
ಕ್ರಿಕೆಟಿಗ ಮೊಹಮ್ಮದ್ ಶಮಿ (Mohammed Shami) ಮಾಜಿ ಪತ್ನಿ ಹಸಿನ್ ಜಹಾನ್ (Hasin Jahan) ಮತ್ತೆ ಸುದ್ದಿಯಲ್ಲಿದ್ದಾರೆ. ವಿಚ್ಛೇದನದ ನಂತ್ರ ಮೊಹಮ್ಮದ್ ಶಮಿ ನೀಡ್ತಿರುವ ಜೀವನಾಂಶ ಹಸಿನ್ ಜಹಾನ್ ಗೆ ಸಾಕಾಗ್ತಿಲ್ಲವಂತೆ. ಹಾಗಾಗಿ ಜೀವನಾಂಶ ಹೆಚ್ಚಳ ಕೋರಿಮ ಹಸಿನ್ ಜಹಾನ್ , ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇಂದು ಪಶ್ಚಿಮ ಬಂಗಾಳ ಸರ್ಕಾರ ಮತ್ತು ಮೊಹಮ್ಮದ್ ಶಮಿಗೆ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿದೆ.
ಮೊಹಮ್ಮದ್ ಶಮಿ ಹಾಗೂ ಹಸಿನ್ ಜಹಾನ್ ದೂರವಾಗಿ ಅನೇಕ ವರ್ಷಗಳು ಕಳೆದಿವೆ. ಆದ್ರೆ ಆಗಾಗ ಶಮಿ ಮೇಲೆ ಆರೋಪ ಮಾಡ್ತಾ ಹಸಿನ್ ಜಹಾನ್ ಸುದ್ದಿಗೆ ಬರ್ತಿರುತ್ತಾರೆ. ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ಕೊಲ್ಕತ್ತಾ ಹೈ ಕೋರ್ಟ್, ಹಸಿನ್ ಜಹಾನ್ ಮತ್ತು ಅವರ ಮಗಳಿಗೆ 4 ಲಕ್ಷ ರೂಪಾಯಿ ಮಾಸಿಕ ಜೀವನಾಂಶವನ್ನು ನೀಡುವಂತೆ ಆದೇಶಿಸಿತ್ತು. ಈ 4 ಲಕ್ಷದಲ್ಲಿ 1.5 ಲಕ್ಷ ಹಸಿನ್ ಜಹಾನ್ ಅವರಿಗೆ ಮತ್ತು ಉಳಿದ 2.5 ಲಕ್ಷ ರೂಪಾಯಿ ಮಗಳಿಗೆ ಅಂತ ಕೋರ್ಟ್ ಸೂಚನೆ ನೀಡಿತ್ತು. ಆದ್ರೆ ತಮಗೆ ಸಿಗಲಿರುವ ಮೊತ್ತಕ್ಕೆ ಹಸಿನ್ ಜಹಾನ್ ತೃಪ್ತರಾಗಿಲ್ಲ. ಕೋರ್ಟ್ ತೀರ್ಪು ಬಂದಾಗ್ಲೇ ಈ ಹಣ ಸಾಲೋದಿಲ್ಲ ಅಂತ ಹಸಿನ್ ಜಹಾನ್ ಹೇಳಿದ್ದರು.
ಮಹಿಳಾ ಸಾಧಕಿ ಕೇಳಿದ ಪ್ರಶ್ನೆಗೆ ನಾಚಿ ನೀರಾದ ಪ್ರಧಾನಿ Narendra Modi; ಇಂಥದ್ದು ಭಾರತದಲ್ಲಿ ಮಾತ್ರ ನಡೆಯೋದು
ಹಸಿನ್ ಜಹಾನ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಆರಂಭಿಕ ಹೇಳಿಕೆಯಲ್ಲಿ ಹಸಿನ್ ಜಹಾನ್ ಬೇಡಿಕೆಯನ್ನು ತಿರಸ್ಕರಿಸಿದೆ. ಈಗ ಹಸಿನ್ ಜಹಾನ್ ಮತ್ತು ಮಗಳಿಗೆ ಸಿಗ್ತಿರುವ 4 ಲಕ್ಷ ರೂಪಾಯಿ ತಿಂಗಳಿಗೆ ಸಾಕು ಎಂದಿದೆ. ಇದ್ರ ಜೊತೆ ಕೋರ್ಟ್, ಬಂಗಾಳ ಸರ್ಕಾರ ಮತ್ತು ಶಮಿಗೆ ನೋಟಿಸ್ ಜಾರಿ ಮಾಡಿದ್ದು, ನಾಲ್ಕು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಕೇಳಿದೆ. ಮುಂದಿನ ವಿಚಾರಣೆ ನಾಲ್ಕು ವಾರಗಳ ನಂತರ ನಡೆಯಲಿದೆ.
ಇಷ್ಟು ಹಣಕ್ಕೆ ಬೇಡಿಕೆ ಇಟ್ಟ ಹಸಿನ್ ಜಹಾನ್ :
ಹಸಿನ್ ಜಹಾನ್ ಅರ್ಜಿಯಲ್ಲಿ 4 ಲಕ್ಷ ಸಾಲೋದಿಲ್ಲ, ಮಾಸಿಕ 10 ಲಕ್ಷ ಜೀವನಾಂಶ ನೀಡುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ. 7 ಲಕ್ಷ ನನ್ನ ಖರ್ಚಿಗೆ ಹಾಗೂ 3 ಲಕ್ಷ ಮಗಳ ಖರ್ಚಿಗೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಕೊಲ್ಕತ್ತಾ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲೂ ಹಸಿನ್ ಜಹಾನ್ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.
ಕ್ರಿಕೆಟರ್ ಸುರೇಶ್ ರೈನಾ ಶಿಖರ್ ಧವನ್‌ಗೆ ಇಡಿ ಶಾಕ್: 11.14 ಕೋಟಿ ಆಸ್ತಿ ಮುಟ್ಟುಗೋಲು
ಮೊಹಮ್ಮದ್ ಶಮಿ ಮತ್ತು ಹಸಿನ್ ಜಹಾನ್ 2014 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರ ದಾಂಪತ್ಯ ದೀರ್ಘಕಾಲ ನಡೆಯಲಿಲ್ಲ. 2018 ರಲ್ಲಿ ಇಬ್ಬರೂ ಬೇರ್ಪಟ್ಟಿದ್ದಾರೆ. ಹಸಿನ್ ಜಹಾನ್, ಶಮಿ ವಿರುದ್ಧ ಕೌಟುಂಬಿಕ ಹಿಂಸೆ ಮತ್ತು ಮ್ಯಾಚ್ ಫಿಕ್ಸಿಂಗ್ ಸೇರಿದಂತೆ ಗಂಭೀರ ಆರೋಪಗಳನ್ನು ಹೊರಿಸಿದ್ದರು. ಈ ಆರೋಪಗಳ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯಡಿಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ. ಶಮಿ ಮೇಲಿದ್ದ ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನು ಬಿಸಿಸಿಐ ಖುಲಾಸೆಗೊಳಿಸಿದೆ. ಹಸಿನ್ ಜಹಾನ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಮೊಹಮ್ಮದ್ ಶಮಿ ಮೇಲೆ ಅನೇಕ ಆರೋಪಗಳನ್ನು ಮಾಡಿದ್ದರು. ವ್ಯಕ್ತಿತ್ವಹೀನ, ದುರಾಸೆಯ ಮತ್ತು ಸ್ವಾರ್ಥ ವ್ಯಕ್ತಿ ಎಂದು ಬರೆದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.