ಕಳೆದ ವರ್ಷಪೂರ್ತಿ ಇಶಾನ್ ತಂಡದಲ್ಲಿದ್ದೂ, ಇಲ್ಲದಂತಿದ್ರು. ಯಾಕಂದ್ರೆ, ಇಶಾನ್ ಮೈದಾನಕ್ಕಿಳಿದು ಆಡಿದ್ದಕ್ಕಿಂತ ಬೆಂಚ್ ಕಾದಿದ್ದು, ವಾಟರ್ ಸಪ್ಲೈ ಮಾಡಿದ್ದೇ ಹೆಚ್ಚು. ಅದ್ಭುತ ಪ್ರದರ್ಶನ ನೀಡಿದ್ರೂ, ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಮಾತ್ರ ಸಿಗಲಿಲ್ಲ.
ಬೆಂಗಳೂರು(ಜ.10): ಯಾವುದೋ ಒಂದು ನಿರ್ಧಾರ ಕೈಗೊಳ್ಳಬೇಕಾದ್ರೂ, ನೂರು ಸಾರಿ ಯೋಚಿಸ್ಬೇಕು ಅಂತ ದೊಡ್ಡವರು ಸುಮ್ನೆ ಹೇಳಲ್ಲ. ಯಾಕಂದ್ರೆ, ಯಾವುದೋ ಕೆಟ್ಟ ಘಳಿಗೆಯಲ್ಲಿ ತೆಗೆದುಕೊಳ್ಳೋ ನಿರ್ಧಾರ ಒಂದಲ್ಲ ಒಂದು ದಿನ ನಮಗೆ ಮುಳುವಾಗುತ್ತೆ. ಸದ್ಯ ಟೀಂ ಇಂಡಿಯಾದ ಈ ಆಟಗಾರ ವಿಷ್ಯದಲ್ಲೂ ಇದೇ ಆಗಿದೆ. ಯಾರು ಆ ಆಟಗಾರ ಏನ್ ಕಥೆ ಅಂತೀರಾ..? ಈ ಸ್ಟೋರಿ ನೋಡಿ.
2023 ಪೂರ್ತಿ ತಂಡದಲ್ಲಿ ಚಾನ್ಸ್, 2024 ಆರಂಭದಲ್ಲೇ ಶಾಕ್..!
undefined
ಆಪ್ಘಾನಿಸ್ತಾನ ವಿರುದ್ಧದ T20 ಸರಣಿಗೆ ಟೀಂ ಇಂಡಿಯಾವನ್ನ ಆಯ್ಕೆ ಮಾಡಲಾಗಿದೆ. T20 ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಈ ತಂಡವನ್ನ ಕಟ್ಟಲಾಗಿದೆ. ಸೀನಿಯರ್ ಸ್ಟಾರ್ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಆದ್ರೆ, ವಿಕೆಟ್ ಕೀಪರ್ ಬ್ಯಾಟರ್, ಇಶಾನ್ ಕಿಶನ್ರನ್ನ ತಂಡದಿಂದ ಕೈಬಿಡಲಾಗಿದೆ. 2023ರಲ್ಲಿ ಏಷ್ಯಾಕಪ್, ವಿಶ್ವಕಪ್ ಸೇರಿದಂತೆ ಟೀಂ ಇಂಡಿಯಾ ಆಡಿದ ಬಹುತೇಕ ಸರಣಿಗಳಲ್ಲಿ ಇಶಾನ್ ತಂಡದ ಭಾಗವಾಗಿದ್ರು. ಆದ್ರೀಗ, 2024ರ ಆರಂಭದಲ್ಲೇ ಇಶಾನ್‌ಗೆ ಬಿಗ್ ಶಾಕ್ ಎದುರಾಗಿದೆ. ಇದ್ರಿಂದ ರಾಂಚಿ ಬಾಯ್ ಟಿ20 ಕರಿಯರ್ ಎಂಡ್ ಆಯ್ತಾ..? ಅನ್ನೋ ಪ್ರಶ್ನೆ ಮೂಡಿದೆ.
ಕಡುಬಡತನದಲ್ಲಿ ಹುಟ್ಟಿ ಕೋಟ್ಯಾಧಿಪತಿಗಳಾದ ಟೀಂ ಇಂಡಿಯಾ ಕ್ರಿಕೆಟಿಗರಿವರು..!
ತಂಡದಲ್ಲಿದ್ದು ಇಲ್ಲದಂತಿದ್ದ ರಾಂಚಿ ಬಾಯ್..!
