ಭಾರತ ವಿರುದ್ಧ ಸೋಲು ಕಂಡ ಬೆನ್ನಲ್ಲಿಯೇ ಪಾಕಿಸ್ತಾನದ ಆಟಗಾರರಿಗೆ ಶುರು ಚಳಿಜ್ವರ

By Santosh Naik  |  First Published Oct 17, 2023, 9:43 PM IST

ಭಾರತ ತಂಡದ ವಿರುದ್ಧ ಅಹಮದಾಬಾದ್‌ನಲ್ಲಿ ಏಳು ವಿಕೆಟ್‌ ಸೋಲು ಕಂಡ ಬಳಿಕ ಪಾಕಿಸ್ತಾನ ತಂಡದ ಆಟಗಾರರು ಬೆಂಗಳೂರಿಗೆ ಬಂದಿದ್ದಾರೆ. ಉದ್ಯಾನನಗರಿಗೆ ಬಂದ ಕೂಡಲೇ ಪಾಕಿಸ್ತಾನದ ಹಲವು ಆಟಗಾರರಿಗೆ ಚಳಿಜ್ವರ ಆರಂಭವಾಗಿದೆ.
 


ಬೆಂಗಳೂರು (ಅ.17): ಹೈವೋಲ್ಟೇಜ್‌ ಕಾದಾಟದಲ್ಲಿ ಟೀಂ ಇಂಡಿಯಾ ಎದುರು ತೀರಾ ಸುಲಭವಾಗಿ ಶರಣಾದ ಪಾಕಿಸ್ತಾನ ತಂಡದ ಹೆಚ್ಚಿನ ಆಟಗಾರರಿಗೆ ಚಳಿಜ್ವರ ಆರಂಭವಾಗಿದೆ. ಮುಂದಿನ ಪಂದ್ಯಕ್ಕಾಗಿ ಪಾಕಿಸ್ತಾನ ತಂಡದ ಆಟಗಾರರು ಇತ್ತೀಚೆಗೆ ಬೆಂಗಳುರಿಗೆ ಆಗಮಿಸಿದ್ದಾರೆ. ಆದರೆ, ಉದ್ಯಾನನಗರಿಗೆ ಆಗಮಿಸಿದ ಬೆನ್ನಲ್ಲಿಯೇ ಪಾಕ್‌ ತಂಡದ ಹೆಚ್ಚಿನ ಆಟಗಾರರಿಗೆ ವೈರಲ್‌ ಇನ್‌ಫೆಕ್ಷನ್‌ ಕಾಣಿಸಿಕೊಂಡಿದೆ. ತಂಡದ ಬಹುತೇಕ ಆಟಗಾರರು ಫ್ಲೂ ಹಾಗೂ ಅತಿಯಾದ ಜ್ವರದಿಂದ ಬಳಲುತ್ತಿದ್ದಾರೆ. ಹೆಚ್ಚಿನ ಆಟಗಾರರು ಚೇತರಿಕೆ ಕಂಡಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ತಿಳಿಸಿದ್ದರೂ, ಆಸೀಸ್‌ ವಿರುದ್ಧದ ಮುಂದಿನ ಪಂದ್ಯಕ್ಕಾಗಿ ಮಂಗಳವಾರ ನಡೆದ ಅಭ್ಯಾಸದ ವೇಳೆ ಕೆಲ ಆಟಗಾರರು ಭಾಗಿಯಾಗಿರಲಿಲ್ಲ. ಮೂಲಕಗಳ ಪ್ರಕಾರ ಅಬ್ದುಲ್ಲಾ ಶಫೀಕ್‌ ತಮ್ಮ ರೂಮ್‌ನಲ್ಲಿಯೇ ಕ್ವಾರಂಟೈನ್‌ ಆಗಿದ್ದಾರೆ. ಅವರಿಗೆ ಫ್ಲೂ ಹಾಗೂ ಜ್ವರ ಕಾಣಿಸಿಕೊಂಡಿದೆ. ಅದರೊಂದಿಗೆ ವೇಗದ ಬೌಲರ್‌ ಶಾಹೀನ್‌ ಶಾ ಅಫ್ರಿದಿ, ಸೌದ್‌ ಶಕೀಲ್‌ ಹಾಗೂ ಜಮಾನ್‌ ಖಾನ್‌ ಕೂಡ ವೈರಲ್‌ ಇನ್‌ಫೆಕ್ಷನ್‌ನಿಂದ ಬಳಲುತ್ತಿದ್ದಾರೆ. ಅಹಮದಾಬಾದ್‌ನಲ್ಲಿ ಪಾಕಿಸ್ತಾನ ಶನಿವಾರ ಭಾರತವನ್ನು ಎದುರಿಸಿದಾಗ ಉಸಾಮಾ ಮಿರ್ ಕೂಡ ಜ್ವರದಿಂದ ಅಸ್ವಸ್ಥರಾಗಿದ್ದರು. ಶುಕ್ರವಾರ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ನಡೆಯಲಿರುವ ಪಾಕಿಸ್ತಾನದ ಮುಂದಿನ ಪಂದ್ಯಕ್ಕೆ ಅಫ್ರಿದಿ ಫಿಟ್ ಆಗುವ ನಿರೀಕ್ಷೆಯಿದೆ. ಯಾವುದೇ ಆಟಗಾರರಲ್ಲಿ ಡೆಂಗ್ಯೂ ಲಕ್ಷಣಗಳಿಲ್ಲ ಎನ್ನುವ ಮಾಹಿತಿ ಲಭಿಸಿದೆ.

