
ದುಬೈ(ಫೆ.23) ಭಾರತ ಹಾಗೂ ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯ ರೋಚಕ ಘಟ್ಟ ತಲುಪಿದೆ. ದಿಟ್ಟ ಹೋರಾಟಡ ನಡುವೆಯೂ ಪಾಕಿಸ್ತಾನ ತಂಡವನ್ನು ಆಲೌಟ್ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. 49.4 ಓವರ್‌ಗಳಲ್ಲಿ ಪಾಕಿ್ತಾನ 241 ರನಗೆ ಆಲೌಟ್ ಆಗಿದೆ. ಸೌದ್ ಶಕೀಲ್ ಹಾಗೂ ಮೊಹಮ್ಮದ್ ರಿಜ್ವಾನ್ ಉತ್ತಮ ಜೊತೆಯಾದ ನಡುವೆಯೂ ಪಾಕಿಸ್ತಾನ ತಂಡವನ್ನು ಕಟ್ಟಿ ಹಾಕಿದ ಭಾರತ ಇದೀಗ 242 ರನ್ ಟಾರ್ಗೆಟ್ ಪಡೆದಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಪಾಕಿಸ್ತಾನ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿತು. ಮೊದಲ ಓವರ್‌ನಲ್ಲಿ ಮೊಹಮ್ಮದ್ ಶಮಿ 5 ವೈಡ್ ಎಸೆದು ಆತಂಕ ಸೃಷ್ಟಿಸಿದ್ದರು. ಆದರೆ ಟೀಂ ಇಂಡಿಯಾ ಉತ್ತಮ ದಾಳಿಗೆ ಪಾಕಿಸ್ತಾನ ಒತ್ತಡಕ್ಕೆ ಸಿಲುಕಿತು. ಹೀಗಾಗಿ ಇಮಾಮ್ ಉಲ್ ಹಕ್ 10 ರನ್ ಹಾಗೂ ಬಾಬರ್ ಅಜಮ್ 23 ರನ್ ಸಿಡಿಸಿ ಔಟಾದರು. ಆದರೆ ಸೌದ್ ಶಕೀಲ್ ಹಾಗೂ ಮೊಹಮ್ಮದ್ ರಿಜ್ವಾನ್ 100 ರನ್ ಜೊತೆಯಾಟ ಪಾಕಿಸ್ತಾನ ತಂಡವನ್ನು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರು ಮಾಡಿತು.
ದುಬೈನಲ್ಲಿ ಜಸ್ಪ್ರೀತ್ ಬುಮ್ರಾ ಎಂಟ್ರಿ! ಭಾರತೀಯ ಆಟಗಾರರು ಖುಷ್!
ಸೌದ್ ಶಕೀಲ್ ಅರ್ಧಶತಕ ಸಿಡಿಸಿ ಮಿಂಚಿದರು. ಉತ್ತಮ ಜೊತೆಯಾಟದ ಮೂಲಕ ಬೃಹತ್ ಟಾರ್ಗೆಟ್ ಸೂಚನೆ ನೀಡಿದ ಈ ಜೋಡಿಯನ್ನು ಅಕ್ಸರ್ ಪಟೇಲ್ ಬೇರ್ಪಡಿಸಿದರು. ರಿಜ್ವಾನ್ 46 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ 62 ರನ್ ಸಿಡಿಸಿದ ಶಕೀಲ್ ವಿಕೆಟ್ ಪತನಗೊಂಡಿತು.ಇವರಿಬ್ಬರ ವಿಕೆಟ್ ಪತನದ ಬೆನ್ನಲ್ಲೇ ಪಾಕಿಸ್ತಾನ ದಿಢೀರ್ ಕುಸಿತ ಕಂಡಿತು. ಭಾರತದ ಸಮಯೋಚಿತ ದಾಳಿ ಪಾಕಿಸ್ತಾನ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿತು.
ತಯಬ್ ತಾಹಿರ್ 4 ರನ್ ಸಿಡಿಸಿ ನಿರ್ಗಮಿಸಿದರು. ಸಲ್ಮಾನ್ ಅಗಾ 19 ರನ್ ಸಿಡಿಸಿ ಔಟಾದರು. ಆದರೆ ಖುಷಿದಿಲ್ ಶಾ ಉತ್ತಮ ಹೋರಾಟ ನೀಡಿದರು. 38 ರನ್ ಸಿಡಿಸುವ ಮೂಲಕ ಖುಷ್‌ದಿಲ್ ಪಾಕಿಸ್ತಾನ ತಂಡಕ್ಕೆ ಅಂತಿಮ ಹಂತದಲ್ಲಿ ಉತ್ತಮ ರನ್ ನೀಡಿದರು. ಇದರಿಂದ ಪಾಕಿಸ್ತಾನ 200ರ ಗಡಿ ದಾಟಿತ್ತು. ಇತ್ತ ನಸೀಮ್ ಶಾ ಕೂಡ 14 ರನ್ ಕಾಣಿಕೆ ನೀಡಿದರು. 49.4 ಓವರ್‌ಗಳಲ್ಲಿ ಪಾಕಿಸ್ತಾನ 241 ರನ್ ಸಿಡಿಸಿ ಆಲೌಟ್ ಆಯಿತು.
ಕುಲ್ದೀಪ್ ಯಾದವ್ 3, ಹಾರ್ದಿಕ್ ಪಾಂಡ್ಯ 2, ಅಕ್ಸರ್ ಪಟೇಲ್ 1, ಹರ್ಷಿತ್ ರಾಣಾ ಒಂದು ಹಾಗೂ ರವೀಂದ್ರ ಜಡೇಜಾ 1 ವಿಕೆಟ್ ಕಬಳಿಸಿದರು.
ಇಂಡೋ-ಪಾಕ್ ಪಂದ್ಯ ರದ್ದಾದ್ರೆ ಯಾರಿಗೆ ಲಾಭ? ಯಾರಿಗೆ ನಷ್ಟ? ಹವಾಮಾನ ವರದಿ ಏನು?
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.