T20 World Cup 2021: ನಮಿಬಿಯಾ ಮಣಿಸಿ ಸೆಮಿಫೈನಲ್ ಎಂಟ್ರಿ ಖಚಿತ ಪಡಿಸಿದ ಪಾಕಿಸ್ತಾನ!

By Suvarna NewsFirst Published Nov 2, 2021, 11:27 PM IST
Highlights
  • T20 World Cup 2021 ಸೆಮಿಫೈನಲ್ ಪ್ರವೇಶಿಸಿದ ಪಾಕ್
  • ನಮಿಬಿಯಾ ವಿರುದ್ಧ ರನ್ 45 ಗೆಲುವು ಕಂಡ ಪಾಕಿಸ್ತಾನ
  • ಸತತ 4 ಗೆಲುವಿನ ಮೂಲಕ ಸೆಮಿಫೈನಲ್ ಪ್ರವೇಶ ಖಚಿತ

ಅಬು ಧಾಬಿ(ನ.02):  ಸ್ಫೋಟಕ ಬ್ಯಾಟಿಂಗ್ ಹಾಗೂ ಕರಾರುವಕ್ ಬೌಲಿಂಗ್ ದಾಳಿಯಿಂದ ಪಾಕಿಸ್ತಾನ T20 World Cup 2021 ಟೂರ್ನಿಯ ಸೆಮಿಫೈನಲ್ ಪ್ರವೇಶ ಖಚಿತಪಡಿಸಿದೆ. ನಮಿಬಿಯಾ(Namibia) ವಿರುದ್ಧ ಪಾಕಿಸ್ತಾನ 45 ರನ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಸತತ 4ನೇ ಗೆಲುವು ಸಾಧಿಸಿದ ಹೆಗ್ಗಳಿಕೆಗೆ ಪಾಕಿಸ್ತಾನ(Pakistan) ಪಾತ್ರವಾಗಿದೆ.

Yuvraj Singh Comeback ನಿವೃತ್ತಿ ವಾಪಾಸ್ ಪಡೆದು ಮೈದಾನಕ್ಕಿಳಿಯುವುದಾಗಿ ಘೋಷಿಸಿದ ಸಿಕ್ಸರ್‌ ಕಿಂಗ್ ಯುವರಾಜ್ ಸಿಂಗ್..!

ಟಾಸ್ ಗೆದ್ದು ಎಂದಿನಂತೆ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಬದಲು ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಮೂಲಕ ಪಾಕಿಸ್ತಾನ ತನ್ನ ಬ್ಯಾಟಿಂಗ್ ಸ್ಟ್ರೆಂಥ್ ಪರೀಕ್ಷಿಸಲು ಮುಂದಾಯಿತು. ಇದಕ್ಕೆ ತಕ್ಕಂತೆ ಪಾಕಿಸ್ತಾನ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಬಾಬರ್ ಅಜಮ್ 70, ಮೊಹಮ್ಮದ್ ರಿಜ್ವನ್ ಅಜೇಯ 79, ಮೊಹಮ್ಮದ್ ಹಫೀಜ್ ಅಜೇಯ 32 ರನ್ ಸಿಡಿಸಿದರು. ಈ ಮೂಲಕ ಪಾಕಿಸ್ತಾನ 189 ರನ್ ಸಿಡಿಸಿತು.

ಬೃಹತ್ ಮೊತ್ತ ಟಾರ್ಗೆಟ್ ಪಡೆದ ನಮಿಬಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಮಿಚೆಲ್ ವ್ಯಾನ್ ಲಿಂಜೆನ್ ಕೇವಲ 4 ರನ್ ಸಿಡಿಸಿ ಔಟಾದರು. ಸ್ಟೆಫನ್ ಬಾರ್ಡ್ ಹಾಗೂ ಕ್ರೈಗ್ ವಿಲಿಯಮ್ಸ್ ಜೊತೆಯಾಟದಿಂದ ನಮಿಬಿಯಾ ಚೇತರಿಸಿಕೊಂಡಿತು. ಸ್ಟೆಫನ್ 29 ರನ್ ಸಿಡಿಸಿ ಔಟಾದರು. ನಮಿಬಿಯಾ 55 ರನ್ ಗಳಿಸುವಷ್ಟರಲ್ಲಿ 2ನೇ ವಿಕೆಟ್ ಕಳೆದುಕೊಂಡಿತು.

Ind vs NZ ಕ್ರಿಕೆಟ್ ಸರಣಿ: ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟ BCCI..!

