IND vs AUS T20 ನಿರ್ಣಾಯಕ ಪಂದ್ಯದಲ್ಲಿ ಭಾರತಕ್ಕೆ 187 ರನ್ ಟಾರ್ಗೆಟ್!

By Suvarna NewsFirst Published Sep 25, 2022, 8:45 PM IST
Highlights

ಭಾರತದ ಸ್ಪಿನ್ ದಾಳಿ ನಡುವೆ ನಿರ್ಣಾಯಕ ಟಿ20 ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಅಬ್ಬರಿಸಿದೆ. ಇದೀಗ ಭಾರತದ ಗೆಲುವಿಗೆ 187 ರನ್ ಟಾರ್ಗೆಟ್ ಸಿಕ್ಕಿದೆ. ಹೈದರಾಬಾದ್ ಕ್ರೀಡಾಂಗಣದಲ್ಲಿ ಈ ಟಾರ್ಗೆಟ್ ಸುಲಭವಾಗಿ ಚೇಸಿಂಗ್ ಮಾಡಲು ಸಾಧ್ಯವೇ? 
 

ಹೈದರಾಬಾದ್(ಸೆ.25):  ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ನಿರ್ಣಾಯಕ ಟಿ20 ಪಂದ್ಯ ಇದೀಗ ರೋಚಕ ಘಟ್ಟ ತಲುಪಿದೆ. ಸರಣಿ ನಿರ್ಧಾರದ ಪಂದ್ಯದಲ್ಲಿ ಅಕ್ಸರ್ ಪಟೇಲ್ ಸ್ಪಿನ್ ದಾಳಿಗೆ ಆಸ್ಟ್ರೇಲಿಯಾ ತತ್ತರಿಸಿದರೂ, ದಿಟ್ಟ ಹೋರಾಟ ನೀಡಿದೆ.. ಹೀಗಾಗಿ ಆರಂಭದಲ್ಲಿ  ಸೈಲೆಂಟ್ ಆಗಿದ್ದ ಆಸ್ಟ್ರೇಲಿಯಾ ಅಂತಿಮ ಹಂತದಲ್ಲಿ ಅಬ್ಬರಿಸಿತು. ಕ್ಯಾಮರೂನ್ ಗ್ರೀನ್ ಹಾಗೂ ಟಿಮ್ ಡೇವಿಡ್ ಹೋರಾಟದಿಂದ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 186 ರನ್ ಸಿಡಿಸಿದೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಿತು ಕ್ಯಾಮರೂನ್ ಗ್ರೀನ್ ಹಾಗೂ ನಾಯಕ ಆ್ಯರೋನ್ ಫಿಂಚ್ 44 ರನ್ ಜೊತೆಯಾಟ ನೀಡಿದರು. ಆದರೆ ಫಿಂಚ್ ಹೋರಾಟ 7 ರನ್ ಸಿಡಿಸಿ ಔಟಾದರು. ಅಕ್ಸರ್ ಪಟೇಲ್ ಸ್ಪಿನ್ ದಾಳಿ ಆರಂಭದಿಂದಲೇ ಆಸ್ಟ್ರೇಲಿಯಾಗೆ ತಲೆನೋವು ತಂದಿತು.   ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ಕ್ಯಾಮರೂನ್ ಗ್ರೀನ್ ಹಾಫ್ ಸೆಂಚುರಿ ಸಿಡಿಸಿದರು. ಗ್ರೀನ್ ಕೇವಲ 21 ಎಸೆತದಲ್ಲಿ 52 ರನ್ ಸಿಡಿಸಿ ಔಟಾದರು. 

