ICC ಟ್ರೋಫಿ ಗೆಲ್ಲಲು ರೋಹಿತ್ ಶರ್ಮಾಗೆ ಲಾಸ್ಟ್‌ ಚಾನ್ಸ್..!

By Suvarna NewsFirst Published Jan 10, 2024, 4:23 PM IST
Highlights

ರೋಹಿತ್ ಶರ್ಮಾ ಟೀಂ ಇಂಡಿಯಾ ಫುಲ್ ಕ್ಯಾಪ್ಟನ್ ಆಗಿ ಎರಡು ವರ್ಷ ಆಗ್ತಾ ಬರ್ತಿದೆ. ಆದ್ರೆ, ರೋಹಿತ್ ಕ್ಯಾಪ್ಟನ್ಸಿಯಲ್ಲಿ ತಂಡ ಹೇಳಿಕೊಳ್ಳುವ ಯಾವುದೇ ಸಾಧನೆ ಮಾಡಿಲ್ಲ. ಕಳೆದ ಒಂದೂವರೆ ವರ್ಷದಲ್ಲಿ ರೋಹಿತ್ ಮೂರು ICC ಟ್ರೋಫಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ನಾಯಕಾಗಿ ತಮ್ಮನ್ನ ತಾವು ಪ್ರೂವ್ ಮಾಡಿಕೊಳ್ಳಲು ರೋಹಿತ್‌ಗಿರೋ ಲಾಸ್ಟ್ ಚಾನ್ಸ್ ಅಂದ್ರೆ, ಅದು ಟಿ20 ವಿಶ್ವಕಪ್ ಟೂರ್ನಿ..!

ಬೆಂಗಳೂರು(ಜ.10): ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ನಾಯಕರಾಗಿ ರೋಹಿತ್ ಶರ್ಮಾ ಕಮ್‌ಬ್ಯಾಕ್ ಮಾಡಿದ್ದಾರೆ. ಇದ್ರಿಂದ T20 ವಿಶ್ವಕಪ್ನಲ್ಲೂ ರೋಹಿತ್ ಶರ್ಮಾ ತಂಡವನ್ನ ಮುನ್ನಡೆಸೋದು ಕನ್ಫರ್ಮ್ ಆಗಿದೆ. ತಮ್ಮ ನಾಯಕತ್ವದಲ್ಲಿ ICC ಟ್ರೋಫಿ ಗೆಲ್ಲಲು ಹಿಟ್‌ಮ್ಯಾನ್‌ಗಿದು ಬೆಸ್ಟ್ ಚಾನ್ಸ್ ಆಗಿದೆ. ಆದ್ರೆ, ಈ ಸವಾಲನ್ನು ಮೆಟ್ಟಿ ನಿಂತ್ರೆ ಮಾತ್ರ ಅದು ಸಾಧ್ಯವಾಗಲಿದೆ. ಏನದು ಸವಾಲು ಅಂತೀರಾ..? ಇಲ್ಲಿದೆ ನೋಡಿ ಡಿಟೇಲ್ಸ್...!

ICC ಟ್ರೋಫಿ ಗೆಲ್ಲಲು ಹಿಟ್‌ಮ್ಯಾನ್‌ಗೆ ಕೊನೆಯ ಚಾನ್ಸ್..!

Latest Videos

ಯೆಸ್, ರೋಹಿತ್ ಶರ್ಮಾ ಟೀಂ ಇಂಡಿಯಾ ಫುಲ್ ಕ್ಯಾಪ್ಟನ್ ಆಗಿ ಎರಡು ವರ್ಷ ಆಗ್ತಾ ಬರ್ತಿದೆ. ಆದ್ರೆ, ರೋಹಿತ್ ಕ್ಯಾಪ್ಟನ್ಸಿಯಲ್ಲಿ ತಂಡ ಹೇಳಿಕೊಳ್ಳುವ ಯಾವುದೇ ಸಾಧನೆ ಮಾಡಿಲ್ಲ. ಕಳೆದ ಒಂದೂವರೆ ವರ್ಷದಲ್ಲಿ ರೋಹಿತ್ ಮೂರು ICC ಟ್ರೋಫಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ನಾಯಕಾಗಿ ತಮ್ಮನ್ನ ತಾವು ಪ್ರೂವ್ ಮಾಡಿಕೊಳ್ಳಲು ರೋಹಿತ್‌ಗಿರೋ ಲಾಸ್ಟ್ ಚಾನ್ಸ್ ಅಂದ್ರೆ, ಅದು ಟಿ20 ವಿಶ್ವಕಪ್ ಟೂರ್ನಿ..!

