Latest Videos

'ನೀವು ಇಂಡಿಯಾ ಕ್ಯಾಪ್ಟನ್‌ ಆಗಿರ್ಬಹುದು, ಹೆಂಡ್ತಿ ಮುಂದೆ ಅದ್ಯಾವುದು ಲೆಕ್ಕಕ್ಕಿಲ್ಲ..' ಅವಿವಾಹಿತರಿಗೆ ಧೋನಿ ಬಂಪರ್‌ ಟಿಪ್ಸ್‌!

By Santosh NaikFirst Published Oct 30, 2023, 5:41 PM IST
Highlights

MS Dhoni tips on marriage: ಅವಿವಾಹಿತ ಪುರುಷರಿಗೆ ಎಂಎಸ್‌ ಧೋನಿ ಸ್ಪೆಷಲ್‌ ಟಿಪ್ಸ್‌ ನೀಡಿದ್ದಾರೆ. ಜೀವನದಲ್ಲಿ ಒಂದು ಹುಡುಗಿಯ ಜೊತೆ ಸಂತೋಷವಾಗಿರಬಹುದು ಎನಿಸಿದರೆ, ಖಂಡಿತವಾಗಿ ಮದುವೆಯಾಗಿ ಎಂದಿದ್ದಾರೆ. ಹುಡುಗರ ಜೀವನದಲ್ಲಿ ಪತ್ನಿ ಬಂದ ಬಳಿಕವೇ ಲೈಫ್‌ ಸ್ಪೈಸಿ ಆಗಿರುತ್ತದೆ ಎಂದಿದ್ದಾರೆ.

ಬೆಂಗಳೂರು (ಅ.30): ಮೈದಾನದಲ್ಲಿ ಯಾವುದೇ ಸಮಸ್ಯೆ ಆದ್ರೂ ಎಂಎಸ್‌ ಧೋನಿ ಕ್ಯಾಪ್ಟನ್‌ ಆಗಿದ್ದಾಗ ಫ್ಯಾನ್ಸ್‌ಗಳು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅದಕ್ಕೆ ಕಾರಣ ಅದೇನೇ ಜಟಿಲ ಪರಿಸ್ಥಿತಿ ಬಂದರೂ ಧೋನಿ ಅದನ್ನೂ ಸಮರ್ಥವಾಗಿ ನಿಭಾಯಿಸುತ್ತಾರೆ ಎನ್ನುವ ಧೈರ್ಯ ತಂಡದ ಆಟಗಾರರಿಗೂ ಹಾಗೂ ಅಭಿಮಾನಿಗಳಿಗೂ ಇತ್ತು. ಅದಕ್ಕಾಗಿ ಧೋನಿಯನ್ನು ಕ್ಯಾಪ್ಟನ್‌ ಕೂಲ್‌ ಎಂದು ಕರೆದಿದ್ದರು. ಆದರೆ, ಧೋನಿ (MS Dhoni) ಮೈದಾನದಲ್ಲಿ ಮಾತ್ರವಲ್ಲ. ಮನೆಯಲ್ಲೂ ಅದರಲ್ಲೂ ಪತ್ನಿಯ ಎದುರಲ್ಲೂ ಕ್ಯಾಪ್ಟನ್‌ ಕೂಲ್‌ ಎನ್ನುವುದು ಅವರ ಇತ್ತೀಚಿನ ಮಾತಿನಿಂದಲೇ ಗೊತ್ತಾಗಿದೆ. ಕಾಮೆಡಿಯನ್‌ ತನ್ಮಯ್‌ ಭಟ್‌ ಮತ್ತು ಫೈನಾನ್ಸ್‌ ಇನ್‌ಫ್ಲುಯೆನ್ಸರ್‌ ಶರನ್‌ ಹೆಗ್ಡೆ ಅವರೊಂದಿಗೆ ರಿಗಿ ಆಪ್‌ ಆಯೋಜಿಸಿದ್ದ ಪ್ರಭಾವ್‌ 2023 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಂಎಸ್‌ ಧೋನಿ, ತಮ್ಮ ಎದುರಿಗಿದ್ದ ಕೆಲವು ಅವಿವಾಹಿತ ಪುರುಷರಿಗೆ ಹಾಗೂ ಪ್ರೇಕ್ಷಕರಿಗೆ ಕೆಲವು ಬಂಪರ್‌ ಟಿಪ್ಸ್‌ಗಳನ್ನು ನೀಡಿದರು. ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ ಧೋನಿ, ನನ್ನ ಕುಟುಂಬ ಹಾಗೂ ಮನೆಯನ್ನು ಪತ್ನಿ ಪಡೆಸುತ್ತಿರುವ ರೀತಿಯ ಬಗ್ಗೆ ಮಾತನಾಡಿದರು. ಪತ್ನಿ ಸಾಕ್ಷಿ (Sakshi Singh Rawat)  ಮಾತ್ರವಲ್ಲ ತಮ್ಮ ತಾಯಿಯ ಬಗ್ಗೆಯೂ ಅವರು ಮಾತನಾಡಿದರು. ಅತಿ ಕಡಿಮೆ ಬಜೆಟ್‌ನಲ್ಲಿ ಮನೆಯನ್ನು ಸಂಭಾಳಿಸವುದು ಹೇಗೆ ಎನ್ನುವುದು ಅವರಿಗೆ ಗೊತ್ತು ಎಂದಿದ್ದಾರೆ. ತಮ್ಮ ಮನೆ ಹಾಗೂ ಜೀವನ ಎರಡರಲ್ಲೂ ಸ್ಥಿರತೆ ಕಾಯ್ದುಕೊಂಡಿರುವ ವಿಚಾರದಲ್ಲಿ ಧೋನಿ ಕೆಲವೊಂದು ತಮಾಷೆಯ ಸಂಗತಿಗಳನ್ನೂ ತಿಳಿಸಿದರು.

