* ಇಂಗ್ಲೆಂಡ್-ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯ ಆರಂಭ
* ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ
* ಇಂಗ್ಲೆಂಡ್ ತಂಡದ ಪರ ಇಬ್ಬರು ಕ್ರಿಕೆಟಿಗರು ಪಾದಾರ್ಪಣೆ
ಲಾರ್ಡ್ಸ್(ಜೂ.02): ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಒಂದು ಕಡೆ ನ್ಯೂಜಿಲೆಂಡ್ ತಂಡವು ಭಾರತ ವಿರುದ್ದ ಜೂನ್ 18ರಿಂದ ಆರಂಭವಾಗಲಿರುವ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಪೂರ್ವಭಾವಿ ಸಿದ್ದತೆಯನ್ನು ಆರಂಭಿಸಿದೆ. ಇನ್ನೊಂದೆಡೆ ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡವು ಮುಂಬರುವ ಆ್ಯಷಸ್ ಟೆಸ್ಟ್ ಸರಣಿಗೆ ಸಿದ್ದತೆ ಮಾಡಿಕೊಳ್ಳುತ್ತಿದೆ.
ಕಿವೀಸ್, ಭಾರತದೆದುರು ಕ್ಲೀನ್ ಸ್ವೀಪ್ ಮಾಡಲು ಎದುರು ನೋಡುತ್ತಿದ್ದೇವೆ: ಜೋ ರೂಟ್
ಇಂಗ್ಲೆಂಡ್ ವಿಕೆಟ್ ಕೀಪರ್ ಆಗಿ ಜೇಮ್ಸ್ ಬ್ರಾಸಿ ಹಾಗೂ ಓಲಿ ರಾಬಿನ್‌ಸನ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. 27 ವರ್ಷದ ಓಲಿ ರಾಬಿನ್‌ಸನ್ ಕಳೆದ 6 ವರ್ಷಗಳ ಅವಧಿಯ ಕೌಂಟಿ ಕ್ರಿಕೆಟ್ ಪಯಣದಲ್ಲಿ ಸಸೆಕ್ಸ್, ಯಾರ್ಕ್‌ಶೈರ್ ಹಾಗೂ ಹ್ಯಾಂಪ್‌ಶೈರ್ ತಂಡವನ್ನು ಪ್ರತಿನಿಧಿಸಿದ್ದಾರೆ
Congratulations to and who are making their Test debuts for England 🧢 pic.twitter.com/YBorrjQ0zl
— ICC (@ICC)ತಂಡಗಳು ಹೀಗಿವೆ:
ಇಂಗ್ಲೆಂಡ್
1st Test. England XI: R Burns, D Sibley, Z Crawley, J Root, D Lawrence, O Pope, J Bracey, O Robinson, S Broad, M Wood, J Anderson https://t.co/fOw3jbRSmz
— ICC Live Scores (@ICCLive)ನ್ಯೂಜಿಲೆಂಡ್:
1st Test. New Zealand XI: T Latham, D Conway, K Williamson, R Taylor, H Nicholls, BJ Watling, C de Grandhomme, M Santner, K Jamieson, T Southee, N Wagner https://t.co/fOw3jbRSmz
— ICC Live Scores (@ICCLive)