ಐಪಿಎಲ್‌ನಲ್ಲಿ ಅತಿಹೆಚ್ಚು ರನೌಟ್‌: ಧೋನಿ ದಾಖಲೆ ಮುರಿದ ಜಡ್ಡು..!

By Suvarna NewsFirst Published Apr 17, 2021, 9:09 AM IST
Highlights

ಪಂಜಾಬ್‌ ಕಿಂಗ್ಸ್‌ ವಿರುದ್ದದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಆಲ್ರೌಂಡರ್‌ ರವೀಂದ್ರ ಜಡೇಜಾ ಚುರುಕಿನ ಕ್ಷೇತ್ರರಕ್ಷಣೆ ಮೂಲಕ ಕೆ.ಎಲ್‌. ರಾಹುಲ್‌ರನ್ನು ರನೌಟ್‌ ಮಾಡಿ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಮುಂಬೈ(ಏ.17): ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಒಬ್ಬರೆನಿಸಿಕೊಂಡಿರುವ ರವೀಂದ್ರ ಜಡೇಜಾ, ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. 

ಶುಕ್ರವಾರ(ಏ.16) ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಕೆ.ಎಲ್‌.ರಾಹುಲ್‌ರನ್ನು ರನೌಟ್‌ ಮಾಡಿದ ಜಡೇಜಾ, ಐಪಿಎಲ್‌ ಇತಿಹಾಸದಲ್ಲಿ ಅತಿಹೆಚ್ಚು ರನೌಟ್‌ (22)ಗಳನ್ನು ಮಾಡಿದ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾದರು. ಇದರೊಂದಿಗೆ ತಮ್ಮ ಚೆನ್ನೈ ಸೂಪರ್‌ಕಿಂಗ್ಸ್‌ ತಂಡದ ನಾಯಕ ಎಂ.ಎಸ್‌.ಧೋನಿ ಹೆಸರಿನಲ್ಲಿದ್ದ 21 ರನೌಟ್‌ಗಳ ದಾಖಲೆಯನ್ನು ಮುರಿದರು.

ಚೆನ್ನೈ ಸೂಪರ್‌ ಪರ 200ನೇ ಪಂದ್ಯವನ್ನಾಡಿದ ಧೋನಿ

ಮುಂಬೈ: ಎಂ.ಎಸ್‌.ಧೋನಿ ಶುಕ್ರವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧ ಕಣಕ್ಕಿಳಿದ ಎಂ.ಎಸ್‌.ಧೋನಿ, ಚೆನ್ನೈ ಸೂಪರ್‌ ಕಿಂಗ್ಸ್‌ ಪರ 200ನೇ ಪಂದ್ಯವನ್ನಾಡಿದರು. ಸಿಎಸ್‌ಕೆ ಪರ 200 ಪಂದ್ಯಗಳನ್ನಾಡಿ ಮೊದಲ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾದರು. 

ಪಂಜಾಬ್ ಕಿಂಗ್ಸ್ ವಿರುದ್ಧ‌ ಘರ್ಜಿಸಿದ ಚೆನ್ನೈ ಸೂಪರ್ ಕಿಂಗ್ಸ್; 6 ವಿಕೆಟ್ ಭರ್ಜರಿ ಗೆಲವು!

ಐಪಿಎಲ್‌ನಲ್ಲಿ ಚೆನ್ನೈ ಪರ 174 ಪಂದ್ಯಗಳನ್ನಾಡಿರುವ ಧೋನಿ, ಚಾಂಪಿಯನ್ಸ್‌ ಲೀಗ್‌ನಲ್ಲಿ 24 ಪಂದ್ಯಗಳನ್ನು ಆಡಿದ್ದಾರೆ. 2008ರಿಂದ ಚೆನ್ನೈ ತಂಡದಲ್ಲಿ ಆಡಿದ್ದ ಧೋನಿ, 2016, 2017ರಲ್ಲಿ ಚೆನ್ನೈ 2 ವರ್ಷ ನಿಷೇಧ ಅನುಭವಿಸಿದ್ದಾಗ ಪುಣೆ ಸೂಪರ್‌ಜೈಂಟ್ಸ್‌ ಪರ ಆಡಿದ್ದರು. ಒಂದು ಫ್ರಾಂಚೈಸಿ ಪರ ಅತಿಹೆಚ್ಚು ಪಂದ್ಯಗಳನ್ನಾಡಿದ ದಾಖಲೆ ವಿರಾಟ್‌ ಕೊಹ್ಲಿ ಹೆಸರಿನಲ್ಲಿದೆ. ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಕೊಹ್ಲಿ 209 ಪಂದ್ಯಗಳನ್ನು ಆಡಿದ್ದಾರೆ.

click me!