ಇಂಗ್ಲೆಂಡ್ ತಂಡಕ್ಕಾಗಿ ಆಡಲ್ಲ, ಅವಕಾಶ ಸಿಕ್ಕರೆ ಐಪಿಎಲ್ ಆಡುತ್ತೇನೆ, ಪಾಕ್ ವೇಗಿ ಮೊಹಮ್ಮದ್ ಅಮೀರ್!

By Suvarna NewsFirst Published Jul 2, 2023, 7:52 PM IST
Highlights

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಮಾಜಿ ವೇಗಿ ಮೊಹಮ್ಮದ್ ಆಮೀರ್ ಇದೀಗ ಐಪಿಎಲ್ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಇಂಗ್ಲೆಂಡ್ ತಂಡಕ್ಕಾಗಿ ಆಡುವುದಿಲ್ಲ ಎಂದಿದ್ದಾರೆ.

ಲಂಡನ್(ಜು.02) ಪಾಕಿಸ್ತಾನ ತಂಡದ ಮಾರಕ ವೇಗಿ ಮೊಹಮ್ಮದ್ ಅಮೀರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ 3 ವರ್ಷಗಳು ಉರುಳಿದೆ. ವಿದಾಯದ ಬಳಿಕ ಮೊಹಮ್ಮದ ಅಮೀರ್ ಕುಟುಂಬ ಸಮೇತ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ. ಮುಂದಿನ ವರ್ಷ ಮೊಹಮ್ಮದ್ ಅಮೀರ್‌ಗೆ ಬ್ರಿಟಿಷ್ ಪೌರತ್ವ ಸಿಗಲಿದೆ. ಇದರ ಬೆನ್ನಲ್ಲೇ ಐಪಿಎಲ್ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷ ಇಂಗ್ಲೆಂಡ್ ಪೌರತ್ವ ಸಿಗಲಿದೆ. ಇದರಿಂದ ಅಮೀರ್ ಇಂಗ್ಲೆಂಡ್ ತಂಡಕ್ಕೆ ಆಡಲು ಅರ್ಹರಾಗಲಿದ್ದಾರೆ. ಈ ಕುರಿತು ಎದ್ದಿರು ಪ್ರಶ್ನೆಗಳಿಗೆ ಉತ್ತರಿಸಿರುವ ಮೊಹಮ್ಮದ್ ಅಮೀರ್, ಇಂಗ್ಲೆಂಡ್ ಪೌರತ್ವದಿಂದ ಇಂಗ್ಲೆಂಡ್ ತಂಡ ಪ್ರತಿನಿಧಿಸಲು ಸಾಧ್ಯವಿದೆ. ಆದರೆ ನಾನು ಇಂಗ್ಲೆಂಡ್ ತಂಡಕ್ಕೆ ಆಡುವುದಿಲ್ಲ. ಮುಂದಿನ ವರ್ಷದಿಂದ ಇಂಗ್ಲೆಂಡ್ ಪ್ರಜೆಯಾಗುವ ಕಾರಣ ಅವಕಾಶ ಸಿಕ್ಕರೆ ಐಪಿಎಲ್ ಟೂರ್ನಿ ಆಡುತ್ತೇನೆ ಎಂದು ಮೊಹಮ್ಮದ್ ಅಮೀರ್ ಹೇಳಿದ್ದಾರೆ.

ಬ್ರಿಟಿಷ್ ಪ್ರಜೆಯಾದ ಬಳಿಕ ಇಂಗ್ಲೆಂಡ್ ತಂಡಕ್ಕೆ ಆಡುವ ಸಾಧ್ಯತೆಯನ್ನು ಮೊಹಮ್ಮದ್ ಅಮೀರ್ ತಳ್ಳಿ ಹಾಕಿದ್ದಾರೆ. ಇಂಗ್ಲೆಂಡ್  ಪ್ರಜೆಯಾಗುವ ಕಾರಣ ನನ್ನನ್ನು ಐಪಿಎಲ್ ಟೂರ್ನಿಯಲ್ಲಿ ಪರಿಗಣಿಸುವ ಸಾಧ್ಯತೆ ಇದೆ. ಒಂದು ವೇಳೆ ಅವಕಾಶ ಸಿಕ್ಕರೆ ಐಪಿಎಲ್ ಟೂರ್ನಿ ಆಡುತ್ತೇನೆ. ಇದಕ್ಕಾಗಿ ಎಲ್ಲಾ ಬಾಗಿಲು ತೆರಿದಿಟ್ಟಿರುತ್ತೇನೆ ಎಂದು ಮೊಹಮ್ಮದ್ ಅಮೀರ್ ಹೇಳಿದ್ದಾರೆ.

