ರೇಪ್‌ ಕೇಸ್‌ನಲ್ಲಿ ಐಪಿಎಲ್‌ ಆಟಗಾರನಿಗೆ 8 ವರ್ಷ ಜೈಲು ಶಿಕ್ಷೆ

By Santosh Naik  |  First Published Jan 10, 2024, 6:13 PM IST

ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರವಾಗಿ ಆಡಿಇದ್ದ ನೇಪಾಳ ಕ್ರಿಕೆಟಿಗ ಸಂದೀಪ್‌ ಲಮಿಚೆನ್ನೆಗೆ ನೇಪಾಳ ಕೋರ್ಟ್‌ 8 ವರ್ಷ ಜೈಲು ಶಿಕ್ಷೆ ವಿಧಿಸಿದೆ. ರೇಪ್‌ ಅಪರಾಧದಲ್ಲಿ ಇವರು ಶಿಕ್ಷೆಗೆ ಗುರಿಯಾಗಿದ್ದಾರೆ.


ನವದೆಹಲಿ (ಜ.10): ರೇಪ್‌ ಕೇಸ್‌ನಲ್ಲಿ ಅಪರಾಧಿ ಎಂದು ಸಾಬೀತಾಗಿದ್ದ ನೇಪಾಳ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಐಪಿಎಲ್‌ ಆಟಗಾರ ಸಂದೀಪ್‌ ಲಮಿಚನ್ನೆ ಅವರಿಗೆ ನೇಪಾಳ ಕೋರ್ಟ್‌ ಎಂಟ ವರ್ಷ ಜೈಲು ಶಿಕ್ಷೆ ವಿಧಿಸಿದೆ. 2023ರ ಡಿಸೆಂಬರ್‌ನಲ್ಲಿ ಸಂದೀಪ್‌ ಲಮಿಚನ್ನೆ ಅವರನ್ನು ಈ ಕೇಸ್‌ನಲ್ಲಿ ಅಪರಾಧಿ ಎಂದು ಕೋರ್ಟ್‌ ಹೇಳಿತ್ತು. ಕಠ್ಮಂಡು ಜಿಲ್ಲಾ ನ್ಯಾಯಾಲಯವು 2022ರ ಆಗಸ್ಟ್‌ನಲ್ಲಿ ಕಠ್ಮಂಡುವಿನ ಹೋಟೆಲ್‌ವೊಂದರಲ್ಲಿ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಸಂದೀಪ್‌ ಲಮಿಚನ್ನೆತಪ್ಪಿತಸ್ಥನೆಂದು ತೀರ್ಪು ನೀಡಿತ್ತು. ಲಮಿಚನ್ನೆಯನ್ನು ಜನವರಿ 2023ರಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದ ಕೋರ್ಟ್‌, ಹಲವು ಕಾನೂನು ಪ್ರಕ್ರಿಯೆಗಳ ಬಳಿಕ ಈ ಕೇಸ್‌ಅನ್ನು ಫಾಸ್ಟ್‌ ಟ್ರ್ಯಾಕಿಂಗ್‌ಗೆ ವರ್ಗಾಯಿಸಿತ್ತು. ಆರೋಪಗಳ ಹೊರತಾಗಿಯೂ, ಸಂದೀಪ್‌ ಅವರು ಜಾಮೀನಿನ ಮೇಲೆ ತಮ್ಮ ದೇಶಕ್ಕಾಗಿ  ಕ್ರಿಕೆಟ್ ಆಡುವುದನ್ನು ಮುಂದುವರಿಸಿದ್ದರು.

ನವೆಂಬರ್‌ನಲ್ಲಿ ನಡೆದ ಟಿ20 ಏಷ್ಯಾ ಫೈನಲ್ಸ್‌ನಲ್ಲಿ ಒಮಾನ್ ವಿರುದ್ಧ ನೇಪಾಳ ಪರ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಆದಾಗ್ಯೂ, ನ್ಯಾಯಾಲಯದ ನಿರ್ಧಾರವು ಇದೀಗ ಅವರ ಕ್ರಿಕೆಟ್ ವೃತ್ತಿಜೀವನವನ್ನು ಕೊನೆ ಮಾಡಿದ್ದು, ಈಗ ಅವರು ಜೈಲು ಶಿಕ್ಷೆಯನ್ನು ಎದುರಿಸಬೇಕಾಗಿದೆ.

