
ಮುಂಬೈ(ಮೇ.12): ಐಪಿಎಲ್ ಟೂರ್ನಿ ಆಯೋಜನೆ ಸಾಧ್ಯತೆ ಕುರಿತು ಚರ್ಚೆಗಳು ನಡೆಯುತ್ತಿದೆ. ಹಲವು ನಿರ್ಬಂಧ, ಮಾರ್ಗಸೂಚಿಗಳನ್ನು ರೂಪಿಸಿ ಐಪಿಎಲ್ ಆಯೋಜನೆಗೆ ತಯಾರಿ ಕೂಡ ನಡೆಯುತ್ತಿದೆ. ಇದರ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್, ಹೊಸ ಐಡಿಯಾ ನೀಡಿದೆ. ಈ ವರ್ಷ ವಿದೇಶಿ ಆಟಗಾರರಲಿಲ್ಲದೆ ಐಪಿಎಲ್ ಟೂರ್ನಿ ಆಯೋಜನೆ ಮಾಡಿ ನಷ್ಟದ ಮೊತ್ತ ತಗ್ಗಿಸಿ ಎಂದು ಸೂಚಿಸಿದೆ. ಇದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ವಿರೋಧ ವ್ಯಕ್ತಪಡಿಸಿದೆ.
IPL 2020 ಸಂಪೂರ್ಣ ರದ್ದಾದರೆ BCCIಗೆ ಆಗುವ ನಷ್ಟವೆಷ್ಟು? ಇಲ್ಲಿದೆ ವಿವರ!
ವಿದೇಶಿ ಆಟಗಾರರಿಲ್ಲದೆ ಐಪಿಎಲ್ ಟೂರ್ನಿ ಆಯೋಜಿಸಿದರೆ ಅದು ಇನ್ನೊಂದು ಮುಷ್ತಾಕ್ ಆಲಿ ಟೂರ್ನಿ ಆಗಲಿದೆ ಹೊರತು, ಐಪಿಎಲ್ ಟೂರ್ನಿ ಆಗಲ್ಲ ಎಂದು ಸಿಎಸ್‌ಕೆ ಹೇಳಿದೆ. ವಿದೇಶಿ ಆಟಗಾರರಿಲ್ಲದೆ ಐಪಿಎಲ್ ಟೂರ್ನಿ ಸಂಪೂರ್ಣ ಕಳೆಗುಂದಲಿದೆ. ಇಷ್ಟೇ ಅಲ್ಲ ಹಲವು ನಿರ್ಬಂಧದಲ್ಲಿ ಟೂರ್ನಿ ಆಯೋಜಿಸುವುದರಿಂದ ಹೆಚ್ಚಿನ ನಷ್ಟಗಳಾಗಲಿದೆ ಎಂದು ಚೈನ್ನೈ ಫ್ರಾಂಚೈಸಿ ಹೇಳಿದೆ.
IPL 2020 ಟೂರ್ನಿ ಆಯೋಜಿಸಲು ಬಿಸಿಸಿಐಗೆ ಆಹ್ವಾನ ನೀಡಿದ ದುಬೈ!
ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅರ್ನಿದಿಷ್ಟಾವದಿಗೆ ಐಪಿಎಲ್ ಟೂರ್ನಿ ಮುಂದೂಡಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಬಂದು, ಸಮಯಾವಕಾಶ ಸರಿಹೊಂದಿದರೆ ಟೂರ್ನಿ ಆಯೋಜಿಸುವ ಕುರಿತು ಚಿಂತಿಸಲು ಬಿಸಿಸಿಐ ನಿರ್ಧರಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.