ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಮಿಥಾಲಿ ರಾಜ್..!

By Suvarna NewsFirst Published Jul 5, 2021, 8:30 AM IST
Highlights

* ಇಂಗ್ಲೆಂಡ್ ಎದುರು ಐತಿಹಾಸಿಕ ಸಾಧನೆ ಮಾಡಿದ ಮಿಥಾಲಿ ರಾಜ್

* ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಬ್ಯಾಟರ್ ಎನಿಸಿಕೊಂಡ ಮಿಥಾಲಿ

* 317 ಪಂದ್ಯಗಳಿಂದ ಮಿಥಾಲಿ 10,277 ರನ್‌ ಗಳಿಸಿ ಮೊದಲ ಸ್ಥಾನಕ್ಕೇರಿದ್ದಾರೆ.

ವೋರ್ಚೆಸ್ಟರ್‌(ಜು.05): ಭಾರತದ ನಾಯಕಿ ಮಿಥಾಲಿ ರಾಜ್‌ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಗಳಿಸಿದ ಆಟಗಾರ್ತಿ ಎನ್ನುವ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಅಜೇಯ 75 ರನ್‌ ಗಳಿಸಿದ ಮಿಥಾಲಿ, ಇಂಗ್ಲೆಂಡ್‌ನ ಮಾಜಿ ನಾಯಕಿ ಶ್ಯಾರೊಲೆ ಎಡ್ವರ್ಡ್ಸ್ರ ದಾಖಲೆ ಮುರಿದರು.

317 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ(ಟೆಸ್ಟ್‌, ಏಕದಿನ, ಟಿ20) ಮಿಥಾಲಿ 10,277 ರನ್‌ ಗಳಿಸಿ ಮೊದಲ ಸ್ಥಾನಕ್ಕೇರಿದ್ದಾರೆ. 309 ಪಂದ್ಯಗಳಲ್ಲಿ ಎಡ್ವರ್ಡ್ಸ್ 10,273 ರನ್‌ ಗಳಿಸಿದ್ದರು. ಪುರುಷರ ಕ್ರಿಕೆಟ್‌ನಲ್ಲಿ ಸಚಿನ್‌ ತೆಂಡುಲ್ಕರ್‌, ಮಹಿಳಾ ಕ್ರಿಕೆಟ್‌ನಲ್ಲಿ ಮಿಥಾಲಿ ನಂ.1 ಸ್ಥಾನದಲ್ಲಿರುವುದು ವಿಶೇಷ.

The leading run-scorer across formats in women's cricket 🙌

Take a bow, ! pic.twitter.com/cykCZCtQwk

— ICC (@ICC)

ಭಾರತ ಮಹಿಳಾ ತಂಡಕ್ಕೆ ಮತ್ತೊಂದು ಸೋಲು; ಸರಣಿ ಇಂಗ್ಲೆಂಡ್ ಪಾಲು

ಇದೇ ವೇಳೆ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಗೆಲುವುಗಳನ್ನು ಕಂಡ ನಾಯಕಿಯರ ಪಟ್ಟಿಯಲ್ಲಿ ಮಿಥಾಲಿ ಮೊದಲ ಸ್ಥಾನಕ್ಕೇರಿದ್ದಾರೆ. ಮಿಥಾಲಿ ನಾಯಕತ್ವದಲ್ಲಿ ಭಾರತ 84 ಗೆಲುವುಗಳನ್ನು ಸಾಧಿಸಿದೆ. ಆಸ್ಪ್ರೇಲಿಯಾದ ಬೆಲಿಂಡಾ ಕ್ಲಾರ್ಕ್ ನಾಯಕಿಯಾಗಿ 83 ಗೆಲುವುಗಳನ್ನು ಕಂಡಿದ್ದರು.

ಇಂಗ್ಲೆಂಡ್‌ ವಿರುದ್ಧ ವೈಟ್‌ವಾಶ್‌ ತಪ್ಪಿಸಿಕೊಂಡ ಟೀಂ ಇಂಡಿಯಾ

ವೋರ್ಚೆಸ್ಟರ್‌: ನಾಯಕಿ ಮಿಥಾಲಿ ರಾಜ್‌ರ ಸತತ 3ನೇ ಅರ್ಧಶತಕದ ನೆರವಿನಿಂದ, ಭಾರತ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲಿ ವೈಟ್‌ವಾಶ್‌ ಮುಖಭಂಗದಿಂದ ಪಾರಾಯಿತು. ಭಾರತ 4 ವಿಕೆಟ್‌ಗಳ ಗೆಲುವು ಸಾಧಿಸಿ, ಇಂಗ್ಲೆಂಡ್‌ ಪ್ರವಾಸದಲ್ಲಿ ಮೊದಲ ಗೆಲುವು ದಾಖಲಿಸಿತು. 2-1ರಲ್ಲಿ ಸರಣಿ ಇಂಗ್ಲೆಂಡ್‌ ಪಾಲಾಯಿತು.

ಮಳೆಯಿಂದಾಗಿ ಪಂದ್ಯವನ್ನು 47 ಓವರ್‌ಗಳಿಗೆ ಇಳಿಸಲಾಗಿತ್ತು. ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 219 ರನ್‌ಗೆ ಆಲೌಟ್‌ ಆಯಿತು. ಭಾರತ 3 ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿತು. ಮಿಥಾಲಿ ಅಜೇಯ 75 ರನ್‌ ಗಳಿಸಿದರೆ, ಸ್ಮೃತಿ ಮಂಧನಾ 49 ರನ್‌ ಗಳಿಸಿದರು.

ಸ್ಕೋರ್‌: 
ಇಂಗ್ಲೆಂಡ್‌ 219/10
ಭಾರತ 220/6

click me!