ಇಶಾನ್ ಕಿಶನ್ ಒಂದು ನಿರ್ಧಾರದಿಂದ T20 ಕರಿಯರ್‌ಗೆ ಬಿತ್ತಾ ಎಂಡ್ ಕಾರ್ಡ್..?

ಆಪ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾವನ್ನ ಆಯ್ಕೆ ಮಾಡಲಾಗಿದೆ. ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮತ್ತು ರನ್‌ ಮಷಿನ್ ವಿರಾಟ್ ಕೊಹ್ಲಿ 14 ತಿಂಗಳ ನಂತರ T20 ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿಯೂ ರಿಟರ್ನ್ ಆಗಿದ್ದಾರೆ. ಟಿ20 ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡೇ ಈ ತಂಡವನ್ನ ಆಯ್ಕೆ ಮಾಡಲಾಗಿದೆ. ಹೀಗಾಗಿ 20-20 ವರ್ಲ್ಡ್‌ಕಪ್‌ನಲ್ಲೂ ರೋಹಿತ್ ಶರ್ಮಾಗೆ ನಾಯಕನ ಪಟ್ಟ ಕಟ್ಟೋದು ಫಿಕ್ಸ್..! 

ಕ್ಯಾಪ್ಟನ್ಸಿಯ ಬಗ್ಗೆ ನೋ ಡೌಟ್, ಬ್ಯಾಟಿಂಗ್ನದ್ದೇ ಟೆನ್ಷನ್..!

ಯೆಸ್, T20 ವಿಶ್ವಕಪ್ನಲ್ಲಿ ರೋಹಿತ್ ತಂಡವನ್ನ ಮುನ್ನೆಡೆಸೋದು ಆಲ್ಮೋಸ್ಟ್ ಕನ್ಫರ್ಮ್ ಆಗಿದೆ. ಮತ್ತೊಂದು ವಿಷ್ಯ ಅಂದ್ರೆ, ಈ ಮೆಗಾ ಟೂರ್ನಿ ಹಿಟ್‌ಮ್ಯಾನ್ ಪಾಲಿಗೆ ವಿದಾಯದ ಟೂರ್ನಿಯಾಗೋ ಸಾಧ್ಯತೆಯಿದೆ. ತಮ್ಮ ನಾಯಕತ್ವದಲ್ಲಿ ICC ಟ್ರೋಫಿ ಗೆದ್ದು, ಗುಡ್‌ಬೈ ಹೇಳೋ ಪ್ಲಾನ್ ಮುಂಬೈಕರ್‌ದ್ದಾಗಿದೆ. ಆದ್ರೆ, ಆ ಪ್ಲಾನ್ ಸಕ್ಸಸ್ ಆಗಬೇಕಂದ್ರೆ ಹಲವು ಸವಾಲುಗಳನ್ನ ಎದುರಿಸಬೇಕಿದೆ. ಅದರಲ್ಲೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಬೇಕಿದೆ. 

