
ಜೋಹಾನ್ಸ್‌ಬರ್ಗ್(ಫೆ.08): ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದ್ದು, ಸರಿಸುಮಾರು ಒಂದು ವರ್ಷದ ಬಳಿಕ ಅನುಭವಿ ವೇಗಿ ಡೇಲ್ ಸ್ಟೇನ್ ತಂಡ ಕೂಡಿಕೊಂಡಿದ್ದಾರೆ.
ಡೇಲ್ ಸ್ಟೇನ್ ಗೂಗಲ್‌ಗೆ ಮನವಿ; ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ!
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲಿದ್ದು, ಫಾಫ್ ಡುಪ್ಲೆಸಿಸ್ ಹಾಗೂ ಕಗಿಸೋ ರಬಾಡಗೆ ವಿಶ್ರಾಂತಿ ನೀಡಲಾಗಿದೆ. ಡೇಲ್ ಸ್ಟೇನ್ 2019ರ ಮಾರ್ಚ್‌ನಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಭುಜದ ನೋವಿನ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದರು. ಏಕದಿನ ವಿಶ್ವಕಪ್ ಟೂರ್ನಿಯಿಂದಲೂ ಸ್ಟೇನ್ ಹೊರಬಿದ್ದಿದ್ದರು. 2020ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿರುವ ಸ್ಟೇನ್, ಇಂಗ್ಲೆಂಡ್ ವಿರುದ್ಧ ಮಿಂಚಲು ರೆಡಿಯಾಗಿದ್ದಾರೆ.
ನಿವೃತ್ತಿ ಹಿಂಪಡೆಯಲು ನಿರ್ಧರಿಸಿದ ಸಚಿನ್ ತೆಂಡುಲ್ಕರ್..!
ಇನ್ನುಳಿದಂತೆ ದೇಸಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಪೀಟ್ ವ್ಯಾನ್ ಬಿಲ್ಜೋನ್ ಹಾಗೂ ಸಿಸಂದಾ ಮಗಲಾ ಅವರು ಚೊಚ್ಚಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಫೆಬ್ರವರಿ 12ರಿಂದ ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ನಡುವಿನ ಟಿ20 ಸರಣಿ ಆರಂಭವಾಗಲಿದೆ.
ದಕ್ಷಿಣ ಆಫ್ರಿಕಾ ತಂಡ ಹೀಗಿದೆ:
ಕ್ವಿಂಟನ್ ಡಿಕಾಕ್(ನಾಯಕ), ರೀಜಾ ಹೆಂಡ್ರಿಕ್ಸ್, ತೆಂಬಾ ಬವುಮಾ, ರಾಸ್ಸಿ ವ್ಯಾನ್ ಡರ್ ಡ್ಯುಸೆನ್, ಡೇವಿಡ್ ಮಿಲ್ಲರ್, ಪೀಟ್ ವ್ಯಾನ್ ಬಿಲ್ಜೋನ್, ಡ್ವೇನ್ ಪ್ರಿಟೋರಿಯಸ್, ಆಂಡಿಲೇ ಫೆಲುಕ್ವಾಯೋ, ಜಾನ್-ಜಾನ್ ಸ್ಮುಟ್ಸ್, ಬ್ಯುರಾನ್ ಹೆಂಡ್ರಿಕ್ಸ್, ತಬ್ರೀಜ್ ಶಮ್ಸಿ, ಲುಂಗಿ ಎಂಗಿಡಿ, ಸಿಸಂದಾ ಮಗಲಾ, ಬಿಜ್ರೊನ್ ಫಾರ್ಟ್ಯುನ್, ಡೇಲ್ ಸ್ಟೇನ್, ಹೆನ್ರಿಚ್ ಕ್ಲಾಸೆನ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.