ಪ್ರಕಾರ, ಹೋಟೆಲ್ ಮ್ಯಾನೇಜ್ ಮೆಂಟ್ ಗೆ ಮಾಹಿತಿ ನೀಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎರಡೂ ತಂಡಗಳ ಗರಿಷ್ಠ ಪ್ರಮಾಣದ ಆಟಗಾರರು ಹೋಟೆಲ್ ಗೆ ಬರಲಿದ್ದಾರೆ. ಈಗಾಗಲೇ ಡಿಸೆಂಬರ್ 22 ರಂದು ಮಾಡಿರುವ ಮುಂಗಡ ಬುಕ್ಕಿಂಗ್ ಅನ್ನು ರದ್ದು ಮಾಡಿದರೆ ಮಾತ್ರವೇ ಹೊಸ ಬುಕ್ಕಿಂಗ್ ಮಾಡುವುದಾಗಿ ತಿಳಿಸಿತ್ತು. ಆ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಹೋಟೆಲ್ ಮ್ಯಾನೇಜ್ ಮೆಂಟ್ ನಡುವೆ ಯಾವುದೇ ಮಾತುಕತೆಗಳು ನಡೆದಿರಲಿಲ್ಲ. ಪಿಸಿಬಿಯಲ್ಲಿ ಹೋಟೆಲ್ ಬುಕ್ಕಿಂಗ್ ವ್ಯವಹಾರಗಳನ್ನು ನೋಡಿಕೊಳ್ಳುವ ಟೀಮ್ ಕೂಡ ಫೈನಲಿಸ್ಟ್ ತಂಡಗಳ ಬೇರೆ ಬುಕ್ಕಿಂಗ್ ಅನ್ನು ಮಾಡಿರಲಿಲ್ಲ. ಪಿಸಿಬಿ ಹಾಗೂ ಹೋಟೆಲ್ ಮ್ಯಾನೇಜ್ ಮೆಂಟ್ ನಡುವಿನ ಸಂವಹನದ ಕೊರತೆಯಿಂದಾಗಿ ದೇಶದ ಪ್ರಮುಖ ಕ್ರಿಕೆಟಿಗರು ರಾತ್ರಿಯನ್ನು ರಸ್ತೆಯಲ್ಲಿ ಕಳೆಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು.
ಮಹಿಳಾ ಐಪಿಎಲ್‌ಗೂ ಮುನ್ನ ಪಾಕ್‌ನಲ್ಲಿ ಮಹಿಳಾ ಟಿ20?
ಶನಿವಾರ ಕ್ವೈದ್-ಇ-ಅಜಮ್ ಟೂರ್ನಿಯ ಫೈನಲ್ ಪಂದ್ಯ ನಿಗದಿಯಾಗಿದ್ದರಿಂದ ಕೆಲ ದಿನಗಳ ಮುಂಚಿತವಾಗಿಯೇ ಎರಡೂ ತಂಡಗಳು ಕರಾಚಿಗೆ (Karachi) ಬಂದಿದ್ದವು. ಆದರೆ, ಈ ಸಮಸ್ಯೆ ಎದುರಾದ ಬೆನ್ನಲ್ಲಿಯೇ ವಿಷಯದ ಗಂಭೀರತೆ ಅರಿತ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸ್ಥಳೀಯ ಥ್ರಿ ಸ್ಟಾರ್ ಹೋಟೆಲ್ ನಲ್ಲಿ ಕ್ರಿಕೆಟಿಗರಿಗೆ ಉಳಿಯಲು ವ್ಯವಸ್ಥೆ ಮಾಡಿತ್ತು. ಕೋವಿಡ್-19 (Covid-19) ಕಾರಣಕ್ಕಾಗಿ ಬಯೋ ಬಬಲ್ (Bio Bubble)ವ್ಯವಸ್ಥೆಯನ್ಣೂ ಈ ವೇಳೆ ಎಲ್ಲಿಯೂ ಪಾಲನೆ ಮಾಡಲು ಸಾಧ್ಯವಾಗಲಿಲ್ಲ. ಇನ್ನೊಂದು ಅಚ್ಚರಿಯ ವಿಚಾರವೆಂದರೆ, ಪಿಸಿಬಿಯ ಚೇರ್ಮನ್ ರಮೀಜ್ ರಾಜಾ ಕೂಡ ಅದೇ ಪಂಚತಾರಾ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು.
2023ರ ಏಷ್ಯಾಕಪ್ ಕ್ರಿಕೆಟ್‌ಗೆ ಪಾಕಿಸ್ತಾನ ಆತಿಥ್ಯ; ಸರ್ವಾನುಮತದಿಂದ ನಿರ್ಧಾರ..!
ಈ ಕುರಿತಾಗಿ ಮಾತನಾಡಿರುವ ರಮೀಜ್ ರಾಜಾ, ಘಟನೆಯಿಂದಾಗಿ ಬಹಳ ಬೇಸರವಾಗಿದೆ ಎಂದಿದ್ದಾರೆ. ಭವಿಷ್ಯದ ದಿನಗಳಲ್ಲಿ ಇಂಥ ಪರಿಸ್ಥಿತಿ ಎದುರಿಸದೇ ಇರುವ ನಿಟ್ಟಿನಲ್ಲಿ, ಸ್ಟೇಡಿಯಂನ ಸುತ್ತಮುತ್ತಲೂ ಇರುವ ಖಾಲಿ ಜಾಗದಲ್ಲಿ ಫೈವ್ ಸ್ಟರ್ ಹೋಟೆಲ್ ಹಾಗೂ ಕ್ಲಬ್ ಹೌಸ್ ನಿರ್ಮಾಣ ಮಾಡಲಿದ್ದೇವೆ' ಎಂದು ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.