T20 World Cup: ಸ್ಕಾಟ್ಲೆಂಡ್‌ ಸವಾಲಿಗೆ ರೆಡಿಯಾದ ಕಿವೀಸ್‌!

By Kannadaprabha NewsFirst Published Nov 3, 2021, 7:25 AM IST
Highlights

*ಭಾರತದ ವಿರುದ್ಧದ ಪಂದ್ಯದಲ್ಲಿ ಗೆದ್ದು ಬೀಗಿರುವ ನ್ಯೂಜಿಲೆಂಡ್‌
*ಸೆಮೀಸ್‌ ರೇಸ್‌ನಿಂದ ಹೊರಬೀಳುವ ಆತಂಕದಲ್ಲಿ ಸ್ಕಾಟ್ಲೆಂಡ್‌
*2 ಪಂದ್ಯದಲ್ಲಿ ಒಂದರಲ್ಲಿ ಗೆದ್ದು ಗುಂಪು 2ರಲ್ಲಿ 3ನೇ ಸ್ಥಾನದಲ್ಲಿರುವ ಕಿವೀಸ್‌
 

ದುಬೈ (ನ.2): ಭಾರತದ ವಿರುದ್ಧದ ಮಹತ್ವದ ಪಂದ್ಯದಲ್ಲಿ ಗೆದ್ದು ಬೀಗಿರುವ ನ್ಯೂಜಿಲೆಂಡ್‌ (New Zealand) ಸೆಮಿಫೈನಲ್‌ ರೇಸ್‌ನಲ್ಲಿ ಒಂದು ಹೆಜ್ಜೆ ಮುಂದಿಡಲು ಎದುರು ನೋಡುತ್ತಿದ್ದು, ಬುಧವಾರ ಸ್ಕಾಟ್ಲೆಂಡ್‌ (Scotland) ವಿರುದ್ಧ ಆಡಲಿದೆ. ಎರಡೂ ಪಂದ್ಯಗಳಲ್ಲಿ ಸೋತಿರುವ ಸ್ಕಾಟ್ಲೆಂಡ್‌, ಸೆಮೀಸ್‌ ರೇಸ್‌ನಿಂದ ಹೊರಬೀಳುವ ಆತಂಕದಲ್ಲಿದ್ದು ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. 

T20 world Cup: ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಕಾರಣವೇನು..?

ಕಿವೀಸ್‌ ಸೂಪರ್‌-12ರ ಹಂತದಲ್ಲಿ ತಾನಾಡಿದ 2 ಪಂದ್ಯದಲ್ಲಿ ಒಂದರಲ್ಲಿ ಗೆದ್ದು ಗುಂಪು 2ರಲ್ಲಿ 3ನೇ ಸ್ಥಾನದಲ್ಲಿದ್ದರೆ, ಸ್ಕಾಟ್ಲೆಂಡ್‌ ಕೊನೆಯ ಸ್ಥಾನದಲ್ಲಿದೆ. ಉಭಯ ತಂಡಗಳು ಟಿ20 ಮಾದರಿಯಲ್ಲಿ 2ನೇ ಬಾರಿ ಮುಖಾಮುಖಿಯಾಗುತ್ತಿದ್ದು, ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ಜಯಗಳಿಸಿತ್ತು.ದೊಡ್ಡ ಅಂತರದಲ್ಲಿ ಈ ಪಂದ್ಯವನ್ನು ಗೆದ್ದು ನೆಟ್‌ ರನ್‌ರೇಟ್‌ (Run Rate) ಉತ್ತಮಗೊಳಿಸಿಕೊಳ್ಳುವ ಗುರಿಯನ್ನು ಕೇನ್‌ ವಿಲಿಯಮ್ಸನ್‌ ಪಡೆ ಹೊಂದಿದೆ.

ಸಂಭವನೀಯ ಆಟಗಾರರ ಪಟ್ಟಿ

ನ್ಯೂಜಿಲೆಂಡ್‌: ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (Kane Williamson) , ಜೇಮ್ಸ್ ನೀಶಮ್, ಡೆವೊನ್ ಕಾನ್ವೇ (Devon Conway), ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಟಿಮ್ ಸೌಥಿ, ಇಶ್ ಸೋಧಿ, ಟ್ರೆಂಟ್ ಬೌಲ್ಟ್

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ; ನೀರಜ್ ಚೋಪ್ರಾ, ರವಿ ದಹಿಯಾ ಸೇರಿ 12 ಮಂದಿಗೆ ಖೇಲ್ ರತ್ನ!

