ಅವನೀತ್ ಕೌರ್ ಫೋಟೋ ಲೈಕ್ ಮಾಡಿ ಸ್ಪಷ್ಟನೆ ಕೊಟ್ಟರೂ ಕೊಹ್ಲಿ ಬೆಂಬಿಡದ ಮೀಮ್ಸ್

Published : May 03, 2025, 04:06 PM ISTUpdated : May 03, 2025, 04:19 PM IST
ಅವನೀತ್ ಕೌರ್  ಫೋಟೋ ಲೈಕ್ ಮಾಡಿ ಸ್ಪಷ್ಟನೆ ಕೊಟ್ಟರೂ ಕೊಹ್ಲಿ ಬೆಂಬಿಡದ ಮೀಮ್ಸ್

ಸಾರಾಂಶ

ನಟಿ ಅವನೀತ್ ಕೌರ್  ಫೋಟೋಗೆ ಇನ್‌ಸ್ಟಾಗ್ರಾಂನಲ್ಲಿ ಕೊಹ್ಲಿ ಲೈಕ್ ಕೊಟ್ಟಿದ್ದೇ ತಡ, ಬಿರುಗಾಳಿ ಎದ್ದಿದೆ. ಅನುಷ್ಕಾ ಶರ್ಮಾ ಟ್ಯಾಗ್ ಮಾಡಿ ಕೊಹ್ಲಿ ವಿರುದ್ಧ ಮೀಮ್ಸ್ ಹರಿದಾಡಿತ್ತು. ಆದರೆ ಭಾರಿ ಚರ್ಚೆಯಾಗುತ್ತಿದ್ದಂತೆ ಖುದ್ದು ವಿರಾಟ್ ಕೊಹ್ಲಿ ಸ್ಪಷ್ಟನೆ ಕೊಟ್ಟರೂ ಇದೀಗ ಮೀಮ್ಸ್ ಮಾತ್ರ ಕೊಹ್ಲಿಯನ್ನು ಬಿಡುತ್ತಿಲ್ಲ.

ಬೆಂಗಳೂರು(ಮೇ.03) ವಿರಾಟ್ ಕೊಹ್ಲಿ ಸೋಶಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರಿಕೆಟಿಗ. ಇನ್ನು ಗರಿಷ್ಠ ಫಾಲೋವರ್ಸ್ ಹೊಂದಿದ ವಿಶ್ವದ ಕ್ರೀಡಾಪಟುಗಳ ಸಾಲಿನಲ್ಲೂ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಇದೇ ಸೋಶಿಯಲ್ ಮೀಡಿಯಾದಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್‌ಗೆ ಕೋಟಿ ಕೋಟಿ ರೂಪಾಯಿ ಎಂಡೋರ್ಸಮೆಂಟ್ ಪಡೆಯುತ್ತಿದ್ದ ವಿರಾಟ್ ಕೊಹ್ಲಿ ಇದೀಗ ನಟಿ ಅವನೀತ್ ಕೌರ್ ಫೋಟೋ ಲೈಕ್ ಮಾಡಿ ಕೆಟ್ಟಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅವನೀತ್ ಕೌರ್ ಫೋಟೋವನ್ನು ಕೊಹ್ಲಿ ಲೈಕ್ ಮಾಡಿದ್ದಾರೆ. ಇಷ್ಟೇ ನೋಡಿ ಅನುಷ್ಕಾ ಶರ್ಮಾ ಮಕ್ಕಳನ್ನು ನೋಡಿಕೊಂಡು ಬ್ಯೂಸಿಯಾಗಿರುವ ಕೊಹ್ಲಿ ನಟಿಯೊಬ್ಬರ ಪೋಸ್ಟ್ ಲೈಕ್ ಮಾಡಿದ್ದಾರೆ ಎಂದು ಮೀಮ್ಸ್ ಆರಂಭಗೊಂಡಿತ್ತು. ಈ ಕುರಿತು ಹಲವು ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಕೊಹ್ಲಿ ಅವನೀತ್ ಕೌರ್ ಪೋಟೋ, ಸಂದೇಶಗಳೇ ಹರಿದಾಡಲು ಆರಭಿಸಿತ್ತು. ಹೀಗಾಗಿ ವಿರಾಟ್ ಕೊಹ್ಲಿ ಅನಿವಾರ್ಯವಾಗಿ ಸ್ಪಷ್ಟನೆ ನೀಡಬೇಕಾಯಿತು. ಆದರೆ ಕೊಹ್ಲಿ ಸ್ಪಷ್ಟನೆ ಇದೀಗ ಮೀಮ್ಸ್‌ಗೆ ಆಹಾರವಾಗಿದೆ.

