ಗಾಬಾದಲ್ಲಿ ಭಾರತಕ್ಕೆ ಬೌನ್ಸರ್‌ ಟೆಸ್ಟ್‌: ಟೀಂ ಇಂಡಿಯಾಗೆ ಈ ಬಾರಿ ಮತ್ತೊಮ್ಮೆ ಕಠಿಣ ಸವಾಲು!

By Naveen Kodase  |  First Published Dec 12, 2024, 4:39 PM IST

ಬ್ರಿಸ್ಟೇನ್‌ನ ಗಾಬಾ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್‌ ಪಂದ್ಯದ ಪಿಚ್ ವೇಗಿಗಳಿಗೆ ನೆರವಾಗಲಿದೆ ಎಂದು ಕ್ಯುರೇಟರ್ ತಿಳಿಸಿದ್ದಾರೆ. 2021ರಲ್ಲಿ ಭಾರತ ತಂಡ ಗಾಬಾದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದರೂ, ಈ ಬಾರಿಯೂ ಕಠಿಣ ಸವಾಲು ಎದುರಾಗಲಿದೆ.


ಬ್ರಿಸ್ಟೇನ್‌: ಅಡಿಲೇಡ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವೇಗಿಗಳ ಮುಂದೆ ತತ್ತರಿಸಿ, ಹೀನಾಯ ಸೋಲಿನ ಮುಖಭಂಗ ಕ್ಕೊಳಗಾಗಿದ್ದ ಭಾರತ ತಂಡಕ್ಕೆ ಬ್ರಿಸ್ಟೇನ್ ಟೆಸ್ಟ್‌ನಲ್ಲೂ ಕಠಿಣ ಸವಾಲು ಎದುರಾಗುವುದು ಖಚಿತ. ಉಭಯ ತಂಡಗಳ ನಡುವಿನ 3ನೇ ಟೆಸ್ಟ್‌ಗೆ ಆತಿಥ್ಯ ವಹಿಸಲಿರುವ ಬ್ರಿಸ್ಟೇನ್‌ನ ಗಾಬಾ ಕ್ರೀಡಾಂಗಣದ ಪಿಚ್ ಹೆಚ್ಚಿನ ವೇಗ ಹಾಗೂ ಬೌನ್ಸ್ ಹೊಂದಿರಲಿದೆ ಎಂದು ಪಿಚ್ ಕ್ಯುರೇಟ‌ರ್ ಮಾಹಿತಿ ನೀಡಿದ್ದಾರೆ.

ಕಳೆದ ಬಾರಿ ಅಂದರೆ 2021ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಗಾಬಾ ಟೆಸ್ಟ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿತ್ತು. ಆಸೀಸ್‌ನ ಭದ್ರಕೋಟೆ ಎನಿಸಿಕೊಂಡಿದ್ದ ಗಾಬಾದಲ್ಲಿ ಭಾರತ ಅಭೂತಪೂರ್ವ ಜಯ ದಾಖಲಿಸಿತ್ತು. ಈ ಗೆಲುವನ್ನು ಭಾರತದ ಯಾವುದೇ ಕ್ರಿಕೆಟ್ ಅಭಿಮಾನಿಯೂ ಮರೆಯಲಿಕ್ಕಿಲ್ಲ. ಆದರೆ ಭಾರತಕ್ಕೆ ಈ ಬಾರಿಯೂ ಗಾಬಾದಲ್ಲಿ ಕಠಿಣ ಸವಾಲು ಎದುರಾಗಲಿದೆ.

Tap to resize

Latest Videos

ಪೈಸೆ ಪೈಸೆಗೂ ಪರದಾಡುತ್ತಿರುವ ವಿನೋದ್ ಕಾಂಬ್ಳಿ; ಬೀದಿಗೆ ಬೀಳುವ ಆತಂಕದಲ್ಲಿ ಮಾಜಿ ಕ್ರಿಕೆಟರ್!

