ಬಾಂಗ್ಲಾದೇಶದ ವಿವಾದಿತ ಕ್ರಿಕೆಟಿಗ ಶಕೀಬ್‌ ಅಲ್ ಹಸನ್‌ ವಿರುದ್ಧ ಈಗ ಕೊಲೆ ಕೇಸ್‌!

By Asianetnews Kannada Stories  |  First Published Aug 24, 2024, 9:42 AM IST

ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಗಲಭೆ ವೇಳೆ ಯುವಕನೊಬ್ಬನ ಹತ್ಯ ಆರೋಪದಡಿ ಶಕೀಬ್ ಅಲ್ ಹಸನ್ ಮೇಲೆ ಎಫ್‌ಐಆರ್ ದಾಖಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ನವದೆಹಲಿ: ಸದಾ ಒಂದಿಲ್ಲೊಂದು ವಿವಾದಗಳ ಮೂಲಕವೇ ಸುದ್ದಿಯಾಗುವ ಬಾಂಗ್ಲಾದೇಶದ ಹಿರಿಯ ಕ್ರಿಕೆಟಿಗ ಶಕೀಬ್‌ ಅಲ್‌ ಹಸನ್‌ ವಿರುದ್ಧ ಈಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಾಗಿದೆ.

37 ವರ್ಷದ ಶಕೀಬ್‌ ಬಾಂಗ್ಲಾದೇಶದ ಶೇಕ್‌ ಹಸೀನಾ ಸರ್ಕಾರದಲ್ಲಿ ಸಂಸದರಾಗಿದ್ದರು. ಇತ್ತೀಚೆಗೆ ಹಸೀನಾ ಸರ್ಕಾರದ ವಿರುದ್ಧ ನಡೆಯುತ್ತಿದ್ದ ಹಿಂಸಾತ್ಮಕ ಪ್ರತಿಭಟನೆ ವೇಳೆ ರುಬೆಲ್‌ ಎಂಬವರ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ಶಕೀಬ್‌ ಕೈವಾಡವಿದೆ ಎಂದು ಅಡಾಬೊರ್‌ ಪೊಲೀಸ್‌ ಠಾಣೆಯಲ್ಲಿ ರುಬೆಲ್‌ರ ತಂದೆ ದೂರು ಸಲ್ಲಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಶೇಕ್‌ ಹಸೀನಾ, ಶಕೀಬ್‌ ಸೇರಿ ಒಟ್ಟು 147 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

Tap to resize

Latest Videos

undefined

ಆಗಸ್ಟ್‌ 7ರಂದು ರುಬೆಲ್‌ರ ಕೊಲೆ ನಡೆದಿತ್ತು. ಆದರೆ ಶಕೀಬ್‌ ಜು.26ರಿಂದ ಆ.9ರ ವರೆಗೆ ಕೆನಡಾದಲ್ಲಿದ್ದರು. ಅಂದರೆ ಶಕೀಬ್‌ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿಲ್ಲ. ಆದರೆ ಮಗನ ಕೊಲೆಯಲ್ಲಿ ಪರೋಕ್ಷವಾಗಿ ಭಾಗಿಯಾದ ಆರೋಪದ ಮೇಲೆ ಶಕೀಬ್‌ ವಿರುದ್ಧ ಕೇಸ್‌ ದಾಖಲಾಗಿದೆ ಎಂದು ತಿಳಿದುಬಂದಿದೆ.

ಅಂತಾರಾಷ್ಟ್ರೀಯ, ದೇಶಿ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಶಿಖರ್ ಧವನ್..! ಐಪಿಎಲ್ ಆಡ್ತಾರಾ ಗಬ್ಬರ್ ಸಿಂಗ್?

