
ಕರಾಚಿ(ಸೆ. 25) ಪಾಕಿಸ್ತಾನ ಕಾರ್ಪೋರೇಟ್ ಲೀಗ್ ಟೂರ್ನಿಯಲ್ಲಿ ನಡೆದ ಘಟನೆಗೆ ಕ್ರಿಕೆಟ್ ಲೋಕವೇ ಮರುಗಿದೆ. ಪಂದ್ಯ ನಡೆಯುತ್ತಿದ್ದ ವೇಳೆಯೇ ಫೀಲ್ಡಿಂಗ್ ಮಾಡುತ್ತಿದ್ದ ಕ್ರಿಕೆಟರ್ ಉಸ್ಮಾನ್ ಶೆನ್ವಾರಿ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣೇ ಉಸ್ಮಾನ್ ಶೆನ್ವಾರಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆ ದಾಖಲಿಸುವ ಮುನ್ನವೇ ಕ್ರಿಕೆಟಿಗನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಈ ಪಂದ್ಯದ ಲೈವ್ ಪ್ರಸಾರ ನಡೆಯುತ್ತು. ಆಟಗಾರನ ನೋವಿನ ಘಟನೆ ಕ್ಯಾಮರಾದಲ್ಲಿ ದಾಖಲಾಗಿದೆ. ಉಸ್ಮಾನ್ ಶೆನ್ವಾರಿ ಪಾಕಿಸ್ತಾನದ ಕ್ಲಬ್ ಕ್ರಿಕೆಟರ್ ಆಗಿದ್ದು, ಉತ್ತಮ ಕ್ರಿಕೆಟರ್ ಎಂದು ಹೆಸರು ಮಾಡಿದ್ದರು.
ಇನ್ನೇನು ಬೌಲಿಂಗ್ ಮಾಡಬೇಕು ಅನ್ನುಷ್ಟರಲ್ಲೇ ಫೀಲ್ಡಿಂಗ್ ಮಾಡುತ್ತಿದ್ದ ಉಸ್ಮಾನ್ ಶೆನ್ವಾರಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸಹ ಆಟಗಾರರು ನೆರವಿಗೆ ಧಾವಿಸಿದ್ದಾರೆ. ಆದರೆ ಉಸ್ಮಾನ್ ಶೆನ್ವಾರಿ ದೇಹದಲ್ಲಿ ಯಾವುದೇ ಚಲನೆ ಇರಲಿಲ್ಲ. ಶೆನ್ವಾರಿಯನ್ನು ಎಬ್ಬಿಸುವ ಪ್ರಯತ್ನ ಮಾಡಿದರು. ತಕ್ಷವೇ ನೆರವಿಗೆ ಧಾವಿಸುವಂತೆ ತಂಡದ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ. ಪರಿಸ್ಥಿತಿ ಗಂಭೀರತೆ ಅರಿತೆ ಟೂರ್ನಮೆಂಟ್ ಆಯೋಜಕರು ಆ್ಯಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆ ಕರೆದೊಯ್ದಿದ್ದಾರೆ.
Pak vs Eng: ಇಂಗ್ಲೆಂಡ್ ಎದುರು ವಿಶ್ವದಾಖಲೆಯ ಜತೆಯಾಟವಾಡಿದ ಬಾಬರ್ ಅಜಂ-ಮೊಹಮ್ಮದ್ ರಿಜ್ವಾನ್..!
ವೈದ್ಯರ ತಂಡ ಉಸ್ಮಾನ್ ಶೆನ್ವಾರಿ ಚಿಕಿತ್ಸೆ ಧಾವಿಸಿದ್ದಾರೆ. ಆದರೆ ಉಸ್ಮಾನ್ ಶೆನ್ವಾರಿ ಆಸ್ಪತ್ರೆ ದಾಖಲಿಸುವ ಮುನ್ನವೇ ನಿಧನರಾಗಿದ್ದಾರೆ. ತೀವ್ರ ಹೃದಯಾಘಾತದಿಂದ ಉಸ್ಮಾನ್ ಶೆನ್ವಾರಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಇದು ಪಾಕಿಸ್ತಾನ ಮಾತ್ರವಲ್ಲ ವಿಶ್ವ ಕ್ರಿಕೆಟ್ ಲೋಕಕ್ಕೆ ಆಘಾತ ತಂದಿದೆ. ಇತ್ತ ಪಾಕಿಸ್ತಾನ ಕಾರ್ಪೋರೇಟ್ ಲೀಗ್ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.
