ಮಹಾರಾಜ ಟ್ರೋಫಿ: ಮೈಸೂರು ವಾರಿಯರ್ಸ್‌ ಸವಾಲು ಗೆದ್ದ ಗುಲ್ಬರ್ಗಾ

Published : Aug 25, 2024, 10:21 AM IST
ಮಹಾರಾಜ ಟ್ರೋಫಿ: ಮೈಸೂರು ವಾರಿಯರ್ಸ್‌ ಸವಾಲು ಗೆದ್ದ ಗುಲ್ಬರ್ಗಾ

ಸಾರಾಂಶ

3ನೇ ಆವೃತ್ತಿ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ಎದುರು ಗುಲ್ಬರ್ಗಾ ಮಿಸ್ಟಿಕ್ಸ್ 5 ವಿಕೆಟ್‌ ಗೆಲುವು ಸಾಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುತ್ತಿರುವ 3ನೇ ಆವೃತ್ತಿ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಮೈಸೂರು ವಾರಿಯರ್ಸ್ ವಿರುದ್ಧ ಗುಲ್ಬರ್ಗಾ ಮಿಸ್ಟಿಕ್ಸ್ 5 ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ ಗುಲ್ಬರ್ಗಾ ತಾನಾಡಿದ 7 ಪಂದ್ಯಗಳಲ್ಲಿ 4ನೇ ಗೆಲುವು ಸಾಧಿಸಿದರೆ, ಮೈಸೂರು 7 ಪಂದ್ಯಗಳಲ್ಲಿ 3ನೇ ಸೋಲು ಅನುಭವಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮೈಸೂರು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 154 ರನ್ ಗಳಿಸಿತು. ಆರಂಭದಲ್ಲೇ ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ತಂಡ 17ನೇ ಓವರ್‌ವರೆಗೂ ಚೇತರಿಸಿಕೊಳ್ಳಲಿಲ್ಲ. ತಂಡ 16.2 ಓವರ್‌ಗಳಲ್ಲಿ 92 ರನ್‌ಗೆ 8 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಪ್ಯಾರಿಸ್‌ಗೆ ಪಯಣ ಬೆಳೆಸಿದ ಭಾರತೀಯ ಪ್ಯಾರಾ ಅಥ್ಲೀಟ್‌ಗಳು: ಸಾರ್ವಕಾಲಿಕ ಗರಿಷ್ಠ 84 ಮಂದಿ ಕಣಕ್ಕೆ

ಆದರೆ 9ನೇ ವಿಕೆಟ್‌ಗೆ ಜೆ.ಸುಚಿತ್‌ ಹಾಗೂ ಮನೋಜ್‌ ಭಾಂಡಗೆ ಕೇವಲ 21 ಎಸೆತಗಳಲ್ಲಿ 52 ರನ್‌ ಬಾರಿಸಿ ತಂಡಕ್ಕೆ ಆಪತ್ಬಾಂಧವರಾಗಿ ಮೂಡಿಬಂದರು. ಮನೋಜ್‌ 14 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 38 ರನ್‌ ಸಿಡಿಸಿದರೆ, ಸುಚಿತ್‌ 25 ರನ್‌ ಗಳಿಸಿದರು. ಅಭಿಷೇಕ್‌ ಪ್ರಭಾಕರ್‌ 4 ಓವರ್‌ಗಳಲ್ಲಿ 21 ರನ್‌ಗೆ 5 ವಿಕೆಟ್‌ ಕಿತ್ತರು.

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಗುಬ್ಬರ್ಗಾ 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 157 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು. ಲುವ್ನಿತ್ ಸಿಸೋಡಿಯಾ(23) ಉತ್ತಮ ಆರಂಭ ಒದಗಿಸಿದರು. ತಂಡ ಪವರ್ ಪ್ಲೇನಲ್ಲಿ 1 ವಿಕೆಟ್‌ಗೆ 50 ರನ್ ಗಳಿಸಿತು. ಆದರೆ ಬಳಿಕ ಕುಸಿಯಿತು. ದೇವದತ್‌ ಪಡಿಕ್ಕಲ್‌ 24, ಅನೀಶ್‌ 8 ರನ್‌ ಗಳಿಸಿ ಔಟಾದರು. ಆದರೆ ಸ್ಮರಣ್‌ ತಂಡಕ್ಕೆ ಆಸರೆಯಾದರು. ಅವರು ಕೇವಲ 36 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್‌ನೊಂದಿಗೆ 52 ರನ್‌ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ವಿನೇಶ್ ಫೋಗಟ್ ಕಾಂಗ್ರೆಸ್‌ಗೆ?; ಉರಿಯೋ ಬೆಂಕಿಗೆ ತುಪ್ಪ ಸುರಿದಂತಾದ ಕುಸ್ತಿಪಟು ನಡೆ!

ಸ್ಕೋರ್‌: 

ಮೈಸೂರು 20 ಓವರ್‌ನಲ್ಲಿ 154/9 (ಮನೋಜ್‌ 38, ಸುಚಿತ್‌ ಔಟಾಗದೆ 25, ಅಭಿಷೇಕ್‌ 5/21) 
ಗುಲ್ಬರ್ಗಾ 18.5 ಓವರ್‌ಗಳಲ್ಲಿ 157/5 (ಸ್ಮರಣ್‌ 52, ಪಡಿಕ್ಕಲ್‌ 24, ಮನೋಜ್‌ 2/36)

ಪಂದ್ಯಶ್ರೇಷ್ಠ: ಅಭಿಷೇಕ್‌ ಪ್ರಭಾಕರ್‌

ಸತತ 6 ಸೋಲಿನ ಬಳಿಕ ಗೆದ್ದ ಶಿವಮೊಗ್ಗ

ಸತತ 6 ಪಂದ್ಯಗಳಲ್ಲಿ ಸೋತು ಕಂಗೆಟ್ಟಿದ್ದ ಶಿವಮೊಗ್ಗ ಟೂರ್ನಿಯಲ್ಲಿ ಕೊನೆಗೂ ಗೆಲುವು ಸಾಧಿಸಿತು. ಶನಿವಾರ ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ 6 ವಿಕೆಟ್ ಜಯ ಲಭಿಸಿತು. ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ 19.3 ಓವರ್‌ಗಳಲ್ಲಿ 141ಕ್ಕೆ ಆಲೌಟಾಯಿತು. ಸುಲಭ ಗುರಿಯನ್ನು ಶಿವಮೊಗ್ಗ 15.1 ಓವರ್‌ಗಳಲ್ಲೇ ಬೆನ್ನತ್ತಿ ಗೆದ್ದಿತು. ಅಭಿನವ್ ಮನೋಹರ್ 27 ಎಸೆತಗಳಲ್ಲಿ 2 ಬೌಂಡರಿ, 9 ಸಿಕ್ಸರ್‌ಗಳನ್ನೊಳಗೊಂಡ 70 ರನ್ ಸಿಡಿಸಿದರು.

ಇಂದಿನ ಪಂದ್ಯಗಳು

ಬೆಂಗಳೂರು-ಮೈಸೂರು, ಮಧ್ಯಾಹ್ನ 3ಕ್ಕೆ

ಮಂಗಳೂರು-ಶಿವಮೊಗ್ಗ, ಸಂಜೆ 7 ಗಂಟೆಗೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!