IPL 2021 ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳುತ್ತಾ ಸನ್‌ರೈಸರ್ಸ್‌?

Suvarna News   | Asianet News
Published : Apr 17, 2021, 08:37 AM IST
IPL 2021 ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳುತ್ತಾ ಸನ್‌ರೈಸರ್ಸ್‌?

ಸಾರಾಂಶ

ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವಿಂದು ಚೆನ್ನೈನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಡೇವಿಡ್‌ ವಾರ್ನರ್ ನೇತೃತ್ವದ ಸನ್‌ರೈಸರ್ಸ್‌ ಹ್ಯಾಟ್ರಿಕ್ ಸೋಲಿನ ಭೀತಿಗೆ ಸಿಲುಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.‌

ಚೆನ್ನೈ(ಏ.17): ಈ ಆವೃತ್ತಿಯ ಐಪಿಎಲ್‌ನಲ್ಲಿ ಸದೃಢ ತಂಡ ಹೊಂದಿದೆ ಎನಿಸಿಕೊಂಡು ಟೂರ್ನಿಗೆ ಕಾಲಿಟ್ಟಿದ್ದ ಸನ್‌ರೈಸ​ರ್ಸ್‌ ಹೈದರಾಬಾದ್‌ ಮೊದಲ 2 ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸುವ ಮೂಲಕ ಆಘಾತಕ್ಕೆ ಒಳಗಾಗಿದೆ. ಹ್ಯಾಟ್ರಿಕ್‌ ಸೋಲಿನ ಭೀತಿಯಲ್ಲಿರುವ ಡೇವಿಡ್‌ ವಾರ್ನರ್‌ ಪಡೆ, ಶನಿವಾರ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ಸೆಣಸಲಿದೆ.

ಸನ್‌ರೈಸರ್ಸ್ ಬೌಲಿಂಗ್‌ ಪಡೆ ಡೆತ್‌ ಓವರ್‌ಗಳಲ್ಲಿ ದುಬಾರಿಯಾಗುತ್ತಿರುವುದು ತಂಡದ ತಲೆನೋವು ಹೆಚ್ಚಿಸಿದೆ. ಇನ್ನು ಬ್ಯಾಟಿಂಗ್‌ ಪಡೆಯ ಆಟ ಐಪಿಎಲ್‌ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಟೂರ್ನಿಯ ಆರಂಭದಲ್ಲೇ ಭಾರೀ ಹಿನ್ನಡೆಯಿಂದ ತಪ್ಪಿಸಿಕೊಳ್ಳಬೇಕಿದ್ದರೆ ಸನ್‌ರೈಸ​ರ್ಸ್, ಆದಷ್ಟುಬೇಗ ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಈ ಪಂದ್ಯದಲ್ಲಿ ಮನೀಶ್‌ ಪಾಂಡೆ ಇಲ್ಲವೇ ವಿಜಯ್‌ ಶಂಕರ್‌ ಹೊರಗುಳಿಯಬಹುದು. ವಾರ್ನರ್‌ ಜೊತೆ ಜಾನಿ ಬೇರ್‌ಸ್ಟೋವ್‌ ಇನ್ನಿಂಗ್ಸ್‌ ಆರಂಭಿಸಿ, ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ಕೇನ್‌ ವಿಲಿಯಮ್ಸ್‌ ಹೆಗಲಿಗೆ ನೀಡುವ ನಿರೀಕ್ಷೆ ಇದೆ. ವಿಲಿಯಮ್ಸ್‌ ಕಣಕ್ಕಿಳಿದರೆ, ಜೇಸನ್‌ ಹೋಲ್ಡರ್‌ ಹೊರಗುಳಿಯಲಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ‌ ಘರ್ಜಿಸಿದ ಚೆನ್ನೈ ಸೂಪರ್ ಕಿಂಗ್ಸ್; 6 ವಿಕೆಟ್ ಭರ್ಜರಿ ಗೆಲವು!

ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಸೋತಿದ್ದ ಮುಂಬೈ, 2ನೇ ಪಂದ್ಯದಲ್ಲಿ ನಾಟಕೀಯ ರೀತಿಯಲ್ಲಿ ಗೆಲುವು ಸಾಧಿಸಿತು. ಕೆಕೆಆರ್‌ ಕೈಯಲ್ಲಿದ್ದ ಪಂದ್ಯವನ್ನು ಮುಂಬೈಗೆ ಉಡುಗೊರೆಯಾಗಿ ನೀಡಿತ್ತು. ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದ ಮುಂಬೈ, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ: ಕ್ವಿಂಟನ್‌ ಡಿ ಕಾಕ್‌, ರೋಹಿತ್‌ ಶರ್ಮಾ(ನಾಯಕ), ಸೂರ್ಯಕುಮಾರ್‌, ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ, ಕೀರನ್‌ ಪೊಲ್ಲಾರ್ಡ್‌, ಕೃನಾಲ್‌ ಪಾಂಡ್ಯ, ಮಾರ್ಕೊ ಜಾನ್ಸೆನ್‌, ರಾಹುಲ್‌ ಚಹರ್‌, ಜಸ್‌ಪ್ರೀತ್‌ ಬುಮ್ರಾ, ಟ್ರೆಂಟ್‌ ಬೌಲ್ಟ್‌.

ಸನ್‌ರೈಸ​ರ್ಸ್‌: ಡೇವಿಡ್‌ ವಾರ್ನರ್‌(ನಾಯಕ), ಗರ್ಗ್‌/ಸಾಹ, ಜಾನಿ ಬೇರ್‌ಸ್ಟೋವ್‌, ಮನೀಶ್‌ ಪಾಂಡೆ, ವಿಲಿಯಮ್ಸನ್‌/ಹೋಲ್ಡರ್‌, ಅಬ್ದುಲ್‌ ಸಮದ್‌, ವಿಜಯ್‌ ಶಂಕರ್‌, ರಶೀದ್‌ ಖಾನ್‌, ಭುವನೇಶ್ವರ್‌ ಕುಮಾರ್‌, ಶಾಬಾಜ್‌ ನದೀಂ, ಟಿ.ನಟರಾಜನ್‌.

ಸ್ಥಳ: ಚೆನ್ನೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