Breaking: ವಿಶ್ವಕಪ್‌ನಲ್ಲಿ ಪಾಕ್‌ ಕಳಪೆ ನಿರ್ವಹಣೆ, ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಇಂಜುಮಾಮ್‌ ರಾಜೀನಾಮೆ!

By Santosh NaikFirst Published Oct 30, 2023, 7:04 PM IST
Highlights

ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತನ್ನ ಈವರೆಗಿನ ಅತ್ಯಂತ ಕಳಪೆ ನಿರ್ವಹಣೆ ತೋರಿದೆ. ಇದರ ಬೆನ್ನಲ್ಲಿಯೇ ಪುರುಷರ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಇಂಜುಮಾಮ್‌ ಉಲ್‌ ಹಕ್‌ ತಮ್ಮ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ಸಲ್ಲಿಸಿದ್ದಾರೆ.


ಇಸ್ಲಾಮಾಬಾದ್‌ (ಅ..30): ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ನಾಯಕ ಇಂಜಮಾಮುಲ್ ಹಕ್ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಸಾಮಾ ಟಿವಿ ಕಾರ್ಯಕ್ರಮ 'ಝೋರ್ ಕಾ ಜೋರ್' ಸಂದರ್ಶನದಲ್ಲಿಯೇ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ತಾವು ರಾಜೀನಾಮೆ ನೀಡಿರುವುದನ್ನು ಖಚಿತಪಡಿಸಿದ್ದಾರೆ. “ನಾನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಆರೋಪಿಸಲಾಗಿದೆ. ಇಂದು ನಾನು ಮಂಡಳಿಯ ಬಳಿಗೆ ಹೋಗಿ ಯಾವುದೇ ಅನುಮಾನಗಳಿದ್ದರೆ ವಿಚಾರಣೆ ನಡೆಸುವಂತೆ ಕೇಳಿದೆ. ಆ ನಂತರ ಅವರು ಐದು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ ಎನ್ನುವ ಮಾಹಿತಿ ನನಗೆ ಬಂದಿತು ಎಂದು ಹಕ್ ಹೇಳಿದರು, ಸಮಿತಿಯು ತನಿಖೆ ಮತ್ತು ಅದರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವವರೆಗೆ ತಾವು ಹುದ್ದೆಯಿಂದ ಕೆಳಗಿಳಿಯಲು ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ವಿಚಾರಣೆ ಮುಗಿದ ನಂತರ ಪಿಸಿಬಿ ಜೊತೆ ಕುಳಿತುಕೊಳ್ಳಲು ಸಿದ್ಧ ಎಂದು ಅವರು ಹೇಳಿದರು. 

"ನಾವು ಕ್ರಿಕೆಟಿಗರು ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸಲು ನಾವು ಎಲ್ಲಾ ಸಮಯದಲ್ಲೂ ಲಭ್ಯರಿದ್ದೇವೆ. ನಾನು ವಿಚಾರಣೆಯನ್ನು ಎದುರಿಸುತ್ತಿರುವ ಕಾರಣ ಮತ್ತು ನನ್ನ ಕೆಲಸದ ಸ್ವರೂಪದ ಕಾರಣ, ನಾನು ಈ ಹುದ್ದೆಯನ್ನು ತೊರೆಯಬೇಕು ಮತ್ತು ಅವರಿಗೆ ತನಿಖೆ ನಡೆಸಲು ಅವಕಾಶ ನೀಡಬೇಕು, ”ಎಂದು ಪಾಕಿಸ್ತಾನ ತಂಡ ಶ್ರೇಷ್ಠ ಹಾಗೂ ಶಾಂತ ಸ್ವಭಾವದ ನಾಯಕರಲ್ಲಿ ಒಬ್ಬರಾದ ಇಂಜುಮಾಮ್‌ ಹೇಳಿದ್ದಾರೆ.



ಜನರು ಯಾವುದೇ ಪುರಾವೆಗಳಿಲ್ಲದೆ ಕಾಮೆಂಟ್‌ಗಳನ್ನು ಮಾಡುತ್ತಿರುವುದು ನೋವಿನ ಸಂಗತಿ ಎಂದು ಅವರು ಹೇಳಿದರು. "ನಾನು ಮನುಷ್ಯ ಮತ್ತು ಅದು ನೋವುಂಟುಮಾಡುತ್ತದೆ. ನಾನು ಪಾಕಿಸ್ತಾನವನ್ನು 20 ವರ್ಷಗಳ ಕಾಲ ಪ್ರತಿನಿಧಿಸಿದ್ದೇನೆ. ನಾನು ಜನರಿಗೆ ಗೊತ್ತಿಲ್ಲದವನಲ್ಲ. ಇಂತಹ ಆರೋಪಗಳು ಬಂದಾಗ ನೋವಾಗುತ್ತದೆ' ಎಂದು ಹೇಳಿದ್ದಾರೆ.

'ನೀವು ಇಂಡಿಯಾ ಕ್ಯಾಪ್ಟನ್‌ ಆಗಿರ್ಬಹುದು, ಹೆಂಡ್ತಿ ಮುಂದೆ ಅದ್ಯಾವುದು ಲೆಕ್ಕಕ್ಕಿಲ್ಲ..' ಅವಿವಾಹಿತರಿಗೆ ಧೋನಿ ಬಂಪರ್‌ ಟಿಪ್ಸ್‌!

ಕಳೆದ ಆಗಸ್ಟ್‌ 7 ರಂದು ಇಂಜುಮಾಮ್‌ ಉಲ್‌ ಹಕ್‌ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಇದು ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅವರ 2ನೇ ಅವಧಿ ಎನಿಸಿತ್ತು. ಈ ಹಿಂದೆ 2016 ರಲ್ಲಿ ಅದೇ ಪಾತ್ರವನ್ನು ನಿರ್ವಹಿಸಿದ್ದರು. ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ 2019 ರಲ್ಲಿ ಅವರು ಈ ಸ್ಥಾನವನ್ನು ತೊರೆದಿದ್ದರು. ನೆದರ್‌ಲ್ಯಾಂಡ್ಸ್ ಮತ್ತು ಶ್ರೀಲಂಕಾ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಜಯಗಳಿಸಿದ ನಂತರ ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸತತ ನಾಲ್ಕು ಸೋಲುಗಳನ್ನು ಅನುಭವಿಸಿದ ಪಾಕಿಸ್ತಾನ ತಂಡ, ವಿಶ್ವಕಪ್‌ನಲ್ಲಿನ ಕಳಪೆ ಪ್ರದರ್ಶನದ ಕಾರಣದಿಂದಾಗಿ ಜನರಿಂದ ತೀವ್ರ ಟೀಕೆ ಎದುರಿಸುತ್ತಿದೆ.

ಮಗನ ಬರ್ತ್‌ಡೇ ಜೊತೆಯಾಗಿ ಆಚರಿಸಿದ ಸಾನಿಯಾ-ಶೋಯೆಬ್‌, 'ಡೈವೋರ್ಸ್‌ ಆಗಿರೋ ಬಗ್ಗೆ ಡೌಟೇ ಇಲ್ಲ' ಎಂದ ಫ್ಯಾನ್ಸ್‌!

click me!