
ಪರ್ತ್ (ನ.13): ಪ್ರಥಮ ದರ್ಜೆಯ 6 ಪಂದ್ಯಗಳಿಂದ 22 ವಿಕೆಟ್, ಸರಾಸರಿ 17. ಇದು 17 ವರ್ಷದ ಪಾಕಿಸ್ತಾನ ಬೌಲರ್ ನಸೀಮ್ ಶಾ ಸಾಧನೆ. ಅದ್ಭುತ ಪರ್ಫಾಮೆನ್ಸ್ ಮೂಲಕ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಗೆ ನಸೀಮ್ ಶಾ ಆಯ್ಕೆಯಾಗಿದ್ದಾರೆ. ನವೆಂಬರ್ 15 ರಿಂದ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ನಸೀಮ್ ಪಾಕ್ ತಂಡಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಇದಕ್ಕೂ ಮುನ್ನ ನಡೆಯುತ್ತಿರುವ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ನಸೀಮ್ ಶಾ ಅನುಭವಿಸಿದ ನೋವು ಯಾವ ಕ್ರೀಡಾಪಟುವಿಗೂ ಬರಬಾರದು.
ಇದನ್ನೂ ಓದಿ: ಭಾರತ VS ಬಾಂಗ್ಲಾದೇಶ ಮೊದಲ ಟೆಸ್ಟ್; ಇಲ್ಲಿದೆ ಸಂಭವನೀಯ ತಂಡ!
3 ದಿನಗಳ ಅಭ್ಯಾಸ ಪಂದ್ಯ ನಸೀಮ್ ಶಾ ಪಾಲಿಗೆ ಮಹತ್ವದ್ದಾಗಿದೆ. ಕಾರಣ ಈ ಪಂದ್ಯದಲ್ಲಿ ನಸೀಮ್ ಶಾ ಅಂತಾರಾಷ್ಟ್ರೀಯ ಕರಿಯರ್ ನಿಂತಿದೆ. ಈ ಪಂದ್ಯದ ಮೊದಲ ದಿನವೇ ವೇಳೆ ನಸೀಮ್ ಶಾ ತನ್ನ ತಾಯಿಯನ್ನು ಕಳೆದುಕೊಂಡಿದ್ದಾರೆ. ಈ ಸುದ್ದಿ ನಸೀಮ್ ಶಾಗೆ ಬರಸಿಡಿಲಿನಂತೆ ಅಪ್ಪಳಿಸಿತು. ನಸೀನ್ ದುಃಖ ತಡೆಯಲಾರದೆ ಗಳಗಳನೆ ಅತ್ತು ಬಿಟ್ಟರು.
ಇದನ್ನೂ ಓದಿ: ICC ಟಿ20 ರ‍್ಯಾಂಕಿಂಗ್ ಪ್ರಕಟ: ಹ್ಯಾಟ್ರಿಕ್ ವೀರ ದೀಪಕ್ ಚಹರ್’ಗೆ ಬಂಪರ್..!
3 ದಿನಗಳ ಅಭ್ಯಾಸ ಪಂದ್ಯದ ಆಡೋ 11ರ ಬಳಗದಲ್ಲಿ ನಸೀಮ್ ಶಾ ಕೂಡ ಇದ್ದರು. ಇತ್ತ ತಾಯಿಯ ಸಾವು ಕ್ರಿಕೆಟಿಗನ ನಗುವನ್ನೇ ಕಸಿದುಕೊಂಡಿತು. ಕುಟುಂಬಕ್ಕೆ ಫೋನ್ ಮೂಲಕ ಮಾತನಾಡಿದ ನಸೀಮ್, ಕೆಲ ಸೂಚನೆಗಳನ್ನು ನೀಡಿದ್ದಾರೆ. ಬಳಿಕ ಪಾಕಿಸ್ತಾನ ಟೀಂ ಮ್ಯಾನೇಜ್ಮೆಂಟ್ ಬಳಿ ತಾನು ತಾಯ್ನಾಡಿಗೆ ತೆರಳುತ್ತಿಲ್ಲ. ಪಂದ್ಯ ಆಡುತ್ತೇನೆ ಎಂದು ದಿಟ್ಟ ನಿರ್ಧಾರ ತೆಗೆದುಕೊಂಡರು. ತಾಯಿಯನ್ನು ಕೊನೆಯ ಬಾರಿಗೆ ನೋಡುವ ಹಾಗೂ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳದೇ, ನಸೀಮ್ ಶಾ ಕ್ರಿಕೆಟ್ ಆಡಿದರು.
3 ಪಂದ್ಯದದ ಅಭ್ಯಾಸ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 4 ಓವರ್ ಬೌಲಿಂಗ್ ಮಾಡಿ ಯಾವುದೇ ವಿಕೆಟ್ ಕಬಳಿಸಲಿಲ್ಲ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಆಟಗಾರರು ನಸೀಮ್ ಶಾ ಸಾವಿಗೆ ಕಪ್ಪು ಪಟ್ಟಿ ಧರಿಸಿ ಆಡಿದರು.
ನವೆಂಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.