ಅಪ್ರಾಪ್ತ ಹುಡುಗಿಯ ಆರೋಪದ ನಂತರ ಅಕ್ಟೋಬರ್ 2022 ರಲ್ಲಿ ಅವರನ್ನು ಬಂಧಿಸಿದಾಗ ಸಂದೀಪ್‌ ಅವರಿಗೆ ಕಾನೂನು ವಿಚಾರದ ತೊಂದರೆಗಳು ಆರಂಭವಾಗಿದ್ದವು. ಜನವರಿ 2023 ರಲ್ಲಿ ಅವರನ್ನು ನ್ಯಾಯಾಲಯವು ಬಿಡುಗಡೆ ಮಾಡಿದ್ದರೂ, ನ್ಯಾಯಾಧೀಶ ಶಿಶಿರ್ ರಾಜ್ ಧಾಕಲ್ ನೇತೃತ್ವದ ಅಂತಿಮ ತೀರ್ಪಿನೊಂದಿಗೆ ಅವರ ಜಾಮೀನು ಅವಧಿ ಕೂಡ ಮುಕ್ತಾಯಗೊಂಡಿತ್ತು. ಕಠ್ಮಂಡು ಜಿಲ್ಲಾ ಸರ್ಕಾರಿ ವಕೀಲರ ಕಛೇರಿಯು 2017 ರ ರಾಷ್ಟ್ರೀಯ ದಂಡ (ಸಂಹಿತೆ) ಕಾಯ್ದೆಯಡಿಯಲ್ಲಿ ಲಮಿಚನ್ನೆಗೆ 12 ವರ್ಷಗಳ ಜೈಲು ಶಿಕ್ಷೆಯನ್ನು ಕೋರಿತ್ತು, ಆದರೆ ನ್ಯಾಯಾಲಯವು ಎಂಟು ವರ್ಷಗಳ ಶಿಕ್ಷೆಯನ್ನು ಘೋಷಣೆ ಮಾಡಿದೆ.

ಅಪ್ರಾಪ್ತೆ ಮೇಲೆ ರೇಪ್‌: ಕ್ರಿಕೆಟಿಗ ಸಂದೀಪ್ ಲಮಿಚ್ಚಾನೆ ದೋಷಿ, ಮತ್ತೆ ಜೈಲು ಶಿಕ್ಷೆಗೆ ಕ್ಷಣಗಣನೆ..!

ಸಂದೀಪ್‌ ಲಮಿಚನ್ನೆ ಅವರಿಗೆ ಶಿಕ್ಷೆ ನೀಡಿರುವ ಸುದ್ದಿ, ನೇಪಾಳ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ರೇಪ್‌ ಕೇಸ್‌ನಲ್ಲಿ ಅವರು ಹೆಸರು ಕೇಳಿ ಬರುವ ಮುನ್ನ, ತಮ್ಮ ಅಕರ್ಷಕ ಸ್ಪಿನ್‌ ಬೌಲಿಂಗ್‌ನಿಂದ ಅವರು ಸುದ್ದಿಯಾಗಿದ್ದರು. ಐಪಿಎಲ್‌ನಲ್ಲಿ ಆಡಿದ ಮೊದಲ ನೇಪಾಳದ ಕ್ರಿಕೆಟಿಗ ಎನಿಸಿಕೊಂಡಿದ್ದ ಲಮಿಚನ್ನೆ, ನೇಪಾಳ ಕ್ರಿಕೆಟ್‌ಗೂ ದೊಡ್ಡ ಮಟ್ಟದ ಕೊಡುಗೆ ನೀಡಿದ್ದರು. ಏಕದಿನ ಹಾಗೂ ಟಿ20ಗಳಲ್ಲಿ ನೇಪಾಳ ಪರವಾಗಿ ಗರಿಷ್ಠ ವಿಕೆಟ್‌ ಉರುಳಿಸಿದ ಕ್ರಿಕಟಿಗ ಎನಿಸಿದ್ದಾರೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಬಿಗ್‌ ಬ್ಯಾಷ್‌ ಲೀಗ್‌ನಂಥ ಟೂರ್ನಿಗಳಲ್ಲಿ ಆಡವ ಮೂಲಕ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದರು.

Latest Videos

Sandeep Lamichhane ಅತ್ಯಾಚಾರ ಆರೋಪ, ನೇಪಾಳ ಕ್ರಿಕೆಟಿಗನಿಗೆ 7 ದಿನ ಪೊಲೀಸ್ ಕಸ್ಟಡಿ!

click me!