'ಗಾಬಾ ಪಿಚ್ ವಿಭಿನ್ನವಾಗಿದೆ. ವರ್ಷದ ವಿವಿಧ ಸಂದರ್ಭಗಳಲ್ಲಿ ವಿವಿಧ ರೀತಿ ವರ್ತಿಸುತ್ತದೆ. ಸಾಮಾನ್ಯವಾಗಿ ವೇಗ ಹಾಗೂ ಬೌನ್ಸ್ ಇರುವ ಪಿಚ್ ಗಳನ್ನೇ ನಾವು ಪ್ರತಿ ವರ್ಷವೂ ಸಿದ್ಧಪಡಿಸುತ್ತೇವೆ. ಈ ಬಾರಿಯೂ ಸಾಂಪ್ರದಾಯಿಕವಾಗಿ ವೇಗಿಗಳಿಗೆ ನೆರವಾಗುವ ಪಿಚ್ ನಿರೀಕ್ಷಿಸುತ್ತಿದ್ದೇವೆ' ಎಂದು ಕ್ಯುರೇಟರ್ ಡೇವಿಡ್ ಸುಂಡುರ್ಸ್‌ ಹೇಳಿದ್ದಾರೆ. ಈ ಕ್ರೀಡಾಂಗಣದಲ್ಲಿ ಕಳೆದ ತಿಂಗಳು ನಡೆಸಿದ್ದ ದೇಸಿ ಕ್ರಿಕೆಟ್ ಪಂದ್ಯದ ಮೊದಲ ದಿನ 15 ವಿಕೆಟ್ ಉರುಳಿದ್ದವು.

undefined

ಎಲ್ಲಾ 5 ದಿನ ಮಳೆಯ ಭೀತಿ

ಡಿ.14ರಿಂದ ಆರಂಭಗೊಳ್ಳಲಿರುವ 3ನೇ ಟೆಸ್ಟ್‌ಗೆ ಮಳೆ ಅಡ್ಡಿ ಪಡಿಸುವ ಸಾಧ್ಯತೆತೆಯಿದೆ. ವರದಿಗಳ ಪ್ರಕಾರ ಎಲ್ಲಾ ದಿನವೂ ಮಳೆ ಮುನ್ಸೂಚನೆ ಇದೆ. ಬಹುತೇಕ ದಿನಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ವರದಿಯಾಗಿದೆ.

ಜಗತ್ತಿನ ಶ್ರೀಮಂತ ಕ್ರಿಕೆಟಿಗ 22ನೇ ವಯಸ್ಸಿಗೆ ಕ್ರಿಕೆಟ್‌ಗೆ ಗುಡ್‌ಬೈ! ಈತ ಧೋನಿ, ಸಚಿನ್, ಕೊಹ್ಲಿಗಿಂತ ಶ್ರೀಮಂತ!

3ನೇ ಟೆಸ್ಟ್‌ಗಾಗಿ ಬ್ರಿಸ್ಟೇನ್‌ಗೆ ಬಂದ ಟೀಂ ಇಂಡಿಯಾ

3ನೇ ಟೆಸ್ಟ್‌ಗಾಗಿ ಭಾರತೀಯ ಆಟಗಾರರು ಬುಧವಾರ ಬ್ರಿಸ್ಟೇನ್‌ಗೆ ಬಂದಿಳಿದರು. ಡಿ.8ರಂದೇ ಅಡಿಲೇಡ್ ಟೆಸ್ಟ್ ಮುಕ್ತಾಯಗೊಂಡಿತ್ತು. ಬಳಿಕ ಆಸ್ಟ್ರೇಲಿಯಾ ಆಟಗಾರರು ಬ್ರಿಸ್ಟೇನ್‌ ಆಗಮಿಸಿದ್ದರೂ, ಭಾರತೀಯ ಆಟಗಾರರು ಅಡಿಲೇಡ್‌ನಲ್ಲೇ ಉಳಿದುಕೊಂಡಿದ್ದರು. ಬಹುತೇಕ ಆಟಗಾರರು ಅಲ್ಲೇ ನೆಟ್ ಅಭ್ಯಾಸದಲ್ಲಿ ತೊಡಗಿಸಿ ಕೊಂಡಿದ್ದರು. ಬುಧವಾರ ಬ್ರಿಸ್ಟೇನ್‌ಗೆ ಆಗಮಿಸಿದ್ದಾರೆ. 

ಉಭಯ ತಂಡಗಳ ನಡುವಿನ 5 ಪಂದ್ಯಗಳ ಪೈಕಿ 2 ಪಂದ್ಯಗಳು ಮುಕ್ತಾಯಗೊಂಡಿವೆ. ಪರ್ತ್‌ ಟೆಸ್ಟ್‌ನಲ್ಲಿ ಭಾರತ ಗೆದ್ದಿದ್ದರೆ, ಅಡಿಲೇಡ್‌ನ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯಭೇರಿ ಬಾರಿಸಿತ್ತು.

click me!