ನನಗೆ ಅನಿಸೋದೇನೆಂದರೆ, ಪುರುಷರ ಜೀವನದಲ್ಲಿ ಮಸಾಲಾ ಏನಾದರೂ ಬರೋದಿದ್ದರೆ ಅದು ಹೆಂಡತಿ ಬಳಿಕ ಮಾತ್ರ. ಆಕೆ ಬಂದ ಬಳಿಕವೇ ನಮ್ಮ ಜೀವನ ಸಾಗುತ್ತದೆ. ನೀವು ಟೀಮ್‌ ಇಂಡಿಯಾ ಕ್ಯಾಪ್ಟನ್‌ ಆಗಿರಬಹುದು ಅಥವಾ ಮಾಜಿ ಕ್ಯಾಪ್ಟನ್‌ ಆಗಿರಬಹುದು. ಅವರ ಮುಂದೆ ಇದ್ಯಾವುದು ಲೆಕ್ಕಕ್ಕೆ ಬರೋದಿಲ್ಲ ಎಂದು ಎಂಎಸ್‌ ಧೋನಿ ಹೇಳುವುದರೊಂದಿಗೆ ತಮ್ಮ ಜೀವನದಲ್ಲೂ ಕೆಲ ವಿಚಾರದಲ್ಲಿ ಹೆಂಡತಿಯೇ ಬಾಸ್‌ ಎಂದು ತಿಳಿಸಿದ್ದಾರೆ.

'ನಿಮ್ಮ ಮನೆಯಲ್ಲಿ ನಿಮಗೆ ಒಂದು ಸ್ಥಾನ ಅಂತಾ ಇರುತ್ತದೆ. ಆದರೆ, ಅದೂ ಕೂಡ ನಿಮ್ಮ ಆಯ್ಕೆ ಆಗಿರೋದಿಲ್ಲ..'  ಎಂದು ಹೇಳಿದ ಧೋನಿ, ಸಾಮಾನ್ಯವಾಗಿ ಪತ್ನಿ ತನಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡಿರುತ್ತಾರೆ. ಆದರೆ, ಅದು ಗಂಡನದೇ ನಿರ್ಧಾರ ಎನ್ನುವಂತೆ ಬಿಂಬಿಸಿರುತ್ತಾರೆ ಎನ್ನುವುದನ್ನು ತಮಾಷೆಯಾಗಿ ಒಪ್ಪಿಕೊಂಡದರು. ಅವರು ಜೀವನದ ದೊಡ್ಡ ಪಾತ್ರದಲ್ಲಿಯೂ ನಮಗೆ ಸಹಾಯ ಮಾಡುತ್ತಾರೆ. ಜೀವನ ಅನ್ನೋದು ನೀವೇ ಹೇಳಿರುವ ಹಾಗೆ ಅಸ್ತವ್ಯಸ್ತವಾಗಿರುತ್ತದೆ. ಆದರೆ, ನಿಮ್ಮ ಮನೆಯಲ್ಲಿ ಒಬ್ಬರು ಟ್ರೇನರ್‌ ಇರುತ್ತಾರೆ. ಜೀವನದಲ್ಲಿ ಇಂಥ ಅಸ್ತವ್ಯಸ್ಥಗಳನ್ನು ಹೇಗೆ ನಿಯಂತ್ರಣ ಮಾಡಬೇಕು ಎನ್ನುವ ನಿಟ್ಟಿನಲ್ಲಿಯೇ ಮನೆಯಲ್ಲಿಯೇ ಅಂತಾ ವಾತಾವರಣ ಕ್ರಿಯೇಟ್‌ ಮಾಡಿ ತರಬೇತಿ ನೀಡುತ್ತಾರೆ' ಎಂದು ಹಾಸ್ಯ ಚಟಾಕಿ ಹಾರಿಸಿದರು.

ಪತ್ನಿಯ ಬಗ್ಗೆ ತಮಾಷೆ ಏನೇ ಇರಲಿ, ಮನೆಯನ್ನು ನಡೆಸುವವರು ಅವರು. 'ಈಗ ನಾವೇನೇ ಅವರ ಬಗ್ಗೆ ತಮಾಷೆ ಮಾಡಬಹುದು. ಆದರೆ, ಪತ್ನಿ ಒಂದು ಕುಟುಂಬದ ಸ್ತಂಭ ಇದ್ದಂತೆ. ಅದು ನನ್ನ ಪತ್ನಿಯೇ ಆಗಿರಬಹುದು ನನ್ನ ತಾಯಿಯೇ ಆಗಿರಬಹುದು. ನನ್ನ ಕುಟುಂಬವನ್ನು ನಡೆಸಿದ್ದು ಅವರು' ಎಂದು ಹೇಳಿದ್ದಾರೆ.

