ಬಕ್ನರ್ ದಾಖಲೆ ಮುರಿದ ಅಂಪೈರ್ ಅಲೀಮ್ ದಾರ್!

By Web DeskFirst Published Dec 12, 2019, 10:46 AM IST
Highlights

ಪಾಕಿಸ್ತಾನದ ಅಂಪೈರ್ ಅಲೀಮ್ ದಾರ್ ಹೊಸ ದಾಖಲೆ ಬರೆದಿದ್ದಾರೆ. ಗರಿಷ್ಠ ಟೆಸ್ಟ್ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡೋ ಮೂಲಕ ಸ್ಟೀವ್ ಬಕ್ನರ್ ದಾಖಲೆ ಮುರಿದಿದ್ದಾರೆ. 

ದುಬೈ(ಡಿ.12): ಪಾಕಿಸ್ತಾನದ ಅಲಿಂ ದಾರ್‌ ಅತಿಹೆಚ್ಚು ಟೆಸ್ಟ್‌ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ ಅಂಪೈರ್‌ ಎನ್ನುವ ದಾಖಲೆ ಬರೆದಿದ್ದಾರೆ. ಪರ್ತ್‌ನಲ್ಲಿನ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಆರಂಭಗೊಳ್ಳುತ್ತಿದ್ದಂತೆ ಅಲೀಮ್ ದಾರ್ ದಾಖಲೆ ಬರೆದಿದ್ದಾರೆ. ಈ ಮೂಲಕ ಮಾಜಿ ಅಂಪೈರ್ ಸ್ಟೀವ್ ಬಕ್ನರ್ ದಾಖಲೆ ಮುರಿದಿದ್ದಾರೆ.

ಇದನ್ನೂ ಓದಿ: ಮೈದಾನದಲ್ಲೇ ಪ್ರಾಣ ಬಿಟ್ಟ ಅಂಪೈರ್; ಕಂಬನಿ ಮಿಡಿದ ಕ್ರಿಕೆಟ್ ಜಗತ್ತು!

ಅಲೀಮ್ ದಾರ್ 129ನೇ ಟೆಸ್ಟ್ ಪಂದ್ಯದಲ್ಲಿ ಅಂಪೈರ್  ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂಲಕ ಅತೀ ಹೆಚ್ಚು  ಟೆಸ್ಟ್ ಪಂದ್ಯದಲ್ಲಿ ಅಂಪೈರಿಂಗ್ ಮಾಡಿದ ಹೆಗ್ಗಳಿಗೆಗೆ ಅಲೀಮ್ ದಾರ್ ಪಾತ್ರರಾಗಿದ್ದಾರೆ.  ಸ್ಟೀವ್ ಬಕ್ನರ್ 128 ಟೆಸ್ಟ್ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದರು. 

ಇದನ್ನೂ ಓದಿ: ಐಪಿ​ಎಲ್‌ನಲ್ಲಿ ಇನ್ಮುಂದೆ ನೋಬಾಲ್‌ ಅಂಪೈರ್‌!

ಏಕದಿನದಲ್ಲಿ ಅಲೀಮ್ ದಾರ್‌ 207 ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದಾರೆ. ಇನ್ನು 46 ಅಂ.ರಾ.ಟಿ20 ಪಂದ್ಯಗಳಲ್ಲಿ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಹೊಸ ಮೈಲಿಗಲ್ಲು ಸ್ಥಾಪಿಸಿರುವ ಅಲೀಮ್ ದಾರ್‌ಗೆ ಕ್ರಿಕೆಟಿಗರು ಅಭಿನಂದನೆ ಸಲ್ಲಿಸಿದ್ದಾರೆ.

click me!