ಅಧಿಕೃತ ಖಾತೆಯಿಂದ ಕೊಹ್ಲಿ ಲೈಕ್

ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಂ ಅಧಿಕೃತ ಖಾತೆಯಿಂದ ನಟಿ ಅವನೀತ್ ಕೌರ್ ಬೋಲ್ಡ್ ಫೋಟೋಗೆ ಲೈಕ್ ಮಾಡಿದ್ದರು. ಪತ್ನಿ ಅನುಷ್ಕಾ ಶರ್ಮಾ ಮನೆಯಲ್ಲಿರುವಾಗ ಕೊಹ್ಲಿ ಬೇರೆ ನಟಿಯನ್ನು ಇಷ್ಟಪಡಲು ಆರಂಭಿಸಿದ್ದಾರೆ ಎಂದು ಟ್ರೋಲ್ ಆರಂಭಗೊಂಡಿತ್ತು. ಅನುಷ್ಕಾ ಶರ್ಮಾಗೆ ಹಲವರು ಟ್ಯಾಗ್ ಮಾಡಿದ್ದರು. ಟ್ರೋಲ್, ಮೀಮ್ಸ್ ವಿಪರೀತವಾದಾಗ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂ ಮೂಲಕ ಸ್ಪಷ್ಟನೆ ನೀಡಿದ್ದರು.

ವಿರಾಟ್ ಬಗ್ಗೆ ಇದೇನು ಹೇಳಿಬಿಟ್ರು ಸುರೇಶ್ ರೈನಾ.. ಹೀಗೂ ಉಂಟಾ ಎಂದು ಕೊಹ್ಲಿ ಫ್ಯಾನ್ಸ್ ಶಾಕ್!

ಈ ಮೂಲಕ ನಾನು ಸ್ಪಷ್ಟನೆ ನೀಡಲು ಬಯಸುತ್ತಿದ್ದೇನೆ. ನನ್ನ ಖಾತೆಯ ಫೀಡ್ ಕ್ಲೀಯರ್ ಮಾಡುವ ವೇಳೆ ಅಲ್ಗೋರಿದಂ ತಪ್ಪಿನಿಂದ ಈ ರೀತಿ ಆಗಿದೆ. ಇದರ ಹಿಂದೆ ಯಾವುದೇ ಉದ್ದೇಶ ಇರಲಿಲ್ಲ. ಈ ಮೂಲಕ ನಾನು ನಿಮ್ಮಲ್ಲಿ ಕಳಕಳಿಯ ವಿನಂತಿ ಮಾಡವುದೇನೆಂದರೆ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಕೊಹ್ಲಿ ಸ್ಪಷ್ಟನೆ ನೀಡಿದ್ದರು.

ಸ್ಪಷ್ಟನೆ ಬಳಿಕ ಹೆಚ್ಚಾದ ಮೀಮ್ಸ್

ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ ಬಳಿಕ ಮೀಮ್ಸ್ ಹೆಚ್ಚಾಗಿದೆ. ಕಾರಣ ಕೊಹ್ಲಿ ನೀಡಿದ ಸ್ಪಷ್ಟನೆಯನ್ನು ಹಲವರು ಒಪ್ಪಿಕೊಂಡಿಲ್ಲ. ಇದಕ್ಕಿಂತ ನೇರವಾಗಿ ತಪ್ಪಾಗಿದೆ ಎಂದರೆ ಇಷ್ಟು ಸಮಸ್ಯೆ ಇರುತ್ತಿರಲಿಲ್ಲ ಎಂದು ಸಲಹೆ ನೀಡಿದ್ದಾರೆ. ಅವನೀತ್ ಕೌರ್ ಫೋಟೋ ಲೈಕ್ ಮಾಡಿದ್ದು ಟೆಕ್ ಆಲ್ಗೋರಿದಂನಿಂದ ಆಗಿರುವ ಸಮಸ್ಯೆ ಎಂದು ಕೊಹ್ಲಿ ಸ್ಪಷ್ಟನೆಯಲ್ಲಿ ಹೇಳಿದ್ದಾರೆ. ಇದುವೇ ಟ್ರೋಲ್ ಹಾಗೂ  ಮೀಮ್ಸ್‌ಗೆ ಕಾರಣವಾಗಿದೆ.