ಟೀಮ್‌ ಇಂಡಿಯಾ ಮಾಜಿ ನಾಯಕ ಎಂಎಸ್‌ ಧೋನಿ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ದುಡಿದು ಸಂಬಳ ತರೋದು ಮಾತ್ರ ತಂದೆಗೆ ತಿಳಿದಿತ್ತು. ಅದನ್ನು ತಾಯಿಗೆ ನೀಡುತ್ತಿದ್ದರು. ಕುಟುಂಬವನ್ನು ಆಕೆ ಅದರಲ್ಲಿ ನಿಭಾಯಿಸಬೇಕಿತ್ತು. ಒಂದು ದಿನವೂ ಈ ಬಗ್ಗೆ ತಂದೆ ಪ್ರಶ್ನೆ ಮಾಡಿರಲಿಲ್ಲ ಎಂದಿದ್ದಾರೆ. 'ಆಕೆಗೆ ಒಂದು ಬಜೆಟ್‌ ಇರುತ್ತಿತ್ತು. ತಿಂಗಳಿನ 30 ದಿನವನ್ನು ಆಕೆ ಅದರಲ್ಲಿಯೇ ನಿಭಾಯಿಸಬೇಕಿತ್ತು. ಅದರಲ್ಲಿ ಆಕೆ ದಿ ಬೆಸ್ಟ್‌ ಎನಿಸಿದ್ದರು. ನಮ್ಮ ಕುಟುಂಬಕ್ಕೆ ನೆಮ್ಮದಿ ತರುವಂಥ ವ್ಯಕ್ತಿಗಳು ಅವರು. ಅವರನ್ನು ನಾವು ಬೆಂಬಲಿಸಬೇಕು. ಅವರಲ್ಲಿ ನೀವು ಏನು ಬೇಕಾದರೂ ಕೇಳಬಹುದು. ಹಾಗೇನಾದರೂ ನನಗೆ ಬೇಸರವಾದಾಗ ನನ್ನ ಬೇಸರವನ್ನು ಅವರ ಮೇಲೆ ತೋಡಿಕೊಳ್ಳುತ್ತಿದ್ದೆ. ಇದು ಒಳ್ಳೆಯ ಅಂಶವಲ್ಲ ಎನ್ನುವುದು ನನಗೆ ಗೊತ್ತು. ಆದರೆ, ಇದಕ್ಕಾಗಿ ಕೊನೆಗೆ ನಾನೇ ಭಾರಿ ಬೆಲೆಯನ್ನು ತೆರಬೇಕಾಗುತ್ತದೆ ಎನ್ನುವುದು ಗೊತ್ತಿತ್ತು. ಆದರೆ, ಜೀವನ ಅನ್ನೋದೇ ಹೀಗೆ..' ಎಂದು ಎಂಎಸ್‌ ಹೇಳಿದ್ದಾರೆ.

ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಐಪಿಎಲ್ ನಿವೃತ್ತಿ ಮಾತು ತಳ್ಳಿಹಾಕಿದ ಧೋನಿ !

ಒಂದು ಹುಡುಗಿಯೊಂದಿಗೆ ನೀವು ಜೀವಮಾನ ಪೂರ್ತಿ ಖುಷಿಯಾಗಿರಬಹುದು ನಿಮಗೆ ಅನಿಸಿದರೆ, ಖಂಡಿತವಾಗಿ ಮದುವೆಯಾಗಿ ಎಂದು ಈ ವೇಳೆ ಪ್ರೇಕ್ಷಕರಿಗೆ ಧೋನಿ ಸಲಹೆ ನೀಡಿದರು. ಧೋನಿ 2010 ರಲ್ಲಿ ಡೆಹ್ರಾಡೂನ್‌ನಲ್ಲಿ ಸಾಕ್ಷಿ ಸಿಂಗ್ ರಾವತ್ ಅವರನ್ನು ವಿವಾಹವಾದರು. ವಿವಾಹವು ಖಾಸಗಿಯಾಗಿ ನಡೆದಿತ್ತು. ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರವೇ ಈ ಮದುವೆಯಲ್ಲಿದ್ದರು. ಎಂಎಸ್ ಧೋನಿ ಮತ್ತು ಸಾಕ್ಷಿ ಧೋನಿಗೆ ಎಂಟು ವರ್ಷದ ಮಗಳು ಜೀವಾ ಧೋನಿ ಇದ್ದಾಳೆ.

35 ವರ್ಷದ ಪ್ರಖ್ಯಾತ ಸೀರಿಯಲ್‌ ನಟಿ ಹಠಾತ್‌ ನಿಧನ, ಇಂಡಸ್ಟ್ರೀಗೆ ಶಾಕ್‌!

click me!