ಬಿಗ್ ಬ್ಯಾಶ್ ಲೀಗ್: ಸಿಡ್ನಿ ಸಿಕ್ಸರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ RCB ಕ್ರಿಕೆಟಿಗ..!

By Suvarna News  |  First Published Feb 8, 2020, 7:34 PM IST

2019-20ನೇ ಸಾಲಿನ ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಸಿಡ್ನಿ ಸಿಕ್ಸರ್ಸ್ ತಂಡ ಚಾಂಪಿಯನ್ ಆಗುವುದರೊಂದಿಗೆ ಚುಟುಕು ಮಹಾಸಂಗ್ರಾಮಕ್ಕೆ ತೆರೆಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಸದಸ್ಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಕುರಿತಾದ ವಿವರ ಇಲ್ಲಿದೆ ನೋಡಿ...


ಮೆಲ್ಬರ್ನ್(ಫೆ.08): ಮೆಲ್ಬರ್ನ್ ಸ್ಟಾರ್ಸ್ ತಂಡವನ್ನು ಮಣಿಸಿದ ಸಿಡ್ನಿ ಸಿಕ್ಸರ್ಸ್ ಬಿಗ್ ಬ್ಯಾಶ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಎರಡನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ಸದಸ್ಯ ಜೋಸ್ ಫಿಲಿಫ್ ಅರ್ಧಶತಕ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Only rain here is the confetti 🏆 pic.twitter.com/EDC82vQAJ1

— KFC Big Bash League (@BBL)

IPL 2020: ಬಲಿಷ್ಠ RCB ತಂಡದಲ್ಲಿ ಯಾರಿಗೆಲ್ಲಾ ಸಿಗಲಿದೆ ಚಾನ್ಸ್..?

Tap to resize

Latest Videos

ಸರಿಸುಮಾರು ಎರಡು ತಿಂಗಳು ನಡೆದ ಕ್ರಿಕೆಟ್ ಟೂರ್ನಿ ಈಗಾಗಲೇ ಹಲವು ಸ್ಮರಣೀಯ ಪಂದ್ಯಗಳಿಗೆ ಸಾಕ್ಷಿಯಾಗಿತ್ತು. ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು 12 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಗೆದ್ದ ಮೆಲ್ಬೊರ್ನ್ ಸ್ಟಾರ್ಸ್ ತಂಡವು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸಿಡ್ನಿ ಸಿಕ್ಸರ್ ತಂಡವು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಫಿಲಿಫ್(52) ಹಾಗೂ ಜೋರ್ಡನ್ ಸಿಲ್ಕ್(27) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 12 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 116 ರನ್‌ಗಳಿಸಿತ್ತು.

 

ಐಪಿಎಲ್‌ನಲ್ಲಿ ವಿಕೆಟ್‌ ಕೀಪಿಂಗ್‌ ಮಾಡ್ತಾರಾ ಡಿವಿಲಿಯರ್ಸ್?

Josh Philippe is the Player of the Final for his brilliant knock of 52 off 29 balls! pic.twitter.com/83OKQdOfLy

— KFC Big Bash League (@BBL)

ಇನ್ನು ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ಮೆಲ್ಬೊರ್ನ್ ಸ್ಟಾರ್ಸ್ ಆರಂಭದಲ್ಲೇ ನಿಕ್ ಮ್ಯಾಡಿಸನ್, ಮಾರ್ಕಸ್ ಸ್ಟೋನಿಸ್ ಹಾಗೂ ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ನಿಕ್ ಲಾರ್ಕಿನ್(38) ಹಾಗೂ ನೇಥನ್ ಕೌಲ್ಟನ್-ನೀಲ್(19) ಸ್ಫೋಟಕ ಬ್ಯಾಟಿಂಗ್ ನಡೆಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಸಿಡ್ನಿ ಸಿಡ್ನಿ ಸಿಕ್ಸರ್ ತಂಡವು 19 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ 2019-20ನೇ ಸಾಲಿನ ಬಿಗ್ ಬ್ಯಾಶ್ ಚಾಂಪಿಯನ್ ಆಗಿ ಮೆರೆದಾಡಿತು. ಈ ಮೊದಲು 2011-12ರಲ್ಲಿ ಸಿಡ್ನಿ ಸಿಕ್ಸರ್ಸ್ ತಂಡವು ಚೊಚ್ಚಲ ಬಾರಿಗೆ BBL ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

🏆 YOUR |09 CHAMPIONS! 🙌 pic.twitter.com/aXECG0NdTm

— Sydney Sixers (@SixersBBL)

ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ 20 ಲಕ್ಷ ರುಪಾಯಿಗೆ ಬೆಂಗಳೂರು ಪಾಲಾಗಿರುವ ಜೋಸ್ ಫಿಲಿಫ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಇನ್ನು ಟೂರ್ನಿಯುದ್ಧಕ್ಕೂ ಅತ್ಯದ್ಭುತ ಪ್ರದರ್ಶನ ತೋರಿದ ಮಾರ್ಕಸ್ ಸ್ಟೋನಿಸ್(17 ಪಂದ್ಯ 705 ರನ್) ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.
 

click me!