ಇದೇ ರೀತಿ ಫೋಟೋ ಗೊತ್ತಿಲ್ಲದೆಯೋ, ಗೊತ್ತಿದ್ದೋ ಲೈಕ್ಸ್ ಮಾಡಿದ ಬಳಿಕ ಈ ಕುರಿತು ಪ್ರಶ್ನಿಸಿದರೆ, ಸಾಮಾನ್ಯ ಒಬ್ಬ ಅಣ್ಣ ತಪ್ಪಾಯಿತು, ಗೊತ್ತಿಲ್ಲದೆ ಹೇಗೆ ಲೈಕ್ಸ್ ಟ್ಯಾಪ್ ಆಗೋಯ್ತು ಎನ್ನುತ್ತಾರೆ. ಆದರೆ ಕೊಹ್ಲಿಯ ಇನ್‌ಸ್ಟಾಗ್ರಾಂ ಅಡ್ಮಿನ್ ಪ್ರಕಾರ, ಫೀಡ್ ಕ್ಲೀಯರ್ ಮಾಡುವಾಗ ಅಲ್ಗೋರಿದಂ ಮಿಸ್ಟೇಕ್ ಆಗಿದೆ. ಇದಕ್ಕೆ ಹೇಳುವುದು ಕಾರ್ಪೋರೇಟ್ ಭಾಷೆ ಕಲಿಯಬೇಕು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

 

 

ಕಳೆದ ನಾಲ್ಕು ವರ್ಷಗಳಿಂದ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ಆದರೆ ಅಲ್ಗೋರಿದಂ ಹೇಗೆ ಲೈಕ್ಸ್ ಮಾಡುತ್ತೆ ಅನ್ನೋದು ಗೊತ್ತಾಗಿಲ್ಲ. ಅದು ಯಾರದ್ದೂ ಫೈನಲ್ ಪ್ರಾಜೆಕ್ಟ್ ಅಲ್ಲ, ಇನ್‌ಸ್ಟಾಗ್ರಾಂ ಈ ರೀತಿ ತನ್ನಷ್ಟಕ್ಕೆ ಮಿಸ್ಟೇಕ್ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದರೆ. ನಟಿ ಫೋಟೋಗೆ ಲೈಕ್ ಮಾಡಿ ಕೇಳಿದರೆ, ನನ್ಗೇನು ಗೊತ್ತು, ಎಲ್ಲಾ ಮಾರ್ಕ್ ಜುಕರ್‌ಬರ್ಗ್‌ನ ಕೇಳಿ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಬಿಸಿಸಿಐ ಪತ್ನಿಯರಿಗೆ ಅವಕಾಶವಿಲ್ಲ ಎಂದು ನಿಯಮ ತಂದಾಗಲೇ ಅನುಮಾನವಿತ್ತು ಎಂದು ಮತ್ತೆ ಕೆಲವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸ್ಪಷ್ಟನೆ ನೀಡಿದ ಬಳಿಕವೂ ವಿರಾಟ್ ಕೊಹ್ಲಿ ಕುರಿತು ಮೀಮ್ಸ್ ಹರಿದಾಡುತ್ತಿದೆ.  

ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆರ್‌ಸಿಬಿ ಸಂಘಟಿತ ಹೋರಾಟದಿಂದ ಈ ಬಾರಿ ಆಡಿದ 10 ರಲ್ಲಿ 7 ಪಂದ್ಯ ಗೆದ್ದುಕೊಂಡಿದೆ. ಈಗಾಗಲೇ 14 ಅಂಕ ಸಂಪಾದಿಸಿದೆ. ಪ್ಲೇ ಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಆರ್‌ಸಿಬಿ ಸ್ಥಾನ ಖಚಿತಪಡಿಸಿಕೊಳ್ಳುವ ಸಾಧ್ಯತೆ ಇದೆ.  

ಅಬ್ಬಬ್ಬಾ! ವಿರುಷ್ಕಾ ಜೋಡಿಯ ಒಟ್ಟು ಸಂಪತ್ತು ಇಷ್ಟೊಂದಾ?


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ-ಆಫ್ರಿಕಾ ಫೈನಲ್ ಫೈಟ್: ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?