MSK ಪ್ರಸಾದ್ ಹೇಳಿದ್ರಾ ಸುಳ್ಳು? ಸುರೇಶ್ ರೈನಾ ಹೇಳಿದ ಅಸಲಿ ಕತೆ!

Suvarna News   | Asianet News
Published : May 12, 2020, 09:53 PM IST
MSK ಪ್ರಸಾದ್ ಹೇಳಿದ್ರಾ ಸುಳ್ಳು? ಸುರೇಶ್ ರೈನಾ ಹೇಳಿದ ಅಸಲಿ ಕತೆ!

ಸಾರಾಂಶ

ಟೀಂ ಇಂಡಿಯಾ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ತಾವೇ ಖುದ್ದು 3 ಅತೀ ದೊಡ್ಡ ತಪ್ಪು ಮಾಡಿರುವುದಾಗಿ ಹೇಳಿದ್ದರು. ಇಷ್ಟೇ ಅಲ್ಲ ಇದರೊಂದಿಗೆ ಒಂದು ಸುಳ್ಳಿನ ಕತೆಯೂ ಇದೇ ಅನ್ನೋದನ್ನು  ಟೀಂ ಇಂಡಿಯಾ ಆಲ್ರೌಂಡರ್ ಸುರೇಶ್ ರೈನಾ ಬಹಿರಂಗ ಪಡಿಸಿದ್ದಾರೆ.

ಉತ್ತರ ಪ್ರದೇಶ(ಮೇ.10): ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದ ಸುರೇಶ್ ರೈನಾ ಸದ್ಯ ದೇಶಿ ಕ್ರಿಕೆಟ್ ಹಾಗೂ ಐಪಿಎಲ್ ಟೂರ್ನಿಗೆ ಸೀಮಿತಗೊಂಡಿದ್ದಾರೆ. 2018ರ ಬಳಿಕ ಸುರೇಶ್ ರೈನಾ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ತಂಡಕ್ಕೆ ಮರಳಲು ಅನೇಕ ಕಸರತ್ತು ಮಾಡಿದರೂ ಪ್ರಯೋಜವಾಗಿಲ್ಲ. ಇದರ ಬೆನ್ನಲ್ಲೇ ರೈನಾ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಮಾಡಿದ ಸುಳ್ಳಿನ ಕತೆಯನ್ನು ಹೇಳಿದ್ದಾರೆ.

ಕೊರೋನಾ ವಿರುದ್ಧದ ಹೋರಾಟಕ್ಕೆ 52 ಲಕ್ಷ ರೂಪಾಯಿ ನೀಡಿದ ಸುರೇಶ್ ರೈನಾ!

ಕಳಪೆ ಪ್ರದರ್ಶನ ಹಾಗೂ ಫಿಟ್ನೆಸ್ ಸಮಸ್ಯೆಯಿಂದ ಸುರೇಶ್ ರೈನಾಗೆ 2015ರ ಬಳಿಕ ಟೀಂ ಇಂಡಿಯಾದಲ್ಲಿ ಸರಿಯಾಗಿ ಅವಕಾಶ ಸಿಕ್ಕಿಲ್ಲ. 2018ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸುರೇಶ್ ರೈನಾಗೆ ವಾಪಸ್ ಅಕಾಶವೇ ಸಿಕ್ಕಿಲ್ಲ. ಇತ್ತೀಚೆಗೆ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಹಲವು ವಿಚಾರ ಬಹಿರಂಗ ಪಡಿಸಿದ್ದರು. ಈ ವೇಳೆ ರೈನಾ ಕೈಬಿಟ್ಟ ಕಾರಣವನ್ನು ಸ್ವತಃ ಸುರೇಶ್ ರೈನಾಗೆ ಹೇಳಿರುವುದಾಗಿ ಹೇಳಿದ್ದರು.

ಟೀಂ ಇಂಡಿಯಾದ ಈ 5 ಕ್ರಿಕೆಟಿಗರ ವೃತ್ತಿಬದುಕು ಬಹುತೇಕ ಅಂತ್ಯ..!

ಲಾಕ್‌ಡೌನ್ ಸಮಯದಲ್ಲಿ ಇರ್ಫಾನ್ ಪಠಾಣ್ ಜೊತೆಗಿನ ಇನ್‌ಸ್ಟಾಗ್ರಾಂ ಸಂವಾದದಲ್ಲಿ ಪ್ರಸಾದ್ ಸುಳ್ಳು ಹೇಳಿದ್ದಾರೆ ಎಂದಿದ್ದಾರೆ. ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಪ್ರಸಾದ್ ನನ್ನ ಜೊತೆ ಯಾವ ಮಾತುಕತೆ ನಡೆಸಿಲ್ಲ. ತಂಡದಿಂದ ಕೈಬಿಟ್ಟಿರುವ ಕುರಿತು ಯಾವ ಮಾಹಿತಿಯನ್ನು ನೀಡಿಲ್ಲ ಎಂದಿದ್ದಾರೆ. ಈ ಮೂಲಕ ಪ್ರಸಾದ್ ಸುಳ್ಳು ಹೇಳಿದ್ದಾರೆ ಎಂದಿದ್ದಾರೆ.

2020ರ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ಲೆಕ್ಕಾಚಾರದಲ್ಲಿದ್ದ ಸುರೇಶ್ ರೈನಾಗೆ ಕೊರೋನಾ ವೈರಸ್ ಹೊಡೆತ ನೀಡಿದೆ. ಐಪಿಎಲ್ ಟೂರ್ನಿ ತಾತ್ಕಾಲಿಕ ರದ್ದಾಗಿದೆ. ಇಷ್ಟೇ ಅಲ್ಲ ಈ ವರ್ಷ ಆಯೋಜನೆ ಕೂಡ ಅನುಮಾನ ಎನ್ನಲಾಗುತ್ತಿದೆ. ಹೀಗಾದಲ್ಲಿ ಸುರೇಶ್ ರೈನಾ ಮಾತ್ರವಲ್ಲ, ಹಲವು ಹಿರಿಯ ಕ್ರಿಕೆಟಿಗರ ಕರಿಯರ್ ಅಂತ್ಯವಾಗಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?
ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20: ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!