ತುತ್ತು ಅನ್ನಕ್ಕಾಗಿ ಡೆಲಿವರಿ ಬಾಯ್ ಆಗಿದ್ದೇನೆ; ವೈರಲ್ ಆಯ್ತು ಅಂತಾರಾಷ್ಟ್ರೀಯ ಕ್ರಿಕೆಟಿನ ಟ್ವೀಟ್!

By Suvarna NewsFirst Published Nov 16, 2020, 7:08 PM IST
Highlights

ಕೊರೋನಾ ವೈರಸ್ ನೀಡಿದ ಹೊಡೆತ ಅಷ್ಟಿಷ್ಟಲ್ಲ. ಬಡವರು, ಮಧ್ಯಮ ವರ್ಗದ ಜನ, ಶ್ರೀಮಂತರು ಸೇರಿದಂತೆ ಎಲ್ಲಾ ವರ್ಗದ ಜನರ ಹೊಟ್ಟೆಗೆ ಹೊಡೆದಿದೆ. ಕೊರೋನಾ ಕಾರಣ ಕೆಲಸ ಒಂದು ಹೊತ್ತಿನ ಊಟಕ್ಕೂ ಪರದಾಡುವರ ಸಂಖ್ಯೆ ದ್ವಿಗುಣಗೊಂಡಿದೆ. ಇದೀಗ ಇದೇ ಕೊರೋನಾ 2020ರ ಟಿ20 ವಿಶ್ವಕಪ್ ಟೂರ್ನಿ ಆಡಬೇಕಿದ್ದ ಅಂತಾರಾಷ್ಟ್ರೀಯ ಕ್ರಿಕೆಟಿಗನನ್ನು ಡೆಲಿವರಿ ಬಾಯ್ ಆಗಿ ಮಾಡಿದೆ.

ನೆದರ್ಲೆಂಡ್(ನ.16): ಕೊರೋನಾ ವೈರಸ್ ಕಾರಣ ವಿಶ್ವವೇ ಸಂಕಷ್ಟದಲ್ಲಿ ಸಿಲುಕಿದೆ. ಹಲವರು ಕೆಲಸ ಕಳೆದುಕೊಂಡಿದ್ದಾರೆ. ಹಲವರಿಗೆ ಕೆಲಸವೇ ಇಲ್ಲ. ಹಸಿವಿನಲ್ಲೇ ದಿನದೂಡುತ್ತಿರುವ ಮಂದಿ ಅದೆಷ್ಟೋ. ಕೊರೋನಾ ಕ್ರಿಕೆಟಿಗರನ್ನೂ ಬಿಟ್ಟಿಲ್ಲ. ಕಳೆದ 8 ತಿಂಗಳಿನಿಂದ ಕ್ರಿಕೆಟ್ ನಿಂತುಹೋಗಿದೆ. ಆಸ್ಟ್ರೇಲಿಯಾದಲ್ಲಿ ಆಯೋಜಿಸಲಾಗಿದ್ದ 2020ರ ಟಿ20 ಕ್ರಿಕೆಟ್ ಆಡಬೇಕಿದ್ದ ನೆದರ್ಲೆಂಡ್‌ನ ಅಂತಾರಾಷ್ಟ್ರೀಯ ಕ್ರಿಕೆಟಿಗ ಪೌಲ್ ವ್ಯಾನ್ ಮೀಕರೆನ್ ಇದೀಗ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ.

2021ರ ಟಿ20 ವಿಶ್ವಕಪ್ ಖಚಿತಪಡಿಸಿದ ICC,ಭಾರತೀಯರಿಗೆ ಡಬಲ್ ಧಮಾಕ!..

ನವೆಂಬರ್ 15ಕ್ಕೆ ಟಿ20 ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯ ಆಯೋಜಿಸಲಾಗಿತ್ತು. ಆದರೆ ಕೊರೋನಾ ಕಾರಣ ಸಂಪೂರ್ಣ ಟೂರ್ನಿ ರದ್ದಾಗಿದೆ. ಕ್ರಿಕೆಟ್ ಸ್ಕೋರ್ ನೀಡುವ ವೆಬ್‌ಸೈಟ್ ಕೊರೋನಾ ಇಲ್ಲದಿದ್ದರೆ ಇಂದು ಫೈನಲ್ ಪಂದ್ಯ ನಡೆಯುತ್ತಿತ್ತು ಎಂದು ಟ್ವೀಟ್ ಮಾಡಿತ್ತು. ಈ ಟ್ವೀಟ್‌ಗೆ ಪೌಲ್ ವ್ಯಾನ್ ರಿ ಟ್ವೀಟ್ ಮಾಡಿದ್ದು ವೈರಲ್ ಆಗಿದೆ.

 

Should’ve been playing cricket today 😏😢 now I’m delivering Uber eats to get through the winter months!! Funny how things change hahaha keep smiling people 😁 https://t.co/kwVEIo6We9

— Paul van Meekeren (@paulvanmeekeren)

5ನೇ ಬಾರಿ IPL ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್

ಟಿ20 ಟೂರ್ನಿ ಆಯೋಜನೆಯಾಗಿದ್ದರೆ ಇಂದು ನಾನು ಐಸಿಸಿ ಟೂರ್ನಿ ಆಡುತ್ತಿದ್ದೆ. ಆದರೆ ನಾನೀಗ ಉಬರ್ ಈಟ್ಸ್‌ನಲ್ಲಿ ಆಹಾರ ವಿತರಣೆ ಮಾಡುತ್ತಿದ್ದೇನೆ. ಚಳಿಗಾಲ ಕಳೆಯಲು ಬೇರೆ ದಾರಿ ಇಲ್ಲ. ಹೇಗೆ ಎಲ್ಲವೂ ಬದಲಾಗಿದೆ. ಎಲ್ಲರೂ ನಗುತ್ತಿರಿ ಎಂದು ಪೌಲ್ ವ್ಯಾನ್ ಮೀಕೆರನ್ ಟ್ವೀಟ್ ಮಾಡಿದ್ದಾರೆ.

ಪೌಲ್ ವ್ಯಾನ್ ನೆದರ್ಲೆಂಡ್ ಪರ 41 ಏಕದಿನ ಹಾಗೂ ಟಿ20 ಪಂದ್ಯ ಆಡಿದ್ದಾರೆ. ಒಟ್ಟು 51 ವಿಕೆಟ್ ಕಬಳಿಸಿದ್ದಾರೆ. ಕೊರೋನಾ ವೈರಸ್ ಕಾರಣ ನೆದರ್ಲೆಂಡ್‌ನಲ್ಲಿ ಕ್ರಿಕೆಟ್ ಸಂಪೂರ್ಣ ನಿಂತು ಹೋಗಿದೆ. ಕ್ರಿಕೆಟಿಗರು ಪರದಾಡುವ ಸ್ಥಿತಿ ಬಂದೊದಗಿದೆ.
 

click me!