ಟೆಸ್ಟ್‌: ಪಾಕಿಸ್ತಾನ ವಿರುದ್ಧ ಬಾಂಗ್ಲಾ ದಿಟ್ಟ ಹೋರಾಟ

ರಾವಲ್ಪಿಂಡಿ: ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾದೇಶ ದಿಟ್ಟ ಹೋರಾಟ ಪ್ರದರ್ಶಿಸುತ್ತಿದೆ. ಪಾಕ್‌ನ 448 ರನ್‌ಗೆ ಉತ್ತರವಾಗಿ ಬ್ಯಾಟ್‌ ಮಾಡುತ್ತಿರುವ ಬಾಂಗ್ಲಾ 3ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 316 ರನ್‌ ಕಲೆಹಾಕಿದೆ. ತಂಡ ಇನ್ನು 132 ರನ್‌ ಹಿನ್ನಡೆಯಲ್ಲಿದೆ. ಶಾದ್ಮನ್‌ ಇಸ್ಲಾಮ್‌ 93, ಮೊಮಿನುಲ್‌ ಹಕ್‌ 50 ರನ್‌ ಗಳಿಸಿದರು. ಮುಷ್ಫಿಕುರ್‌ ರಹೀಂ(ಔಟಾಗದೆ 55) ಹಾಗೂ ಲಿಟನ್‌ ದಾಸ್‌(ಔಟಾಗದೆ 52) 4ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಶ್ರೀಲಂಕಾ-ನ್ಯೂಜಿಲೆಂಡ್‌ ಟೆಸ್ಟ್‌ ಪಂದ್ಯದ ನಡುವೆ ಒಂದು ದಿನ ವಿಶ್ರಾಂತಿ!

ಗಾಲೆ(ಶ್ರೀಲಂಕಾ): ಮುಂದಿನ ತಿಂಗಳು ಗಾಲೆ ಕ್ರೀಡಾಂಗಣದಲ್ಲಿ ನಡೆಯಲಿರುವ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್‌ ನಡುವಿನ ಟೆಸ್ಟ್‌ ಪಂದ್ಯ 5 ದಿನಗಳ ಬದಲು 6 ದಿನಗಳ ಕಾಲ ನಡೆಯಲಿದೆ. 

ಉಭಯ ತಂಡಗಳ ನಡುವಿನ 2 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಸೆ.18ಕ್ಕೆ ಆರಂಭಗೊಳ್ಳಲಿದೆ. ಆದರೆ ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆ ಕಾರಣಕ್ಕೆ ಸೆ.21ರಂದು ಪಂದ್ಯಕ್ಕೆ ವಿರಾಮ. ಬಳಿಕ ಸೆ.22ಕ್ಕೆ ಪಂದ್ಯ ಪುನಾರಂಭಗೊಳ್ಳಲಿದ್ದು, ಸೆ.23ರಂದು ಕೊನೆಗೊಳ್ಳಲಿದೆ.

ಬುಮ್ರಾ, ಕೊಹ್ಲಿ, ಪಾಂಡ್ಯ ಅಲ್ಲವೇ ಅಲ್ಲ: ಟಿ20 ವಿಶ್ವಕಪ್ ಗೆದ್ದಿದ್ದೇ ಈ ಮೂವರಿಂದ: ಅಚ್ಚರಿ ಹೇಳಿಕೆ ಕೊಟ್ಟ ರೋಹಿತ್ ಶರ್ಮಾ..!

ಈ ಮೊದಲು 2001ರಲ್ಲಿ ಶ್ರೀಲಂಕಾ-ಜಿಂಬಾಬ್ವೆ ಪಂದ್ಯ ಕೂಡಾ 6 ದಿನಗಳ ಕಾಲ ನಡೆದಿತ್ತು. ಚಂದ್ರಗ್ರಹಣ ಕಾರಣಕ್ಕೆ ಒಂದು ದಿನ ಪಂದ್ಯಕ್ಕೆ ವಿರಾಮ ನೀಡಲಾಗಿತ್ತು. 2008ರಲ್ಲಿ ಬಾಂಗ್ಲಾದಲ್ಲಿ ಲಂಕಾ-ಬಾಂಗ್ಲಾ ನಡುವಿನ ಪಂದ್ಯ ಕೂಡಾ ಚುನಾವಣೆ ಕಾರಣಕ್ಕೆ 6 ದಿನಗಳ ಕಾಲ ನಡೆಸಲಾಗಿತ್ತು.
 

click me!