"ಕೆಲವು ಆಟಗಾರರು ಕಳೆದ ಕೆಲವು ದಿನಗಳಲ್ಲಿ ಜ್ವರದಿಂದ ಬಳಲುತ್ತಿದ್ದರು ಮತ್ತು ಅವರಲ್ಲಿ ಹೆಚ್ಚಿನವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ" ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ. "ಚೇತರಿಕೆಯ ಹಂತದಲ್ಲಿರುವವರು ತಂಡದ ವೈದ್ಯಕೀಯ ಸಮಿತಿಯ ಅವಲೋಕನದಲ್ಲಿ ಉಳಿಯುತ್ತಾರೆ." ಎಂದು ಮಾಹಿತಿ ನೀಡಿದೆ.

ಈ ಟೂರ್ನಿಗೂ ಮುನ್ನ  ಶುಭಮನ್ ಗಿಲ್ ಅವರು ಡೆಂಗ್ಯೂಗೆ ತುತ್ತಾಗಿದ್ದರು. ಇದರಿಂದಾಗಿ ಭಾರತದ ಮೊದಲ ಎರಡು ಪಂದ್ಯಗಳನ್ನು ತಪ್ಪಿಸಿಕೊಂಡರು, ಪಾಕಿಸ್ತಾನದ ವಿರುದ್ಧದ ಪಂದ್ಯದ ಸಮಯದಲ್ಲಿ ಅವರು ಚೇತರಿಸಿಕೊಂಡು ಕಣಕ್ಕೆ ಇಳಿದಿದ್ದರು.

'ನಾನು ಕಷ್ಟಪಟ್ಟು ಆ ಸೀನ್‌ನಲ್ಲಿ ನಟಿಸಿದ್ದೇನೆ, ನೀವದನ್ನ ಸೆಕ್ಸ್‌ ಕ್ಲಿಪ್‌ ಎನ್ನುತ್ತಿದ್ದೀರಿ..' ಮಾಧ್ಯಮಗಳ ವಿರುದ್ಧ ನಟಿ ಕಿಡಿ

ಭಾರತ ವಿರುದ್ಧದ ಪಂದ್ಯದ ಬಳಿಕ ಪಾಕಿಸ್ತಾನ ತಂಡ ಭಾನುವಾರ ಬೆಂಗಳೂರಿಗೆ ಆಗಮಿಸಿದೆ. ಪಾಕಿಸ್ತಾನ ತನ್ನ ಮೊದಲ ಎರಡು ಪಂದ್ಯಗಳನ್ನು ನೆದರ್ಲ್ಯಾಂಡ್ಸ್ ಮತ್ತು ಶ್ರೀಲಂಕಾ ವಿರುದ್ಧ ಹೈದರಾಬಾದ್‌ನಲ್ಲಿ ಗೆದಿದ್ದರೆ, ಭಾರತ ವಿರುದ್ಧ ಸೋಲು ಕಂಡಿತ್ತು.

Tap to resize

Latest Videos

ಆಸೀಸ್‌-ಶ್ರೀಲಂಕಾ ಪಂದ್ಯದ ನಡುವೆ ಡಸ್ಟ್‌ ಸ್ಟ್ರೋಮ್‌, ಪ್ರೇಕ್ಷಕರ ಗ್ಯಾಲರಿಯಲ್ಲಿ ಬಿದ್ದ ಹೋರ್ಡಿಂಗ್‌!

click me!