ಸ್ಕಾಟ್ಲೆಂಡ್‌: ಜಾರ್ಜ್ ಮುನ್ಸಿ, ಮ್ಯಾಥ್ಯೂ ಕ್ರಾಸ್ (Matthew Cross), ಕ್ಯಾಲಮ್ ಮ್ಯಾಕ್ಲಿಯೋಡ್, ರಿಚಿ ಬೆರಿಂಗ್ಟನ್ (Richie Berrington), ಕ್ರೇಗ್ ವ್ಯಾಲೇಸ್, ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಜೋಶ್ ಡೇವಿ, ಸಫ್ಯಾನ್ ಷರೀಫ್, ಬ್ರಾಡ್ಲಿ ವೀಲ್

ಪಿಚ್‌ ರಿಪೋರ್ಟ್‌

ದುಬೈನ ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿಲ್ಲ ಎಂದು ವಿಶ್ಲೇಷಿಸಲಾಗಿದೆ. ಈ ಮೈದಾನದ ಮೊದಲ ಇನ್ನಿಂಗ್ಸ್ ಸ್ಕೋರ್ ಸರಾಸರಿ ಗಮನಿಸಿದರೆ ರನ್-ಮೇಕಿಂಗ್ ಅಷ್ಟು ಸುಲಭವಲ್ಲ ಎಂದು ಸೂಚಿಸುತ್ತದೆ. ಇಲ್ಲಿಯವರೆಗೆ ಚೇಸಿಂಗ್ ತಂಡಗಳು ಇಲ್ಲಿ ಎಲ್ಲಾ ಏಳು ಪಂದ್ಯಗಳನ್ನು ಗೆದ್ದಿರುವುದರಿಂದ ಟಾಸ್ ಪ್ರಮುಖ ಪಾತ್ರ ವಹಿಸಿದೆ.

ಆಫ್ಘನ್‌ ವಿರುದ್ಧವಾದ್ರೂ ಗೆಲ್ಲುತ್ತಾ ಭಾರತ?

ಪಾಕಿಸ್ತಾನ (Pakistan)ಹಾಗೂ ನ್ಯೂಜಿಲೆಂಡ್‌ (New Zealand) ವಿರುದ್ಧ ಸೋತು ಸುಣ್ಣವಾಗಿರುವ ಟೀಂ ಇಂಡಿಯಾ, ಬುಧವಾರ ಅಫ್ಘಾನಿಸ್ತಾನ (Afghanistan) ವಿರುದ್ಧ ಸೆಣಸಲಿದ್ದು ಈ ಪಂದ್ಯದಲ್ಲಾದರೂ ತಂಡ ಗೆಲ್ಲಲಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ಸೆಣಸಾಟದಲ್ಲಿ ಭಾರತ ಗೆದ್ದರೆ ಹೆಚ್ಚೇನೂ ಹೊಗಳಿಕೆ ಸಿಗುವುದಿಲ್ಲ, ಆದರೆ ಸೋತರೆ ಅಭಿಮಾನಿಗಳ ಕೆಂಗಣ್ಣಿಗೆ ವಿರಾಟ್‌ ಕೊಹ್ಲಿ (Virat Kohli) ಪಡೆ ಗುರಿಯಾಗಬಹುದು.

ಆಫ್ಘನ್‌ ವಿರುದ್ಧವಾದ್ರೂ ಗೆಲ್ಲುತ್ತಾ ಭಾರತ?

ಸತತ 2 ಸೋಲು ಟೀಂ ಇಂಡಿಯಾ ಸೆಮಿಫೈನಲ್‌ ರೇಸ್‌ನಲ್ಲಿ ಬಹಳ ಹಿಂದೆ ಉಳಿಯುವಂತೆ ಮಾಡಿದೆ. ತಂಡ ಉಳಿದಿರುವ ಮೂರೂ ಪಂದ್ಯಗಳಲ್ಲಿ ದೊಡ್ಡ ಅಂತರದಲ್ಲಿ ಗೆದ್ದು ನ್ಯೂಜಿಲೆಂಡ್‌ ಒಂದು ಪಂದ್ಯದಲ್ಲಿ ಸೋಲಬೇಕಿದೆ. ಆಗಷ್ಟೇ ಸೆಮಿಫೈನಲ್‌ ಪ್ರವೇಶಿಸುವ ಅವಕಾಶ ಸಿಗಬಹುದು.

ಹಾರ್ದಿಕ್‌ಗೆ ಕೊಕ್‌?

ಕಳೆದ ಪಂದ್ಯದಲ್ಲಷ್ಟೇ ಬೌಲ್‌ ಮಾಡಲು ಆರಂಭಿಸಿರುವ ಹಾರ್ದಿಕ್‌ ಪಾಂಡ್ಯ (Hardik Pandya), ತಮಗೆ ನೀಡಿರುವ ಫಿನಿಶರ್‌ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. 2 ಪಂದ್ಯಗಳಲ್ಲಿ ಒಟ್ಟು 35 ಎಸೆತಗಳನ್ನು ಎದುರಿಸಿರುವ ಹಾರ್ದಿಕ್‌ ಕೇವಲ 31 ರನ್‌ ಕಲೆಹಾಕಿದ್ದಾರೆ. ಒಂದು ವೇಳೆ ಸೂರ್ಯಕುಮಾರ್‌ ಯಾದವ್‌ ಬೆನ್ನು ನೋವಿನಿಂದ ಚೇತರಿಸಿಕೊಂಡು ಆಯ್ಕೆಗೆ ಲಭ್ಯರಿದ್ದರೆ ಹಾರ್ದಿಕ್‌ರನ್ನು ಹೊರಗಿಡುವ ಸಾಧ್ಯತೆ ಇದೆ. ಇಶಾನ್‌ ಕಿಶನ್‌ಗೆ ಮತ್ತೊಂದು ಅವಕಾಶ ಸಿಗಬಹುದು.

click me!