ODI World Cup 2023: ಧರ್ಮಶಾಲಾದಲ್ಲಿ ಭಾರತ-ಕಿವೀಸ್‌ ವಿಶ್ವಕಪ್‌ ಪಂದ್ಯಕ್ಕೆ ಆಕ್ಷೇಪ..!

By Naveen Kodase  |  First Published Aug 11, 2023, 11:01 AM IST

ಸಣ್ಣ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್‌ ವಿಶ್ವಕಪ್‌ ಪಂದ್ಯ
ಐಸಿಸಿಗೆ ಟಿಕೆಟ್ ಹಣ ನಷ್ಟ ಆತಂಕ
ಐಸಿಸಿಗೆ ಹಣ ನಷ್ಟ ಭೀತಿ ಏಕೆ?


ನವದೆಹಲಿ(ಆ.11): ವಿಶ್ವಕಪ್‌ ಆಯೋಜನೆಯಲ್ಲಿ ಈಗಾಗಲೇ ಹಲವು ಎಡವಟ್ಟುಗಳನ್ನು ಮಾಡಿರುವ ಬಿಸಿಸಿಐ, ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಹೈವೋಲ್ಟೇಜ್‌ ಪಂದ್ಯವನ್ನು ಧರ್ಮಶಾಲಾದ ಸಣ್ಣ ಕ್ರೀಡಾಂಗಣದಲ್ಲಿ ಆಯೋಜಿಸುವ ಮೂಲಕ ಐಸಿಸಿಯ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಉಭಯ ದೇಶಗಳ ನಡುವಿನ ಅ.22ರ ಪಂದ್ಯಕ್ಕೆ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸುವ ನಿರೀಕ್ಷೆ ಇದೆಯಾದರೂ ಕೇವಲ 23,000 ಸಾಮರ್ಥ್ಯವಿರುವ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ(ಎಚ್‌ಪಿಸಿಎ)ಯ ಕ್ರೀಡಾಂಗಣವನ್ನು ಬಿಸಿಸಿಐ ನಿಗದಿಪಡಿಸಿದೆ. ಭಾರತ-ನ್ಯೂಜಿಲೆಂಡ್‌ ಪಂದ್ಯವನ್ನು ಎಲ್ಲೇ ನಡೆಸಿದರೂ ಕ್ರೀಡಾಂಗಣ ಭರ್ತಿಯಾಗಲಿದೆ. ದೊಡ್ಡ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿದ್ದರೆ ಟಿಕೆಟ್‌ ಮಾರಾಟದಿಂದ ಹೆಚ್ಚು ಆದಾಯ ಸಿಗುತಿತ್ತು. ಆದರೆ ಬಿಸಿಸಿಐನ ನಿರ್ಧಾರಕ್ಕೆ ಐಸಿಸಿ ಹಣಕಾಸು ವಿಭಾಗ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ. ಟಿಕೆಟ್‌ ಕೊರೆತೆ ಎದುರಾಗುವ ನಿರೀಕ್ಷೆ ಇದ್ದು, ಅಭಿಮಾನಿಗಳೂ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

Tap to resize

Latest Videos

ಮಹಾರಾಜ ಟಿ20 ಟ್ರೋಫಿ: ಕರ್ನಾಟಕ ಕ್ರಿಕೆಟ್‌ನಲ್ಲಿ ಕನ್ನಡ ಕಗ್ಗೊಲೆ! ಕರ್ನಾಟಕ ಕ್ರಿಕೆಟ್‌ನಲ್ಲಿ ಕನ್ನಡ ನಾಪತ್ತೆ..!

ಐಸಿಸಿಗೆ ನಷ್ಟ ಏಕೆ?