 

ICC ODI World Cup: ಭದ್ರತೆ ತಪಾಸಣೆಗೆ ಭಾರತಕ್ಕೆ ಬರಲಿದೆ ಪಾಕ್ ನಿಯೋಗ..!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದೇನೆ. ಮತ್ತೆ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸುವುದಿಲ್ಲ. ಆದರೆ ನನಗೆ ಐಪಿಎಲ್ ಆಡಬೇಕೆಂಬ ಆಸೆಯಿಂದ. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. 2024ರಲ್ಲಿ ಪೌರತ್ವ ಸಿಗಲಿದೆ. ಬಳಿಕ ಪರಿಸ್ಥಿತಿ ಹಾಗೂ ಅವಕಾಶಗಳು ಬಂದರೆ ಐಪಿಎಲ್ ಟೂರ್ನಿ ಆಡುತ್ತೇನೆ ಎಂದು ಆಮೀರ್ ಹೇಳಿದ್ದಾರೆ.

2008ರ ಬಳಿಕ ಐಪಿಎಲ್ ಟೂರ್ನಿಯಲ್ಲಿ ಪಾಕಿಸ್ತಾನ ಆಟಗಾರರಿಗೆ ಅವಕಾಶ ನಿರಾಕರಿಸಲಾಗಿದೆ. 2008 ಮುಂಬೈ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ಸಂಬಂಧ ಹಳಸಿದೆ. 2012ರಲ್ಲಿ ದ್ವಿಪಕ್ಷೀಯ ಸರಣಿ ಪುನರ್ ಆರಂಭಗೊಂಡರೂ ಒಂದೇ ಸರಣಿಗೆ ಸೀಮಿತವಾಗಿದೆ. ಆದರೆ ಪಾಕಿಸ್ತಾನದ ಕೆಲ ಕ್ರಿಕೆಟಿಗರು ಐಪಿಎಲ್ ಟೂರ್ನಿ ಆಡಿದ್ದಾರೆ. 2008ರ ಬಳಿಕವೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಜರ್ ಮಹಮ್ಮೂದ್ ಐಪಿಎಲ್ ಟೂರ್ನಿ ಆಡಿದ್ದಾರೆ. ಕಾರಣ ಅಜರ್ ಮೆಹಮ್ಮೂದ್ ಬ್ರಿಟಿಷ್ ಪ್ರಜೆಯಾಗಿದ್ದರು.  

ಧೋನಿಯನ್ನು ಟೀಂ ಇಂಡಿಯಾ ಮಿಸ್‌ ಮಾಡಿಕೊಳ್ಳಲಿದೆ ಎಂದೆನಿಸುತ್ತಿಲ್ಲ ಎಂದಿದ್ದ: ಅಜಿತ್ ಅಗರ್‌ಕರ್

ಅಜರ್ ಮೆಹಮ್ಮೂದ್ ರೀತಿ ಮೊಹಮ್ಮದ್ ಅಮೀರ್ ಕೂಡ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳುತ್ತಾರಾ ಅನ್ನೋ ಕುತೂಹಲ ಹೆಚ್ಚಾಗಿದೆ. ಮೊಹಮ್ಮದ್ ಅಮೀರ್ ಐಪಿಎಲ್ ಟೂರ್ನಿ ಆಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಆದರೆ ಪಾಕಿಸ್ತಾನದ ಸೂಪರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕುರಿತು ಯಾವುದೇ ಮಾತು ಆಡಿಲ್ಲ. ಪಿಎಸ್‌ಎಲ್‌ನಲ್ಲಿ ಪಾಲ್ಗೊಳ್ಳಲು ಮೊಹಮ್ಮದ್ ಅಮೀರ್ ನಿರಾಸಕ್ತಿ ತೋರಿದ್ದಾರೆ.

click me!