ಬೆಂಗಳೂರು ಮೂಲದ ಕಿವೀಸ್ ಆಲ್ರೌಂಡರ್ ರಚಿನ್‌ ರವೀಂದ್ರಗೆ ಒಲಿದ ಐಸಿಸಿ ತಿಂಗಳ ಆಟಗಾರ ಗೌರವ

By Kannadaprabha News  |  First Published Nov 11, 2023, 1:07 PM IST

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದ ರಚಿನ್ ರವೀಂದ್ರ, ಆ ಬಳಿಕವೂ ಸ್ಥಿರ ಪ್ರದರ್ಶನ ತೋರಿ ಮಿಂಚುತ್ತಿದ್ದಾರೆ. ಇದುವರೆಗೂ ನ್ಯೂಜಿಲೆಂಡ್ ಪರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಎಲ್ಲಾ 9 ಪಂದ್ಯಗಳನ್ನಾಡಿ ಮೂರು ಶತಕ ಸಹಿತ 565 ರನ್ ಸಿಡಿಸಿದ್ದಾರೆ. 


ದುಬೈ(ನ.11): ವಿಶ್ವಕಪ್‌ನಲ್ಲಿ ಅಭೂಪೂರ್ವ ಪ್ರದರ್ಶನದೊಂದಿಗೆ ಎಲ್ಲರ ಗಮನ ಸೆಳೆಯುತ್ತಿರುವ ನ್ಯೂಜಿಲೆಂಡ್‌ನ ಯುವ ಕ್ರಿಕೆಟಿಗ ರಚಿನ್‌ ರವೀಂದ್ರ ಐಸಿಸಿ ಅಕ್ಟೋಬರ್‌ ತಿಂಗಳ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಚಿನ್‌ ಜೊತೆ ಪ್ರಶಸ್ತಿ ರೇಸ್‌ನಲ್ಲಿ ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್‌ ಬೂಮ್ರಾ, ದ.ಆಫ್ರಿಕಾದ ಕ್ವಿಂಟನ್‌ ಡಿ ಕಾಕ್‌ ಕೂಡಾ ಇದ್ದರು. ಇದೇ ವೇಳೆ ಮಹಿಳೆಯರ ವಿಭಾಗದಲ್ಲಿ ವೆಸ್ಟ್‌ಇಂಡೀಸ್‌ನ ಹೇಲಿ ಮ್ಯಾಥ್ಯೂಸ್‌ ತಿಂಗಳ ಆಟಗಾರ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದ ರಚಿನ್ ರವೀಂದ್ರ, ಆ ಬಳಿಕವೂ ಸ್ಥಿರ ಪ್ರದರ್ಶನ ತೋರಿ ಮಿಂಚುತ್ತಿದ್ದಾರೆ. ಇದುವರೆಗೂ ನ್ಯೂಜಿಲೆಂಡ್ ಪರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಎಲ್ಲಾ 9 ಪಂದ್ಯಗಳನ್ನಾಡಿ ಮೂರು ಶತಕ ಸಹಿತ 565 ರನ್ ಸಿಡಿಸಿದ್ದಾರೆ. 

Latest Videos

undefined

ಆಸೀಸ್‌ ಟಿ20ಗೆ ಸೂರ್ಯ ಅಥವಾ ಋತುರಾಜ್‌ ನಾಯಕ

ನವದೆಹಲಿ: ನ.23ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಸೂರ್ಯಕುಮಾರ್‌ ಯಾದವ್‌ ಅಥವಾ ಋತುರಾಜ್‌ ಗಾಯಕ್ವಾಡ್‌ ಮುನ್ನಡೆಸುವ ಸಾಧ್ಯತೆ ಇದೆ. ಹಾರ್ದಿಕ್‌ ಪಾಂಡ್ಯ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಅವರು ಸರಣಿಯಲ್ಲಿ ಆಡುವುದಿಲ್ಲ ಎಂದು ಹೇಳಲಾಗುತ್ತಿದೆ. ವಿಶ್ವಕಪ್‌ ಸೆಮಿಫೈನಲ್‌ ಬಳಿಕ ಬಿಸಿಸಿಐ ತಂಡವನ್ನು ಪ್ರಕಟಗೊಳಿಸಲಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ICC World Cup 2023 ಇಂಗ್ಲೆಂಡ್ ಎದುರು ಪಾಕಿಸ್ತಾನ ಪವಾಡ ಮಾಡುತ್ತಾ?

