ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಮಲೀಕ್ ವಿಚ್ಛೇದನ ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿಗಳು ಅಧಿಕೃತವಾಗಿವೆ. ಈ ನಡುವೆ ಇವರಿಬ್ಬರ ವಿಚ್ಛೇದನಕ್ಕೆ ಕಾರಣವೇನು ಎನ್ನುವುದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ಹಂತದಲ್ಲಿ ಮಾಡೆಲ್ ಆಯೆಷಾ ಖಮರ್ ಹೆಸರು ಕೇಳಿಬಂದಿದೆ.
ನವದೆಹಲಿ (ನ.10): ಭಾರತದ ಅಗ್ರ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲೀಕ್ ಅವರ ವಿವಾಹ ವಿಚ್ಛೇದನದಲ್ಲಿ ಮುಕ್ತಾಯ ಕಂಡಿದೆ. ಶೋಯೆಬ್ ಮಲೀಕ್ ಅವರ ಆಪ್ತ ಮಿತ್ರ, ಮಲೀಕ್ ಅವರ ಮ್ಯಾನೇಜ್‌ಮೆಂಟ್ ಟೀಮ್‌ನಲ್ಲಿರುವ ವ್ಯಕ್ತಿ ಸಾನಿಯಾ ಮಿರ್ಜಾ ಹಾಗೂ ಮಲೀಕ್ ವಿಚ್ಛೇದನ ಪಡೆದುಕೊಂಡಿರುವುದನ್ನು ಖಚಿತಪಡಿಸಿದ್ದಾರೆ. ನಾನು ಅಧಿಕೃತವಾಗಿ ಅವರಿಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ ಎನ್ನುವುದನ್ನು ಹೇಳುತ್ತಿದ್ದೇನೆ. ಆದರೆ, ಅದಕ್ಕಿಂತ ಹೆಚ್ಚಿನದನ್ನು ನಾನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇವರ ವಿಚ್ಛೇದನದ ರೂಮರ್‌ಗಳು ಎದ್ದ ನಡುವೆ, ಶೋಯೆಬ್ ಮಲೀಕ್ ಹಾಗೂ ಮಾಡೆಲ್ ಆಯೆಷಾ ಖಮರ್ ನಡುವಿನ ಸಂದರ್ಶನ ವೈರಲ್ ಆಗಿದೆ. ಈ ಸಂದರ್ಶನದಲ್ಲಿ ಫೋಟೋಶೂಟ್ ವೇಳೆ ಆಯೇಷಾ ನನಗೆ ತುಂಬಾ ಸಹಾಯ ಮಾಡಿದ್ದರು ಎಂದು ಮಲಿಕ್ ಬಹಿರಂಗಪಡಿಸಿದ್ದರು. 2021ರಲ್ಲಿ ನಡೆದ ಶೋಯೆಬ್ ಮಲೀಕ್ ಹಾಗೂ ಆಯೇಷಾ ಖಮರ್ ಬೋಲ್ಡ್ ಫೋಟೋಶೂಟ್‌ನಲ್ಲಿ ಭಾಗಿಯಾಗಿದ್ದರು. ಈಗ ಆ ಫೋಟೋಶೂಟ್‌ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಾನಿಯಾ ಹಾಗೂ ಶೋಯೆಬ್ ಮಲೀಕ್ 2010ರ ಏಪ್ರಿಲ್ 12 ರಂದು ಹೈದರಾಬಾದ್‌ನಲ್ಲಿ ವಿವಾಹವಾಗಿದ್ದರು. ಏಪ್ರಿಲ್ 15 ರಂದು ಲಾಹೋರ್‌ನಲ್ಲಿ ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ಕೂಡ ನಡೆದಿತ್ತು. ದಂಪತಿಗಳಿಗೆ ಇಜಾನ್ ಎನ್ನುವ ಹೆಸರಿನ ಪುತ್ರನಿದ್ದಾನೆ. 2018ರಲ್ಲಿ ಈತ ಜನಿಸಿದ್ದ.
ಅಯೇಷಾ ಜೊತೆ ಬೋಲ್ಡ್ ಫೋಟೋಶೂಟ್: 2021ರ ನವೆಂಬರ್‌ನಲ್ಲಿ ಶೋಯೆಬ್ ಮಲೀಕ್ ಹಾಗೂ ಆಯೆಷಾ ಖಮರ್ ನಡುವಿನ ಫೋಟೋಶೂಟ್‌ನ ಚಿತ್ರಗಳು ವೈರಲ್ ಆಗಿದ್ದವು. ಸಾನಿಯಾ ಮಿರ್ಜಾ ಜೊತೆಗಿನ ವಿಚ್ಛೇದನ ಸುದ್ದಿ ಬಹಿರಂಗವಾದ ಬಳಿಕ ಶೋಯೆಬ್ ಮಲೀಕ್ ಅವರ ಫೋಟೋಶೂಟ್ ಚಿತ್ರಗಳು ಹೆಚ್ಚಾಗಿ ಪ್ರಸಾರವಾಗಿವೆ. ಆಯೇಷಾ ಕಮರ್ ಪ್ರಸಿದ್ಧ ನಟಿ ಮತ್ತು ಯೂಟ್ಯೂಬರ್. ಅವರು ಪಾಕಿಸ್ತಾನದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿದ್ದಾರೆ. ಮಲಿಕ್ ಜೊತೆ ಹಲವು ನಿಯತಕಾಲಿಕೆಗಳಿಗೆ ಫೋಟೋಶೂಟ್ ಮಾಡಿದ್ದಾರೆ. ನಾನು ಕ್ರಿಕೆಟಿಗ, ಮಾಡೆಲಿಂಗ್ ನನ್ನ ಕ್ಷೇತ್ರವಲ್ಲ ಎಂದು ಫೋಟೋಶೂಟ್ ಬಗ್ಗೆ ಶೋಯೆಬ್ ಹೇಳಿದ್ದರು. ಆಯೇಷಾ ನನಗೆ ಈ ಕ್ಷೇತ್ರದಲ್ಲಿ ಸಾಕಷ್ಟು ಸಹಾಯ ಮಾಡಿದ್ದಾರೆ. ಈ ಚಿತ್ರಗಳನ್ನು ನೋಡಿದ ನಂತರ ನಿಮ್ಮ ಪತ್ನಿ ಏನು ಹೇಳಿದರು ಎಂದು ಶೋಯೆಬ್ ಅವರನ್ನು ಕೇಳಿದಾಗ ಹಾಗಾಗಿ ಸಾನಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮಲಿಕ್ ಹಿಂದೊಮ್ಮೆ ಹೇಳಿದ್ದರು. 2022ರ ಅಕ್ಟೋಬರ್‌ನಲ್ಲಿ ಒಕೆ ಪಾಕಿಸ್ತಾನ್ ಎನ್ನುವ ಮ್ಯಾಗಝೀನ್‌ಗೆ ಇಬ್ಬರೂ ಬೋಲ್ಡ್ ಆಗಿ ಪೋಟೋ ಶೂಟ್ ಮಾಡಿಸಿದ್ದರು.