ಕ್ರೈಗ್ ವಿಲಿಯಮ್ಸ್ ಹೋರಾಟ ಮುಂದುವರಿಸಿದರೆ, ಗೆಹಾರ್ಡ್ ಎರಾಮ್ಸಸ್ 15 ರನ್ ಸಿಡಿಸಿ ಔಟಾದರು. ಹೋರಾಟ ನೀಡಿದ ಕ್ರೈಗ್ ವಿಲಿಯಮ್ಸ್ 40 ರನ್ ಕಾಣಿಕೆ ನೀಡಿದರು. ಡೇವಿಡ್ ವೀಸ್ ದಿಟ್ಟ ಹೋರಾಟ ನಮಿಬಿಯಾ ತಂಡಕ್ಕೆ ನೆರವಾಯಿತು. ಆದರೆ ಜೆಜೆ ಸ್ಮಿತ್ ಕೇವಲ 2 ರನ್ ಸಿಡಿಸಿ ನಿರ್ಗಮಿಸಿದರು.

ಡೇವಿಡ್ ವೀಸ್ 31 ಎಸೆತದಲ್ಲಿ ಅಜೇಯ 43 ರನ್ ಸಿಡಿಸಿದರು.  ಇತ್ತ ಜ್ಯಾನ್ ನಿಕೋಲ್ ಅಜೇಯ 7 ರನ್ ಸಿಡಿಸಿದರು. ಈ ಮೂಲಕ ನಮಿಬಿಯಾ 4 ವಿಕೆಟ್ ನಷ್ಟಕ್ಕೆ 144 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಪಾಕಿಸ್ತಾನ 45 ರನ್ ಗೆಲುವು ದಾಖಲಿಸಿತು.

ಈ ಗೆಲುವಿನೊಂದಿಗೆ ಪಾಕಿಸ್ತಾನ ಸೆಮಿಫೈನಲ್ ಪ್ರವೇಶ ಖಚಿತಪಡಿಸಿದೆ. ಮೊದಲ ಗುಂಪಿನಿಂದ ಇಂಗ್ಲೆಂಡ್ ತಂಡ ಸೆಮಿಫೈನಲ್ ಪ್ರವೇಶ ಖಚಿತಪಡಿಸಿದೆ. ಇದೀಗ ಎರಡನೇ ಗುಂಪಿನಿಂದ ಪಾಕಿಸ್ತಾನ ಸೆಮೀಸ್ ಪ್ರವೇಶಿಸಿದೆ. 

ಚೇಸಿಂಗ್ ಅಡ್ವಾಟೆಂಜ್ ಬದಲು ಮೊದಲು ಬ್ಯಾಟಿಂಗ್ ಮಾಡಿ ಗೆಲುವು ಸಾಧಿಸಬೇಕು ಅನ್ನೋದು ಪಾಕಿಸ್ತಾನ ಪ್ಲಾನ್. ಇದಕ್ಕಾಗಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಮೂಲಕ ಪಾಕಿಸ್ತಾನ ಸೆಮಿಫೈನಲ್ ಸುತ್ತಿಗೆ ಈಗಲೇ ಸಿದ್ಥತೆ ಮಾಡಿಕೊಳ್ಳುತ್ತಿದೆ

ಅಂಕಪಟ್ಟಿಯಲ್ಲಿ ಪಾಕಿಸ್ತಾನ ಆಡಿದ 4 ಪಂದ್ಯದಲ್ಲಿ 4ರಲ್ಲೂ ಗೆಲುವು ದಾಖಲಿಸುವ ಮೂಲಕ 8 ಅಂಕ ಸಂಪಾದಿಸಿದೆ. ಈ ಮೂಲಕ ಮೊದಲ ಸ್ಥಾನದಲ್ಲಿದೆ. ಇನ್ನು ಆಫ್ಘಾನಿಸ್ತಾನ 3ರಲ್ಲಿ 2 ಗೆಲುವು ಸಾಧಿಸಿ 2ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ತಂಡ 2 ಪಂದ್ಯದಲ್ಲಿ 1 ಗೆಲುವು ದಾಖಲಿಸಿ 3ನೇ ಸ್ಥಾನದಲ್ಲಿದೆ. ಇನ್ನು ನಮಿಬಿಯಾ ಪಂದ್ಯ ಸೋತರು 4ನೇ ಸ್ಥಾನದಲ್ಲಿ ಮುಂದುವರಿದಿದೆ. ನಮಿಬಿಯಾ 3 ಪಂದ್ಯದಲ್ಲಿ 1 ಗೆಲುವು ಹಾಗೂ 2 ಸೋಲು ಕಂಡಿದೆ. ಭಾರತ ಆಡಿದ 2 ಪಂದ್ಯದಲ್ಲೂ ಸೋಲು ಕಂಡು 5ನೇ ಸ್ಥಾನದಲ್ಲಿದೆ.  ಇನ್ನು ಸ್ಕಾಟ್‌ಲೆಂಡ್ 2 ಸೋಲಿನ ಮೂಲಕ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದೆ.
 

click me!