ಹೌದು, ಕಳೆದ ವರ್ಷಪೂರ್ತಿ ಇಶಾನ್ ತಂಡದಲ್ಲಿದ್ದೂ, ಇಲ್ಲದಂತಿದ್ರು. ಯಾಕಂದ್ರೆ, ಇಶಾನ್ ಮೈದಾನಕ್ಕಿಳಿದು ಆಡಿದ್ದಕ್ಕಿಂತ ಬೆಂಚ್ ಕಾದಿದ್ದು, ವಾಟರ್ ಸಪ್ಲೈ ಮಾಡಿದ್ದೇ ಹೆಚ್ಚು. ಅದ್ಭುತ ಪ್ರದರ್ಶನ ನೀಡಿದ್ರೂ, ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಮಾತ್ರ ಸಿಗಲಿಲ್ಲ. ಯಾರಿಗಾದ್ರೂ ಇಂಜುರಿಯಾದ್ರೆ ಮಾತ್ರ ಆಡೋ ಚಾನ್ಸ್ ಸಿಕ್ತಾ ಇತ್ತು. ಏಕದಿನ ವಿಶ್ವಕಪ್ ನಂತರ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲೂ ಕೆಲ ಪಂದ್ಯಗಳಿಂದ ಕೊಕ್ ನೀಡಲಾಯ್ತು.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲೂ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಸಿಗಲಿಲ್ಲ. ಇದೆಲ್ಲದರಿಂದ ಇಶಾನ್ ಕಿಶನ್ ಖಿನ್ನತೆಗೊಳಗಾಗಿದ್ರು. ಅಲ್ಲದೇ ಮಾನಸಿಕ ವಾಗಿಯೂ ಖಿನ್ನತೆಗೊಳಗಾಗಿದ್ರು. ಅದೇ ಕಾರಣಕ್ಕೆ ಟೆಸ್ಟ್ ಸರಣಿಗೆ ಆಯ್ಕೆಯಾದ್ರೂ ಆಡೋ ಮನಸ್ಸು ಮಾಡಲಿಲ್ಲ. ಏಕಾಏಕಿ ತವರಿಗೆ ವಾಪಸ್ಸಾಗಿದ್ರು.
ಆ ಒಂದು ನಿರ್ಧಾರ ಇಶಾನ್ ಪಾಲಿಗೆ ಮುಳುವಾಯ್ತಾ..?
ಯೆಸ್, ದಕ್ಷಿಣ ಆಫ್ರಿಕಾ ಪ್ರವಾಸದ ನಡುವೆಯೇ ಇಶಾನ್ ಕಿಶನ್ ಇದ್ದಕ್ಕಿದ್ದಂತೆ ತಂಡ ತೊರೆಯುವ ನಿರ್ಧಾರ ಮಾಡಿದ್ರು. ಇದ್ದಕ್ಕಿದ್ದಂತೆ ಇಂತಹ ನಿರ್ಧಾರ ಕೈಗೊಳ್ಳೋಕೆ ಏನು ಕಾರಣ ಅಂತ BCCI ಪ್ರಶ್ನಿಸಿತ್ತು. ಅದಕ್ಕೆ ಇಶಾನ್ ವೈಯಕ್ತಿಕ, ಮೆಂಟಲ್ ಫಿಟ್ನೆಸ್ ಕಾರಣ ಅಂತ ಹೇಳಿದ್ರು. ಇಶಾನ್ ಮನವಿಯನ್ನ ಬಿಸಿಸಿಐ ಒಪ್ಪಿತು. ಅದರಂತೆ ಇಶಾನ್ ಟೆಸ್ಟ್ ಸರಣಿ ಆಡೋದು ಬಿಟ್ಟು ಸ್ವದೇಶಕ್ಕೆ ಮರಳಿದ್ರು. ಆದ್ರೀಗ, ಇಶಾನ್‌ಗೆ ಅದೇ ಬ್ರೇಕ್ ಸಂಕಷ್ಟ ತಂದಿದೆ. ತಂಡದಲ್ಲಿ ಸ್ಥಾನ ಇಲ್ಲದಂತೆ ಮಾಡಿದೆ. ಟಿ20 ವಿಶ್ವಕಪ್ ರೇಸ್ನಿಂದ ಹೊರಗುಳಿಯುಂತೆ ಮಾಡಿದೆ.
ಟಿ20 ಕಮ್‌ಬ್ಯಾಕ್: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಅಗ್ನಿಪರೀಕ್ಷೆ
ಟಿ20 ವಿಶ್ವಕಪ್ ರೇಸ್ನಿಂದ ಇಶಾನ್ ಔಟ್..!
ಹೌದು, ಆಯ್ಕೆ ಸಮಿತಿ ಟಿ20 ವಿಶ್ವಕಪ್ ರೇಸ್ನಿಂದ ಇಶಾನ್ ಕಿಶನ್ರನ್ನ ಹೊರಗಿಟ್ಟಿದೆ ಅನ್ನೋ ಮಾತುಗಳು ಕೇಳಿಬರ್ತಿವೆ.ಇಶಾನ್‌ರನ್ನು ಬಿಟ್ಟು ಬೇರೆ ಆಟಗಾರರನ್ನ ವಿಶ್ವಕಪ್‌ಗೆ ಆಯ್ಕೆ ಮಾಡೋ ಯೋಚನೆಯಲ್ಲಿದೆ. ಇದೇ ಕಾರಣಕ್ಕೆ ಇಶಾನ್ರನ್ನ ಟೀಮಿಂದ ಡ್ರಾಪ್ ಮಾಡಿದೆ. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬೇಕಾದ್ರೆ, ಮುಂಬರೋ ಐಪಿಎಲ್‌ನಲ್ಲಿ ಇಶಾನ್ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಎರಡರಲ್ಲೂ ಮಿಂಚಬೇಕಿದೆ. ಇಲ್ಲ ಅಂದ್ರೆ, ವಿಶ್ವಕಪ್ ಕನಸು ಭಗ್ನವಾಗಲಿದೆ.
-ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್