ವಿಚ್ಛೇದನದ ಬಗ್ಗೆ ಮತ್ತಷ್ಟು ಶಂಕೆ ಹುಟ್ಟಿಸುವ ಪೋಸ್ಟ್ ಹಾಕಿದ ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲೀಕ್ ಅವರ ಪಾಕಿಸ್ತಾನ ಮೂಲದ ಆಪ್ತಮಿತ್ರ, ಇಬ್ಬರೂ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದನ್ನು ತಿಳಿಸಿದ್ದಾರೆ. ಕೆಲವೊಂದು ಸಣ್ಣಪುಟ್ಟ ಪ್ರಕ್ರಿಯೆಗಳು ಬಾಕಿ ಉಳಿದುಕೊಂಡಿದ್ದು, ಅದಕ್ಕಾಗಿಯೇ ಅವರಿನ್ನೂ ಅಧಿಕೃತವಾಗಿ ವಿಚಾರ ತಿಳಿಸಿಲ್ಲ. ಇಬ್ಬರೂ ಈಗಾಗಲೇ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಸಾನಿಯಾ ಪ್ರಸ್ತುತ ದುಬೈನಲ್ಲಿದ್ದರೆ, ಮಲೀಕ್ ಪಾಕಿಸ್ತಾನದಲ್ಲಿದ್ದಾರೆ. ಸಾನಿಯಾ ಮಿರ್ಜಾ ಅವರ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಕೂಡ ಅವರು ವಿಚ್ಛೇದನವಾಗುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸುವಂತಿದ್ದರು. ಇತ್ತೀಚಿನ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಭಗ್ನವಾದ ಹೃದಯಗಳು ಎಲ್ಲಿಗೆ ಹೋಗುತ್ತವೆ ಎಂದು ಬರೆದುಕೊಂಡಿದ್ದರು.
ಇನ್ನೊಬ್ಬಳಿಗಾಗಿ Sania Mirzaಗೆ ವಂಚಿಸಿದ Shoaib Malik?: ಡಿವೋರ್ಸ್‌ಗೆ ಮುಂದಾದ ಸ್ಟಾರ್ ಜೋಡಿ
ಅಕ್ಟೋಬರ್ 30 ರಂದು ಸಾನಿಯಾ ಹಾಗೂ ಶೋಯೆಬ್ ಕೊನೆಯ ಬಾರಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದರು. ಆ ದಿನ ಪುತ್ರ ಜನ್ಮದಿನಕ್ಕಾಗಿ ಇಬ್ಬರೂ ಜೊತೆ ಸೇರಿದ್ದರು. ಶೋಯೆಬ್ ಇದರ ಫೋಟೋವನ್ನು ಪೋಸ್ಟ್ ಮಾಡಿದ್ದರು. ಆದರೆ, ಅವರು ಬರೆದ ಕ್ಯಾಪ್ಷನ್ ಎಲ್ಲಾ ಅನುಮಾನಗಳಿಗೆ ಕಾರಣವಾಗಿತ್ತು. ಮಗನ ಕುರಿತಾಗಿ ಬರೆದಿದ್ದ ಅವರು, 'ನೀನು ಹುಟ್ಟಿದಾಗ ನಮ್ಮ ಜೀವನಕ್ಕೆ ವಿಶೇಷವಾದ ಅರ್ಥವಿತ್ತು. ನಾವಿಬ್ಬರೂ ಜೊತೆಯಲ್ಲಿ ಇಲ್ಲದೇ ಇರಬಹುದು. ನಾವು ಪ್ರತಿ ದಿನ ಭೇಟಿಯಾಗದೇ ಇರಬಹುದು. ಆದರೆ, ಬಾಬಾ ನಿನ್ನನ್ನು ಹಾಗೂ ನಿನ್ನ ನಗುವಿನ ಪ್ರತಿ ಕ್ಷಣದ ಬಗ್ಗೆಯೂ ಯೋಚನೆ ಮಾಡುತ್ತಿರುತ್ತಾರೆ. ಅಮ್ಮನಿಗಿಂತ ಹೆಚ್ಚಾಗಿ ಬಾಬಾ ನಿನ್ನ ಪ್ರೀತಿ ಮಾಡುತ್ತಾರೆ ಎಂದು ಬರೆದಿದ್ದರು.