ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಜಯಿಸಿದ ಪಾಕಿಸ್ತಾನ

By Suvarna NewsFirst Published Apr 17, 2021, 11:26 AM IST
Highlights

ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾ ವಿರುದ್ದ ಟಿ20 ಸರಣಿಯನ್ನು 3-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಇದರೊಂದಿಗೆ ಪಾಕಿಸ್ತಾನ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಅತ್ಯಂತ ಫಲಪ್ರದವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಸೆಂಚುರಿಯನ್(ಏ.17)‌: ದಕ್ಷಿಣ ಆಫ್ರಿಕಾ ವಿರುದ್ಧ 4ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 3 ವಿಕೆಟ್‌ ಗೆಲುವು ಸಾಧಿಸಿದ ಪಾಕಿಸ್ತಾನ 3-1ರ ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. 

ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ, ವಾನ್‌ ಡರ್‌ ಡುಸ್ಸೆನ್‌(52) ಹಾಗೂ ಜನ್ನೆಮಾನ್‌ ಮಲಾನ್‌(33)ರ ಹೋರಾಟದ ನೆರವಿನಿಂದ 19.3 ಓವರಲ್ಲಿ 144 ರನ್‌ಗಳಿಗೆ ಆಲೌಟ್‌ ಆಯಿತು. ಪಾಕಿಸ್ತಾನ ಪರ ಫಹೀಂ ಅಶ್ರಫ್‌ ಹಾಗೂ ಹಸನ್‌ ಅಲಿ ತಲಾ 3 ವಿಕೆಟ್‌ ಕಿತ್ತರು. 

ದಕ್ಷಿಣ ಆಫ್ರಿಕಾ ನೀಡಿದ್ದ 145 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಫಖರ್‌ ಜಮಾನ್‌(60) ಆಸರೆಯಾದರು. ನಾಯಕ ಬಾಬರ್‌(24) ಉತ್ತಮ ಬೆಂಬಲ ನೀಡಿದರು. ಒಂದು ಹಂತದಲ್ಲಿ 10 ಓವರ್‌ ಮುಕ್ತಾಯದ ವೇಳೆಗೆ ಕೇವಲ ಒಂದು ವಿಕೆಟ್‌ ಕಳೆದುಕೊಂಡು 92 ರನ್‌ ಬಾರಿಸಿದ್ದ ಪಾಕಿಸ್ತಾನ ಆ ಬಳಿಕ ನಾಟಕೀಯ ಕುಸಿತ ಕಂಡಿತು. 15 ಓವರ್‌ ಅಂತ್ಯದ ವೇಳೆಗೆ ಪಾಕಿಸ್ತಾನ ತನ್ನ ಖಾತೆಗೆ ಕೇವಲ 23 ರನ್‌ ಸೇರಿಸಿ ಪ್ರಮುಖ 5 ವಿಕೆಟ್‌ ಕಳೆದುಕೊಂಡು ಆತಂಕಕ್ಕೆ ಒಳಗಾಗಿತ್ತು. ಕೊನೆಯಲ್ಲಿ ಮೊಹಮದ್‌ ನವಾಜ್‌(ಅಜೇಯ 25) ಆಕರ್ಷಕ ಆಟವಾಡಿ ಪಾಕಿಸ್ತಾನಕ್ಕೆ ಇನ್ನೊಂದು ಎಸೆತ ಬಾಕಿ ಇರುವಂತೆ ಗೆಲುವು ತಂದುಕೊಟ್ಟರು.

ಬಾಬರ್‌ ಅಜಂ ಶತಕ: ದಕ್ಷಿಣ ಆಫ್ರಿಕಾ ವಿರುದ್ಧ ಪಾಕ್‌ಗೆ ಭರ್ಜರಿ ಜಯ

ಟಿ20 ಸರಣಿಯನ್ನು ಜಯಿಸುವುದರೊಂದಿಗೆ ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದೆ. 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಜಯಿಸಿದ್ದ ಪಾಕಿಸ್ತಾನ, ಇದೀಗ ಟಿ20 ಸರಣಿಯಲ್ಲೂ ಜಯಭೇರಿ ಬಾರಿಸಿದೆ.

ಸ್ಕೋರ್‌: 
ದ.ಆಫ್ರಿಕಾ 144/10 
ಪಾಕಿಸ್ತಾನ 149/7

click me!