
ಕರಾಚಿ(ನ.15): ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ 8 ತಿಂಗಳ ಹಿಂದೆ ಸ್ಥಗಿತಗೊಂಡಿತ್ತು. ಲೀಗ್ ಹಂತದ ಪಂದ್ಯ ಮುಗಿಯುತ್ತಿದ್ದಂತ ಟೂರ್ನಿ ಸ್ಥಗಿತಗೊಂಡಿತು. ಬಳಿಕ ಕೊರೋನಾ ಕಾರಣ ಟೂರ್ನಿ ಪುನರ್ ಆರಂಭಿಸಲು ಸಾಧ್ಯವಾಗಲೇ ಇಲ್ಲ. ಇದೀಗ ಪ್ಲೇ ಆಫ್ ಹಂತದ ಪಂದ್ಯಗಳು ಮತ್ತೆ ಆರಂಭಗೊಂಡಿದೆ. ಇದೀಗ ನಾಯಿಯೊಂದು ಪಂದ್ಯವನ್ನೇ ನಿಲ್ಲಿಸಿದೆ.
PSL 2020: ಕೊನೆಗೂ ಓಡೋದು ನಿಲ್ಲಿಸಿದ ಇಮ್ರಾನ್ ತಾಹಿರ್..!..
ಒಂದನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ಹಾಗೂ ಮುಲ್ತಾನ್ ಸುಲ್ತಾನ್ಸ್ ಮುಖಾಮುಖಿಯಾಗಿತ್ತು. 141 ರನ್ ಟಾರ್ಗೆಟ್ ಬೆನ್ನಟ್ಟುತ್ತಿರುವ ವೇಳೆ ಕರಾಚಿ ಯಾವುದೇ ಆತಂಕವಿಲ್ಲದೆ ಸಾಗಿತ್ತು. 13 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 90 ರನ್ ಸಿಡಿಸಿತ್ತು. ಈ ವೇಳೆ ನಾಯಿಯೊಂದು ಮೈದಾನ ಪ್ರವೇಶಿಸಿದ ಕಾರಣ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿತು.
ಆಸ್ಟ್ರೇಲಿಯಾ ತೆರಳಿದ ಟೀಂ ಇಂಡಿಯಾ ಕ್ರಿಕೆಟಿಗರ ಕೊರೋನಾ ರಿಪೋರ್ಟ್ ಬಹಿರಂಗ!.
ಉಭಯ ತಂಡದ ಕ್ರಿಕೆಟಿಗರು ನಾಯಿ ಓಡಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲಿಲ್ಲ. ಬಳಿಕ ಭದ್ರತಾ ಸಿಬ್ಬಂದಿಗಳು ಬಂದು ನಾಯಿ ಓಡಿಸಿ ಸುಸ್ತಾದರು. ಕೆಲ ಹೊತ್ತು ಪಂದ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ನಾಯಿ ಮೈದಾನದಿಂದ ಹೊರ ಹೋದ ಬಳಿಕ ಪಂದ್ಯ ಆರಂಭಗೊಂಡಿತು. ಇಷ್ಟೇ ಅಲ್ಲ ಕರಾಚಿ ಕಿಂಗ್ಸ್ ಗೆಲುವು ದಾಖಲಿಸೋ ಮೂಲಕ ಫೈನಲ್ ಪ್ರವೇಶಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.