ನಾಯಕನಾಗಿಯೇ ಇರಲು ಇಂಗ್ಲೆಂಡ್‌ನ ಬಟ್ಲರ್‌ ಇರಾದೆ

ಪುಣೆ: ಏಕದಿನ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಕಳಪೆ ಪ್ರದರ್ಶನ ನೀಡಿ, ಸೆಮಿಫೈನಲ್‌ ಪ್ರವೇಶಿಸಲು ವಿಫಲವಾದ ಹೊರತಾಗಿಯೂ ತಂಡದ ನಾಯಕನಾಗಿ ಮುಂದುವರಿಯುವ ಇರಾದೆಯನ್ನು ಜೋಸ್‌ ಬಟ್ಲರ್‌ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಮುಂದಿನ ತಿಂಗಳು ವೆಸ್ಟ್‌ಇಂಡೀಸ್‌ ವಿರುದ್ಧದ ಟಿ20, ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸಲು ಇಚ್ಛಿಸುತ್ತೇನೆ ಎಂದಿದ್ದಾರೆ. ಇಂಗ್ಲೆಂಡ್‌ ಈ ವಿಶ್ವಕಪ್‌ನಲ್ಲಿ ಆಡಿರುವ 8 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿದ್ದು, ಕೊನೆ ಪಂದ್ಯವನ್ನು ನ.11ಕ್ಕೆ ಪಾಕಿಸ್ತಾನ ವಿರುದ್ಧ ಆಡಲಿದೆ.

Shot of the Century ಬಗ್ಗೆ ಪ್ರತಿಕ್ರಿಯಿಸಿದ ಕಿಂಗ್ ಕೊಹ್ಲಿ, 'ಅದು ಹೇಗಾಯ್ತೋ ಗೊತ್ತಿಲ್ಲ'ವೆಂದ ಚೇಸ್ ಮಾಸ್ಟರ್

ಆಸೀಸ್‌ ದಿಗ್ಗಜೆ ಲ್ಯಾನಿಂಗ್‌ ಅಂ.ರಾ. ಕ್ರಿಕೆಟ್‌ಗೆ ವಿದಾಯ

ಮೆಲ್ಬರ್ನ್‌: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡದ ದಿಗ್ಗಜ ನಾಯಕಿ ಮೆಗ್‌ ಲ್ಯಾನಿಂಗ್‌ ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ಟಿ20 ಲೀಗ್‌ಗಳಲ್ಲಿ ಆಟ ಮುಂದುವರಿಸಲಿದ್ದಾರೆ. 31 ವರ್ಷದ ಲ್ಯಾನಿಂಗ್‌ ತಮ್ಮ 13 ವರ್ಷಗಳ ಕ್ರಿಕೆಟ್‌ ಬದುಕಿನಲ್ಲಿ ನಾಯಕಿಯಾಗಿ 5 ಸೇರಿ ಒಟ್ಟು 7 ವಿಶ್ವಕಪ್‌ ಹಾಗೂ ಕಳೆದ ವರ್ಷ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ಗೆದ್ದಿದ್ದಾರೆ. ಸಿಂಗಾಪೂರದಲ್ಲಿ ಹುಟ್ಟಿ, 2010ರಲ್ಲಿ ಆಸೀಸ್‌ ಪರ ಪಾದಾರ್ಪಣೆ ಮಾಡಿದ್ದ ಅವರು 6 ಟೆಸ್ಟ್‌, 103 ಏಕದಿನ ಹಾಗೂ 132 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟಾರೆ 8352 ರನ್‌ ಕಲೆಹಾಕಿದ್ದಾರೆ. ಆಸೀಸ್‌ ಪರ ಗರಿಷ್ಠ ರನ್‌ ಗಳಿಸಿದ ಮಹಿಳಯೆರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
 

click me!