ವಿಶ್ವಕಪ್‌ ಆಯೋಜಿಸುವ ಕ್ರೀಡಾಂಗಣಗಳ ಒಟ್ಟು ಸಾಮರ್ಥ್ಯದ ಶೇ.60-70ರಷ್ಟು ಟಿಕೆಟ್‌ಗಳನ್ನಷ್ಟೇ ಆತಿಥ್ಯ ವಹಿಸುವ ರಾಜ್ಯ ಸಂಸ್ಥೆ ಅಥವಾ ಆಯೋಜಕರು ಮಾರಾಟ ಮಾಡಲು ಸಾಧ್ಯವಿರಲಿದೆ. ನಿಯಮದ ಪ್ರಕಾರ, ಪ್ರತಿ ಪಂದ್ಯಕ್ಕೆ ಐಸಿಸಿ ಹಾಗೂ ಬಿಸಿಸಿಐ 300 ಹಾಸ್ಪಿಟಾಲಿಟಿ(ಉತ್ಕೃಷ್ಟ ದರ್ಜೆ) ಟಿಕೆಟ್‌ಗಳನ್ನು ಉಚಿತವಾಗಿ ನೀಡಬೇಕು. ಇದಲ್ಲದೇ ಸುಮಾರು 1300 ಸಾಮಾನ್ಯ ಟಿಕೆಟ್‌ಗಳನ್ನು ಐಸಿಸಿಗೆ, 500 ಟಿಕೆಟ್‌ಗಳನ್ನು ಬಿಸಿಸಿಐಗೆ ಉಚಿತವಾಗಿ ಕೊಡಬೇಕು. ಇದಲ್ಲದೇ ಇನ್ನೂ ಕೆಲ ಟಿಕೆಟ್‌ಗಳನ್ನು ಉಚಿತವಾಗಿ ಹಂಚಿಕೆ ಮಾಡಬೇಕಾದ ಅನಿವಾರ್ಯತೆಗಳೂ ಎದುರಾಗಬಹುದು. ಹೀಗಾಗಿ ಧರ್ಮಶಾಲಾವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಲಭ್ಯವಿರುವ 23,000ದ ಪೈಕಿ ಗರಿಷ್ಠ 16,000-17,000 ಟಿಕೆಟ್‌ಗಳಷ್ಟೇ ಮಾರಾಟಕ್ಕೆ ಲಭ್ಯವಾಗಬಹುದು.

Asia Cup 2023: ಏಷ್ಯಾಕಪ್ ಟೂರ್ನಿಗೆ ಆತಿಥೇಯ ಪಾಕಿಸ್ತಾನ ತಂಡ ಪ್ರಕಟ..! ಸ್ಟಾರ್ ಕ್ರಿಕೆಟಿಗರಿಗೆ ಸ್ಥಾನ

ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್‌ ಅಕ್ಟೋಬರ್ 5ರಿಂದ ಆರಂಭಗೊಳ್ಳಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲಿದೆ. ಫೈನಲ್‌ ಪಂದ್ಯವು ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತ ಕ್ರಿಕೆಟ್‌ ತಂಡವು ಕಳೆದೊಂದು ದಶಕದಿಂದಲೂ ಐಸಿಸಿ ಟ್ರೋಫಿಯ ಬರ ಎದುರಿಸುತ್ತಾ ಬಂದಿದೆ. 2013ರಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಟೀಂ ಇಂಡಿಯಾ ಹಲವು ಬಾರಿ ಐಸಿಸಿ ಟೂರ್ನಿಯಲ್ಲಿ ನಾಕೌಟ್‌ ಹಂತದಲ್ಲೇ ಹೊರಬೀಳುವ ಮೂಲಕ ನಿರಾಸೆ ಅನುಭವಿಸುತ್ತಲೇ ಬಂದಿದೆ. ಇನ್ನು ಧೋನಿ ನೇತೃತ್ವದಲ್ಲೇ ಟೀಂ ಇಂಡಿಯಾ 2011ರಲ್ಲಿ ಕೊನೆಯ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ಜಯಿಸಿತ್ತು.ಇದಾದ ಬಳಿಕ ಭಾರತ ವಿಶ್ವಕಪ್ ಜಯಿಸಿಲ್ಲ. ಇದೀಗ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತವೇ ಆತಿಥ್ಯ ವಹಿಸುತ್ತಿದ್ದು, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. 

click me!