
ಎಡ್ಜ್‌ಬಾಸ್ಟನ್ (ಜೂ.14) ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಪಾಕಿಸ್ತಾನ ವಿರುದ್ದ ಮೊದಲ ಪಂದ್ಯದಲ್ಲಿ ಭಾರತ ಆಲ್ರೌಂಡರ್ ಪ್ರದರ್ಶನ ನೀಡಿದೆ. 171 ರನ್ ಟಾರ್ಗೆಟ್ ನೀಡಿದ ಬಳಿಕ ಬೌಲಿಂಗ್‌ನಲ್ಲಿ ಭಾರತ ಮಹಿಳಾ ತಂಡದ ದಾಳಿಗೆ ಪಾಕಿಸ್ತಾನ ಮಕಾಡೆ ಮಲಗಿದೆ. ಕೇವಲ 106 ರನ್‌ಗೆ ಆಲೌಟ್ ಆಗುವ ಮೂಲಕ ಪಾಕಿಸ್ತಾನ ಸೋಲಿಗೆ ಶರಣಾಗಿದೆ. ಮೊದಲ ಪಂದ್ಯದಲ್ಲಿ 64 ರನ್ ಅದ್ಭುತ ಗೆಲುವು ಸಾಧಿಸಿದ ಭಾರತ ಮಹಿಳಾ ತಂಡಕ್ಕೆ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
171 ರನ್ ಟಾರ್ಗೆಟ್ ಪಡೆದ ಪಾಕಿಸ್ತಾನ ಆರಂಭದಲ್ಲೇ ಅಬ್ಬರಿಸಿತು. ಮಬೀನಾ ಅಲಿ 41 ರನ್ ಸಿಡಿಸಿದರು. ಈ ಮೂಲಕ ಪಾಕಿಸ್ತಾನ ಅತೀವೇಗದಲ್ಲಿ 50 ರನ್ ಸಿಡಿಸಿತು. ಆದರೆ ಭಾರತ ಮಹಿಳಾ ತಂಡದ ಬೌಲಿಂಗ್ ದಾಳಿ ಮತ್ತಷ್ಟು ಬಿಗಿಗೊಳಿಸಿತು. ಪರಿಣಾಮ ಪಾಕಿಸ್ತಾನದ ವಿಕೆಟ್ ಪತನ ಆರಂಭಗೊಂಡಿತು. ಗುಲ್ ಫೆರೋಜಾ ವಿಕೆಟ್‌ನೊಂದಿಗೆ ಪಾಕಿಸ್ತಾನದ ಪತನ ಆರಂಭವಾಯಿತು. ಬಳಿಕ ನಿಲ್ಲಲೇ ಇಲ್ಲ.
ದೀಪ್ತಿ ಶರ್ಮಾ, ಶ್ರೀ ಚರ್ನಿ ಹಾಗೂ ಶೆಫಾಲಿ ವರ್ಮಾ ದಾಳಿಗೆ ವಿಕೆಟ್ ಪತನಗೊಂಡಿತು. ಇತ್ತ ಮುಬೀನಾ ಆಲಿ 41 ರನ್ ಸಿಡಿಸಿ ಮುನ್ನುಗ್ಗುತ್ತಿದ್ದರೆ, ದೀಪ್ತಿ ಶರ್ಮಾ ಮಾಡಿದ ರನೌಟ್ ಪಾಕಿಸ್ತಾನದ ಹೋರಾಟದ ಆತ್ಮವಿಶ್ವಾಸವನ್ನು ಕಸಿದುಕೊಂಡಿತು. ಭಾರತ ಮಹಿಳಾ ತಂಡದ ದಾಳಿಗೆ ಪಾಕಿಸ್ತಾನ ಬಳಿ ಉತ್ತರವಿರಲಿಲ್ಲ.
ಜುಲನ್ ಗೋಸ್ವಾಮಿ, 355 ವಿಕೆಟ್ ( ಭಾರತ)
ದೀಪ್ತಿ ಶರ್ಮಾ, 354 ವಿಕೆಟ್ (ಭಾರತ)
ಕ್ಯಾಥರಿನ್ ಸ್ಕಿವಿಯರ್ ಬ್ರಂಟ್, 335 ವಿಕೆಟ್ (ಇಂಗ್ಲೆಂಡ್)
ಎಲ್ಲಿಸ್ ಪೆರಿ, 332 ವಿಕೆಟ್ ( ಆಸ್ಟ್ರೇಲಿಯಾ)
ಪಾಕಿಸ್ತಾನ ಹೋರಾಟ ನೀಡಲು ಭಾರತದ ಬೌಲರ್ಸ್ ಅವಕಾಶ ನೀಡಲೇ ಇಲ್ಲ. 17ನೇ ಓವರ್‌ನಲ್ಲಿ ದೀಪ್ತಿ ಶರ್ಮಾ ಸತತ ವಿಕೆಟ್ ಕಬಳಿಸಿ ಮಿಂಚಿದರು. ದೀಪ್ತಿ 5 ವಿಕೆಟ್ ಕಬಳಿಸಿ ಮಿಂಚಿದರು. ಇತ್ತ ಶ್ರೀ ಚರ್ನಿ 3 ಹಾಗೂ ಶೆಫಾಲಿ 1 ವಿಕೆಟ್ ಕಬಳಿಸಿದರು. ಈ ಮೂಲಕ ಪಾಕಿಸ್ತಾನ 17 ಓವರ್‌ನಲ್ಲಿ 106 ರನ್‌ಗೆ ಆಲೌಟ್ ಆಯಿತು. ಭಾರತ 64 ರನ್ ಭರ್ಜರಿ ಗೆಲುವು ದಾಖಲಿಸಿತು.
ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಂದ್ಯದ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ಏಕೈಕ ಆಟಗಾರ್ತಿ ಅನ್ನೋ ಹೆಗ್ಗಳಿಕೆಗೆ ಶೆಫಾಲಿ ವರ್ಮಾ ಪಾತ್ರರಾಗಿದ್ದಾರೆ. ಶೆಫಾಲಿ ಪಂದ್ಯದ ಮೊದಲ ಎಸೆತವನ್ನೇ ಸಿಕ್ಸರ್ ಸಿಡಿಸಿದ್ದರು. ಪುರುಷರ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ ಮೊದಲ ಎಸೆತವನ್ನೇ ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 170 ರನ್ ಸಿಡಿಸಿತ್ತು. ಸ್ಮೃತಿ ಮಂಧನಾ 68, ನಾಯಕಿ ಹರ್ಮನ್‌ಪ್ರೀತ್ ಕೌರ್ 36, ರಿಚಾ ಘೋಷ್ 34 ರನ್ ಕಾಣಿಕೆ ನೀಡಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.