ಪಾಕಿಸ್ತಾನ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಬೇಕು ಅನ್ನೋ ಮಹತ್ ಹಂಬಲ ಇಟ್ಟುಕೊಂಡಿದ್ದ ಉಸ್ಮಾನ್ ಶೆನ್ವಾರಿ ಕಾರ್ಪೋರೇಟ್ ಲೀಗ್ ಟೂರ್ನಿಯಲ್ಲಿ ದಾರುಣ ಅಂತ್ಯಕಂಡಿದ್ದಾರೆ.
ಈ ರೀತಿ ಮೈದಾನದಲ್ಲೇ ಕುಸಿದು ಮೃತಪಟ್ಟ ಹಲವು ಘಟನೆಗಳು ನಡೆದಿದೆ. ಇತ್ತೀಚೆಗೆ ಭಾರತದಲ್ಲಿ ವಾಲಿಬಾಲ್, ಫುಟ್ಬಾಲ್ ಟೂರ್ನಿಯಲ್ಲೂ ಇದೇ ರೀತಿ ಘಟನೆ ನಡೆದಿದೆ.
ಮೈದಾನದಲ್ಲೇ ಹೃದಯಾಘಾತ: ವಾಲಿಬಾಲ್ ಆಟಗಾರ ಸಾವು
ವಾಲಿಬಾಲ್ ಆಡುತ್ತಲೇ ಹೃದಯಾಘಾತದಿಂದ ರಾಜ್ಯಮಟ್ಟದ ವಾಲಿಬಾಲ್ ಆಟಗಾರನೊಬ್ಬ ಮೃತಪಟ್ಟಘಟನೆ ಉಡುಪಿ ಜಿಲ್ಲೆ ಕಾಪು ತಾಲೂಕಿನಲ್ಲಿ ನಡೆದಿದೆ. ಕುರ್ಕಾಲು ಗ್ರಾಮದ ಸುಭಾಸ್ ನಗರದ ನಿವಾಸಿ ದೇವರಾಜ್ ಅಂಚನ್ ಯಾನೆ ಪಕ್ಕಿದೇವು (33)ಮೃತಪಟ್ಟಆಟಗಾರರಾಗಿದ್ದಾರೆ. ಶನಿವಾರ ಇನ್ನಂಜೆ ಮೈದಾನದಲ್ಲಿ ರಾಜ್ಯಮಟ್ಟದ ಇನ್ನಂಜೆ ಪ್ರೀಮಿಯರ್ ಲೀಗ್ ವಾಲಿಬಾಲ್ ಟೂರ್ನಿ ನಡೆಯುತಿತ್ತು. ಈ ಟೂರ್ನಿಯಲ್ಲಿ ತಂಡವೊಂದರಲ್ಲಿ ಆಡುತಿದ್ದ ಅವರು ಮೈದಾನದಲ್ಲಿ ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರಾಗಲೇ ಮೃತಪಟ್ಟಿದ್ದರು. ಹೃದಯಾಘಾತದಿಂದ ಮೃತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಟೂರ್ನಿಯನ್ನು ಅರ್ಧದಲ್ಲಿಯೇ ನಿಲ್ಲಿಸಲಾಗಿದೆ.
ಬಂಗಾಳ ಯುವ ಫುಟ್ಬಾಲಿಗ ಮೈದಾನದಲ್ಲೇ ಸಾವು!
ಸ್ಥಳೀಯ ಫುಟ್ಬಾಲ್ ಟೂರ್ನಿಯ ಪಂದ್ಯವೊಂದರಲ್ಲಿ ಆಟಗಾರರ ನಡುವೆ ಢಿಕ್ಕಿಯಾಗಿ, ಮಾಲಿ(18) ಎನ್ನುವ ಯುವ ಫುಟ್ಬಾಲಿಗ ಮೃತಪಟ್ಟಿದ್ದಾರೆ. ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಭಾನುವಾರ ನಡೆದ ಡಾಕ್ಟರ್ಸ್ ಇಲೆವನ್ ಮತ್ತು ಚೈತನ್ಯ ಇಲೆವೆನ್ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಡಾಕ್ಟರ್ಸ್ ತಂಡದ ಗೋಲಾಗುವುದನ್ನು ತಪ್ಪಿಸುವ ವೇಳೆ ಫುಟ್ಬಾಲರ್ ಮಾಲಿ, ಎದುರಾಳಿ ಆಟಗಾರನಿಗೆ ಢಿಕ್ಕಿ ಹೊಡೆದಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಆ ವೇಳೆಗೆ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.