ಆಯ್ಕೆ ಸಮಿತಿಯಿಂದ ನಿರ್ಲಕ್ಷ್ಯ; ಪ್ಲಾನ್ 'ಬಿ'ಗೆ ಧೋನಿ ಸಜ್ಜು!

By Web Desk  |  First Published Oct 26, 2019, 6:05 PM IST

ಎಂ.ಎಸ್.ಧೋನಿ ಬದಲು ಹೊಸಬರಿಗೆ ಅವಕಾಶ ನೀಡುವ  ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಹೇಳಿಕೆಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಟೀಂ ಇಂಡಿಯಾ ಅವಕಾಶ ವಂಚಿತವಾಗಿರುವ ಧೋನಿ ಹೊಸ ಪ್ಲಾನ್ ಮಾಡಿದ್ದಾರೆ. 


ರಾಂಚಿ(ಅ.26): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ವಿದಾಯದ ಸಮಯ ಹತ್ತಿರವಾಗುತ್ತಿದೆ. ಬಾಂಗ್ಲಾದೇಶ ವಿರುದ್ದದ ಸರಣಿಗೆ ತಂಡ ಆಯ್ಕೆಯಾದಗ ಧೋನಿ ಅಭಿಮಾನಿಗಳಿಗೆ ಅಚ್ಚರಿ ಕಾದಿತ್ತು. ಧೋನಿಯನ್ನು ಆಯ್ಕೆ ಸಮತಿ ನಿರ್ಲಕ್ಷ್ಯಿಸಿತ್ತು. ಈ ಮೂಲಕ ಸತತ 3ನೇ ಸರಣಿಯಿಂದ ಧೋನಿ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಧೋನಿ ಇದೀಗ ಪ್ಲಾನ್ ಬಿ ಜಾರಿ ಮಾಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಲೆಜೆಂಡ್, ಗ್ರೇಟ್ ಎಂದು ಹೇಳಿ ಧೋನಿ ಕಡೆಗಣಿಸಿದ ಬಿಸಿಸಿಐ!

Latest Videos

undefined

2019ರ ವಿಶ್ವಕಪ್ ಟೂರ್ನಿ ಬಳಿಕ ಧೋನಿ ಕ್ರಿಕೆಟ್‌ ಅಖಾಡಕ್ಕಿಳಿದಿಲ್ಲ. ಇದೀಗ ಬಾಂಗ್ಲಾ ಸರಣಿಯಿಂದ ಔಟಾದ ಬೆನ್ನಲ್ಲೇ, ಧೋನಿ, ತಮ್ಮ ತವರೂರು ರಾಂಚಿಯಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಲು ಮುಂದಾಗಿದ್ದಾರೆ. ಆರಂಭಿಕ ಹಂತದಲ್ಲಿ ರಾಂಚಿಯಲ್ಲಿ ಆರಂಭಿಸಿ, ಬಳಿಕ ಭಾರತದ ಎಲ್ಲಾ ನಗರಗಳಲ್ಲಿ ಹಾಗೂ ವಿದೇಶದಲ್ಲಿ ಧೋನಿ ಕ್ರಿಕೆಟ್ ಅಕಾಡೆಮಿ ಆರಂಭಿಸಲು ಚಿಂತನೆ ನಡೆಸಿದ್ದಾರೆ.

ಇದನ್ನೂ ಓದಿ: ಕಾರು ತೊಳೆದು ಸುಸ್ತಾದ ಧೋನಿಗೆ ಪುತ್ರಿ ಝಿವಾ ಮಸಾಜ್!

ಧೋನಿ ಬಾಲ್ಯದ ಗೆಳೆಯ ಹಾಗೂ ಆಕ್ರಾ ಸ್ಪೋರ್ಟ್ ಅಕಾಡೆಮಿ ಮ್ಯಾನೇಜರ್ ಮಿಹಿರ್ ದಿವಾಕರ್, ಧೋನಿ ಕ್ರಿಕೆಟ್ ಅಕಾಡೆಮಿಗೆ ಸ್ಥಳ ಗುರುತಿಸಲು ಮುಂದಾಗಿದ್ದಾರೆ. ಸ್ಥಳೀಯ ಶಾಲೆ ಜೊತೆ ಒಪ್ಪಂದ ಮಾಡಿಕೊಳ್ಳೋ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಕ್ರಿಕೆಟ್ ತರಬೇತಿ ನೀಡಲು ಯೋಜನೆ ಹಾಕಿಕೊಂಡಿದ್ದಾರೆ. 

ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ,  2020ರ ವೇಳೆಗೆ ಧೋನಿ ಕ್ರಿಕೆಟ್ ಅಕಾಡೆಮಿ ರಾಂಚಿಯಲ್ಲಿ ತಲೆ ಎತ್ತಲಿದೆ. ಇತ್ತ ಟೀಂ ಇಂಡಿಯಾದಲ್ಲಿ ಅವಕಾಶ ಕಡಿಮೆಯಾಗುತ್ತಿರುವ ಕಾರಣ, ಧೋನಿ ಕ್ರಿಕೆಟ್‌ಗೆ ವಿದಾಯ ಹೇಳಿ ಕ್ರಿಕೆಟ್ ಅಕಾಡೆಮಿಯಲ್ಲಿ ಜ್ಯೂನಿಯರ್ ಧೋನಿಯನ್ನು ರೆಡಿ ಮಾಡುವ ಸಾಧ್ಯತೆ ಹೆಚ್ಚಿದೆ.
 

click me!