PSL 2020: ಕೊನೆಗೂ ಓಡೋದು ನಿಲ್ಲಿಸಿದ ಇಮ್ರಾನ್ ತಾಹಿರ್..!

Suvarna News   | Asianet News
Published : Nov 15, 2020, 07:05 PM IST
PSL 2020: ಕೊನೆಗೂ ಓಡೋದು ನಿಲ್ಲಿಸಿದ ಇಮ್ರಾನ್ ತಾಹಿರ್..!

ಸಾರಾಂಶ

ಪಾಕಿಸ್ತಾನ ಸೂಪರ್‌ ಲೀಗ್ ಟೂರ್ನಿಯಲ್ಲಿ ಇಮ್ರಾನ್ ತಾಹಿರ್ ಸಂಭ್ರಮಾಚರಣೆಯ ಓಟಕ್ಕೆ ಬ್ರೇಕ್  ಬಿದ್ದಿದ್ದು, ಇದೀಗ ದಕ್ಷಿಣ ಆಫ್ರಿಕಾ ಮಾಜಿ ಸ್ಪಿನ್ನರ್ ಮತ್ತೊಂದು ಸ್ಟೈಲ್ ಮೂಲಕ ಗಮನ ಸೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಕರಾಚಿ(ನ.15): ಕೊರೋನಾ  ಭೀತಿಯಿಂದಾಗಿ ಅರ್ಧದಲ್ಲೇ ಸ್ಥಗಿತಗೊಂಡಿದ್ದ ಪಾಕಿಸ್ತಾನ ಸೂಪರ್ ಲೀಗ್ ಶನಿವಾರ(ನ.14)ದಿಂದ ಮತ್ತೆ ಚಾಲನೆ ದೊರಕಿದೆ. ಕರಾಚಿಯಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಇಮಾದ್ ವಾಸೀಂ ನೇತೃತ್ವದ ಕರಾಚಿ ಕಿಂಗ್ಸ್ ತಂಡವು ಮುಲ್ತಾನ್ ಸುಲ್ತಾನ್ಸ್ ತಂಡವನ್ನು ಮಣಿಸಿ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.

ಇದಿಷ್ಟು ಒಂದು ಕಡೆಯಾದರೆ ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್ ಇಮ್ರಾನ್ ತಾಹಿರ್ ಕ್ಷೇತ್ರರಕ್ಷಣೆ ಮಾಡುವಾಗ ಅದ್ಭುತ ಕ್ಯಾಚ್ ಹಿಡಿದು, ವಿನೂತನ ಶೈಲಿಯಲ್ಲಿ ಫೋಸ್‌ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹೌದು, ಇಮ್ರಾನ್ ತಾಹಿರ್ ಎಂದಾಕ್ಷಣ ತಕ್ಷಣಕ್ಕೆ ನೆನಪಾಗುವುದು ವಿಕೆಟ್ ಪಡೆದಾಕ್ಷಣ ಮೈದಾನದ ತುಂಬೆಲ್ಲಾ ಓಡಿ ಖುಷಿಪಡೆವುದು ಸರ್ವೇ ಸಾಮಾನ್ಯ. ಆದರೆ ಪಿಎಸ್‌ಎಲ್ ಟೂರ್ನಿಯ ವೇಳೆ ಮುಲ್ತಾನ್ ಸುಲ್ತಾನ್ಸ್ ತಂಡದ ಇಮ್ರಾನ್ ತಾಹಿರ್ ಹೊಸ ಫೋಸ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಕೆಲವರು ತಾಹಿರ್ ಓಟಕ್ಕೆ ಪಿಎಸ್‌ಎಲ್‌ನಲ್ಲಿ ಬ್ರೇಕ್ ಬಿದ್ದಿದೆ ಎಂದು ಕಾಲೆಳೆದಿದ್ದಾರೆ.

PSL ಪ್ಲೇ ಆಫ್‌ ಪಂದ್ಯದಲ್ಲಿ ಡೀನೋಗೆ ವಿಶಿಷ್ಠ ಗೌರವ ಸಲ್ಲಿಸಿದ ಕರಾಚಿ ಕಿಂಗ್ಸ್, ಮುಲ್ತಾನ್ ಸುಲ್ತಾನ್ಸ್‌..!

ಸೋಹೆಲ್ ತನ್ವೀರ್ ಬೌಲಿಂಗ್‌ನಲ್ಲಿ ಶಾರ್ಜಿಲ್ ಖಾನ್ ಬಾರಿಸಿದ ಚೆಂಡನ್ನು ಅಧ್ಭುತವಾಗಿ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಹೀಗಿತ್ತು ನೋಡಿ ಆ ಕ್ಷಣ:

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ಇಮ್ರಾನ್ ತಾಹಿರ್, ಬಹುತೇಕ ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದರು. ಇನ್ನು ಪಿಎಸ್‌ಎಲ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ತಾಹಿರ್ 4 ಓವರ್ ಬೌಲಿಂಗ್ ಮಾಡಿ 22 ರನ್ ನೀಡಿ ಒಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್