ಆಫ್ಘನ್‌ ನಾಯಕನಾಗಿ ಮತ್ತೆ ನೇಮಕಗೊಂಡ ಅಸ್ಗರ್‌!

By Kannadaprabha NewsFirst Published Dec 12, 2019, 10:20 AM IST
Highlights

ಆಫ್ಘಾನಿಸ್ತಾನ ತಂಡದ ನಾಯಕ ಸ್ಥಾನದಿಂದ ಅಸ್ಗರ್‌ನನ್ನು ದಿಢೀರ್ ಕಿತ್ತೆಸೆದು ಕ್ರಾಂತಿ ಮಾಡಿದ್ದ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಮತ್ತೆ ಅಸ್ಗರ್‌ಗೆ ಮಣೆ ಹಾಕಿದೆ. 

ಕಾಬೂಲ್‌(ಡಿ.12): ಆಷ್ಘಾನಿಸ್ತಾನ ಕ್ರಿಕೆಟ್‌ ಮಂಡಳಿ(ಎಸಿಬಿ) ಬುಧವಾರ ಮಾಜಿ ನಾಯಕ ಅಸ್ಗರ್‌ ಆಫ್ಘನ್‌ರನ್ನು ಎಲ್ಲಾ ಮಾದರಿಯ ತಂಡಗಳಿಗೆ ನಾಯಕನನ್ನಾಗಿ ನೇಮಿಸಿದೆ. 7 ತಿಂಗಳ ಹಿಂದೆ ನಾಯಕತ್ವದಿಂದ ಕೆಳಗಿಳಿಸಿದ್ದ ಎಸಿಬಿ, ಇದೀಗ ಮತ್ತೊಮ್ಮೆ ನಾಯಕತ್ವದಲ್ಲಿ ಬದಲಾವಣೆ ಮಾಡಿರುವುದು ಅಚ್ಚರಿ ಮೂಡಿಸಿದೆ. 

ಇದನ್ನೂ ಓದಿ: ಆಫ್ಘನ್ ಎದುರು ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ವಿಂಡೀಸ್

ವೆಸ್ಟ್‌ಇಂಡೀಸ್‌ ವಿರುದ್ಧ ಇತ್ತೀಚೆಗೆ ಎಲ್ಲಾ ಮೂರು ಮಾದರಿಗಳಲ್ಲಿ ಸರಣಿ ಸೋತಿದ್ದು ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಏಕದಿನ ವಿಶ್ವಕಪ್‌ಗೆ 2 ತಿಂಗಳು ಇದ್ದಾಗ ಎಸಿಬಿ, ಟೆಸ್ಟ್‌ಗೆ ರಹಮತ್‌ ಶಾ, ಏಕದಿನಕ್ಕೆ ಗುಲ್ಬದಿನ್‌ ನೈಬ್‌ ಹಾಗೂ ಟಿ20ಗೆ ರಶೀದ್‌ ಖಾನ್‌ರನ್ನು ನಾಯಕನನ್ನಾಗಿ ನೇಮಿಸಿತ್ತು. 

ಇದನ್ನೂ ಓದಿ: ಏಕದಿನ: ಆಫ್ಘನ್ ವಿರುದ್ಧ ವಿಂಡೀಸ್‌ಗೆ ಸುಲಭ ಜಯ

ವಿಶ್ವಕಪ್‌ ಬಳಿಕ ರಶೀದ್‌ ಖಾನ್‌ರನ್ನು ಎಲ್ಲಾ ಮಾದರಿಗೆ ನಾಯಕನನ್ನಾಗಿ ನೇಮಕ ಮಾಡಲಾಗಿತ್ತು. 32 ವರ್ಷದ ಅಸ್ಗರ್‌ ಆಷ್ಘಾನಿಸ್ತಾನ ಪರ 111 ಏಕದಿನ, 66 ಟಿ20 ಹಾಗೂ 4 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ.

click me!