ಟಿ20 ಕಮ್‌ಬ್ಯಾಕ್‌: ವಿರಾಟ್ ಕೊಹ್ಲಿ, ರೋಹಿತ್‌ ಶರ್ಮಾಗೆ ಅಗ್ನಿಪರೀಕ್ಷೆ

ಟಿ20 ಫಾರ್ಮೆಟ್ನಲ್ಲಿ ರೋಹಿತ್ ನಾಯಕತ್ವದ ಬಗ್ಗೆ ಯಾವುದೇ ಅನುಮಾನವಿಲ್ಲ. . IPLನಲ್ಲಿ ಹಿಟ್ಮ್ಯಾನ್ ತಮ್ಮ ಕ್ಯಾಪ್ಟನ್ಸಿಯಲ್ಲಿ ಮುಂಬೈ ಇಂಡಿಯನ್ಸ್ಗೆ 5 ಬಾರಿ ಕಪ್ ಗೆದ್ದುಕೊಟ್ಟಿದ್ದಾರೆ. ಆ ಮೂಲಕ ಟೀಮ್ ಇಂಡಿಯಾ ನಾಯಕನಾಗಿಯೂ ತಮ್ಮ ಸಾಮರ್ಥ್ಯವನ್ನ ಪ್ರೂವ್ ಮಾಡಿದ್ದಾರೆ. ಈ ಹಿಂದಿನ T20 ವಿಶ್ವಕಪ್, ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಕ್ಯಾಪ್ಟನ್ಸಿಯಲ್ಲಿ ಕಮಾಲ್ ಮಾಡಿದ್ರು. ಆದ್ರೆ, ಸೆಮಿಫೈನಲ್ನಲ್ಲಿ ತಂಡ ಸೋತಿತ್ತು. ಆದ್ರೆ, ಪ್ರಶ್ನೆ ಇರೋದು ರೋಹಿತ್ ಬ್ಯಾಟಿಂಗ್ ಬಗ್ಗೇನೆ....

ಟಿ20ಯಲ್ಲಿ ರೋಹಿತ್ ಶರ್ಮಾ ಫ್ಲಾಪ್ ಶೋ..! 

ಹೌದು, ಟಿ20 ಮಾದರಿಯಲ್ಲಿ ರೋಹಿತ್ ಕಳೆದೊಂದು ವರ್ಷದಿಂದ ಫ್ಲಾಪ್ ಶೋ ನೀಡಿದ್ದಾರೆ.   2022ರಲ್ಲಿ ರೋಹಿತ್ ಶರ್ಮಾ ನೀಡಿರುವ ಪರ್ಫಾ ಮೆನ್ಸ್ ಇದಕ್ಕೆ ಸಾಕ್ಷಿಯಾಗಿದೆ. 2022ರಲ್ಲಿ 29 ಟಿ20 ಪಂದ್ಯಗಳನ್ನಾಡಿರೋ  ರೋಹಿತ್ 24.29ರ ಸರಾಸರಿಯಲ್ಲಿ ಕೇವಲ 656 ರನ್ಗಳಿಸಿದ್ದಾರೆ. 

ಟೀಂ ಇಂಡಿಯಾ ಪರ ಮಾತ್ರವಲ್ಲ. ಕಳೆದ 2 IPL ಟೂರ್ನಿಯಲ್ಲೂ ರೋಹಿತ್ ಶರ್ಮಾ ವೈಫಲ್ಯ ಅನುಭವಿಸಿದ್ದಾರೆ. 2022ರ IPLನಲ್ಲಿ 14 ಪಂದ್ಯಗಳನ್ನಾಡಿ, 19.14ರ ಸರಾಸರಿಯಲ್ಲಿ 268 ರನ್‌ಗಳಿಸಿದ್ರು. 120.18ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ರು. 2023ರಲ್ಲಿ 16 ಪಂದ್ಯಗಳನ್ನಾಡಿ 20.75ರ ಸರಾಸರಿಯಲ್ಲಿ 332 ರನ್ಗಳಿಸಿದ್ರು. 132.80ರ ಸ್ಟ್ರೈಕ್ರೇಟ್ ಹೊಂದಿದ್ರು. ಟಿ20ಯಲ್ಲಿ ಫಾರ್ಮ್ ಕಂಡುಕೊಳ್ಳೋಕೆ ಅಪ್ಘಾನ್ ಸರಣಿ ಮತ್ತು ಐಪಿಎಲ್ ಬೆಸ್ಟ್ ಚಾನ್ಸ್ ಆಗಿದೆ. ಈ ಎರಡರಲ್ಲೂ ರೋಹಿತ್ ಅಬ್ಬರಿಸ್ತಾರಾ..? ತಮ್ಮ ಹಳೆಯ ಖದರ್ಗೆ ಮರಳ್ತಾರಾ..? ಅನ್ನೋದನ್ನ ಕಾದು ನೋಡಬೇಕಿದೆ.  

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

click me!