ಗ್ಲೆನ್ ಮ್ಯಾಕ್ಸ್‌ವೆಲ್ 6 ರನ್ ಸಿಡಿಸಿ ಔಟಾದರು. ಸ್ಟೀವನ್ ಸ್ಮಿತ್ 9 ರನ್ ಸಿಡಿಸಿ ಹೋರಾಟ ಅಂತ್ಯಗೊಳಿಸಿದರು. ಜೋಶ್ ಇಂಗ್ಲಿಸ್ ಹಾಗೂ ಡಿಮ್ ಡೇವಿಡ್ ಹೋರಾಟದಿಂದ ಆಸ್ಟ್ರೇಲಿಯಾ ಚೇತರಿಸಿಕೊಂಡಿತು. ಜೋಶ್ 24 ರನ್ ಸಿಡಿಸಿ ಔಟಾದರು. ಇತ್ತ ಮ್ಯಾಥ್ಯೂ ವೇಡ್ 1 ರನ್ ಸಿಡಿಸಿ ಔಟಾದರು.  ಟಿಮ್ ಡೇವಿಡ್ ಹಾಗೂ ಡೇನಿಯಲ್ ಸ್ಯಾಮ್ಸ್ ಹೋರಾಟ ಆಸ್ಟ್ರೇಲಿಯಾ ತಂಡದ ರನ್ ವೇಗ ಹೆಚ್ಚಿಸಿತು.  ಡೇವಿಡ್ ಹಾಫ್ ಸೆಂಚುರಿ ಸಿಡಿಸಿ ಔಟಾದರು. ಡೇನಿಯಲ್ ಸ್ಯಾಮ್ಸ್ ಉತ್ತಮ ಸಾಥ್ ನೀಡಿದರು. ಟಿಮ್ ಡೇವಿಡ್ 54 ರನ್ ಸಿಡಿಸಿ ಔಟಾದರು. ಸ್ಯಾಮ್ಸ್ ಅಜೇಯ 28 ರನ್ ಸಿಡಿಸಿದರು. ಈ ಮೂಲಕ 7 ವಿಕೆಟ್ ನಷ್ಟಕ್ಕೆ 186 ರನ್ ಸಿಡಿಸಿತು. 

ಭಾರತ ಹಾಗೂ ಆಸ್ಟ್ರೇಲಿಯಾ ಸರಣಿ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಈ ಮೂಲಕ 208 ರನ್ ಸಿಡಿಸಿತ್ತು. ಬೃಹತ್ ಮೊತ್ತ ದಾಖಲಿಸಿ ಗೆಲುವಿನ ವಿಶ್ವಾಸದಲ್ಲಿದ್ದ ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ಶಾಕ್ ನೀಡಿತ್ತು. ಈ ಬೃಹತ್ ಮೊತ್ತವನ್ನು ಆಸ್ಟ್ರೇಲಿಯಾ ಚೇಸ್ ಮಾಡಿತ್ತು. ಈ ಮೂಲಕ ಮೊದಲ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಇಷ್ಟೇ ಅಲ್ಲ ಸರಣಿಯಲ್ಲಿ 1-0 ಅಂತರ ಕಾಯ್ದುಕೊಂಡಿತ್ತು. ಇನ್ನು ಎರಡನೇ ಟಿ20 ಪಂದ್ಯ ಟೀಂ ಇಂಡಿಯಾದ ಆತಂಕ ಹೆಚ್ಚಿಸಿತ್ತು. ಕಾರಣ ಮಳೆ ಕಾರಣದಿಂದ ಪಂದ್ಯ ವಿಳಂಬವಾಗಿತ್ತು. ಕೇವಲ 8 ಪಂದ್ಯ ಆಯೋಜಿಸಲಾಗಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 90 ರನ್ ಸಿಡಿಸಿತ್ತು. ಈ ಗುರಿಯನ್ನು ಭಾರತ ಸುಲಭವಾಗಿ ಚೇಸ್ ಮಾಡಿತ್ತು. ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಹಾಗೂ ದಿನೇಶ್ ಕಾರ್ತಿಕ್ ಫಿನೀಶಿಂಗ್‌ನಿಂದ ಭಾರತ ಭರ್ಜರಿ ಗೆಲುವು ದಾಖಲಿಸಿ ಸರಣಿ ಸಮಬಲ ಮಾಡಿಕೊಂಡಿತು.

click me!