ಕರ್ನಾಟಕದಲ್ಲಿ ಫ್ಯಾನ್ಸ್ ತೋರುವ ಪ್ರೀತಿ ಇನ್ನೆಲ್ಲೂ ಸಿಗದು, ಪಂದ್ಯಕ್ಕೂ ಮೊದಲು ಕೊಹ್ಲಿ ವಿಡಿಯೋ ವೈರಲ್!

By Suvarna News  |  First Published Nov 11, 2023, 10:02 PM IST

ಐಸಿಸಿ ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ಬೆಂಗಳೂರಿನಲ್ಲಿ ನೆದರ್ಲೆಂಡ್ ವಿರುದ್ಧ ಹೋರಾಟ ನಡೆಸಲಿದೆ. ಈ ಪಂದ್ಯಕ್ಕೂ ಮುನ್ನ ಕೊಹ್ಲಿ ಕನ್ನಡಿಗರ ಪ್ರೀತಿ, ಅಭಿಮಾನಿಗಳು ತೋರುವ ಅಭಿಮಾನ ಇನ್ನೆಲ್ಲು ಸಿಗದೂ ಎಂದಿರುವ ವಿಡಿಯೋ ವೈರಲ್ ಆಗಿದೆ. ಇದೇ ವಿಡಿಯೋದಲ್ಲಿ ಕನ್ನಡಿಗರ ಪ್ರೀತಿ ಕುರಿತು ದಿಗ್ಗಜ ಎಸ್‌ಬಿ ಬಾಲಸುಬ್ರಹ್ಮಣ್ಯಂ ಕೂಡ ಹೇಳಿದ್ದಾರೆ.


ಬೆಂಗಳೂರು(ನ.11) ನೆದರ್ಲೆಂಡ್ ವಿರುದ್ದ ಪಂದ್ಯಕ್ಕಾಗಿ ಟೀಂ ಇಂಡಿಯಾ ಬೆಂಗಳೂರಿನಲ್ಲಿ ಬೀಡುಬಿಟ್ಟಿದೆ. ನವೆಂಬರ್ 12 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಸಿಸಿ ವಿಶ್ವಕಪ್ 2023ರ ಅಂತಿಮ ಲೀಗ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ದಿಗ್ಗಜ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಕನ್ನಡಿಗರ ಪ್ರೀತಿ, ಅಭಿಮಾನ, ವಿಶ್ವಾಸಾರ್ಹತೆ ಕುರಿತು ಆಡಿರುವ ಮಾತುಗಳು ವೈರಲ್ ಆಗಿದೆ. ಇಬ್ಬರು ಕರ್ನಾಟದಲ್ಲಿ ಸಿಗುತ್ತಿರುವ ಪ್ರೀತಿಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಈ ವಿಡಿಯೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.

ನಾನು ಆರ್‌ಸಿಬಿ ಆಟಗಾರ. ನನಗೆ ಆರ್‌ಸಿಬಿ ಹೊರತುಪಡಿಸಿ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇತರ ಯಾವುದೇ ಫ್ರಾಂಚೈಸಿಗೆ ನಾನು ಆಡುತ್ತೇನೆ ಎಂದು ಊಹಿಸಲು ಸಾಧ್ಯವಿಲ್ಲ, ಆಡುವುದಿಲ್ಲ. ಕಾರಣ ಇಲ್ಲಿ ನನಗೆ ಅಭಿಮಾನಿಗಳು ತೋರುತ್ತಿರುವ ಪ್ರೀತಿ, ನನ್ನ ಮೇಲಿ ಕನ್ನಡಿಗರು ಇಟ್ಟಿರುವ ನಂಬಿಕೆ ನನಗೆ ಅತ್ಯಂತ ಮುಖ್ಯ. ಸುದೀರ್ಘ ವರ್ಷಗಳಿಂದ ಈ ಪ್ರೀತಿ, ನಂಬಿಕೆ, ಅಭಿಮಾನ ಪ್ರದರ್ಶಿಸಿದ್ದಾರೆ. ಇದು ನನ್ನ ಪಾಲಿನ ಅತ್ಯಂತ ದೊಡ್ಡ ಗೌರವ ಹಾಗೂ ಸ್ಮರಣಿಕೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

Tap to resize

Latest Videos

 

ಪಂದ್ಯದ ನಡುವೆ ಶಾರುಖ್ ಖಾನ್ ಚಲೆಯಾ ಹಾಡು ಹಾಡಿ ಸಿಗ್ನೇಚರ್ ಸ್ಟೆಪ್ಸ್ ಹಾಕಿದ ಕೊಹ್ಲಿ!

ಇನ್ನು ಇದೇ ವಿಡಿಯೋದಲ್ಲಿ ಭಾರತ ಕಂಡ ಅತ್ಯಂತ ಶ್ರೇಷ್ಠ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಕೂಡ ಕನ್ನಡಿಗರ ಪ್ರೀತಿ ಕುರಿತು ಮಾತನಾಡಿದ್ದಾರೆ. ಸಂಗೀತ ಕಾರ್ಯಕ್ರಮದ ವೇದಿಕೆಯಲ್ಲಿ ಎಸ್‌ಪಿಬಿ, ನಾನು ಎಲ್ಲಾ ಕಡೆಗಳಲ್ಲಿ ಹಾಡುತ್ತೇನೆ. ಆದರೆ ಇಲ್ಲಿ ಸಿಗುವ ಪ್ರೀತಿ, ಅಭಿಮಾನ, ಆಶೀರ್ವಾದ ಬೇರೆ ಯಾವ ಜಾಗದಲ್ಲೂ ನನಗೆ ಸಿಗುತ್ತಿಲ್ಲ ಎಂದಿದ್ದಾರೆ.

 

 

ಎಸ್‌ಪಿಬಿ ಹಾಗೂ ಕೊಹ್ಲಿ ಆಡಿರುವ ಮಾತುಗಳು ಹೊಸದಲ್ಲ. ಈ ಹಳೇ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ. ಕನ್ನಡಿಗರ ವಿಶಾಲ ಹೃದಯದವರು, ಎಲ್ಲರನ್ನೂ ಗೌರವಿಸಿ, ಪ್ರೀತಿಸುವ ಗುಣವಿರುವವರೇ ಕನ್ನಡಿಗರು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಶ್ರೇಯಾ ಘೋಷಾಲ್, ಸೋನೋ ನಿಗಮ್ ಸೇರಿದಂತೆ ಹಲವು ಬಾಲಿವುಡ್ ಗಾಯಕರು ಕನ್ನಡ ಹಾಗೂ ಕರ್ನಾಟಕದ ಮೇಲೆ ವಿಶೇಷ ಅಭಿಮಾನ ಇಟ್ಟುಕೊಂಡಿದ್ದಾರೆ ಎಂದು ಹಲವರು ಉದಾಹರಣೆ ಸಮೇತ ಪ್ರತಿಕ್ರಿಯೆ ನೀಡಿದ್ದಾರೆ.

ಬರ್ತ್‌ ಡೇ ಬಾಯ್ ಕೊಹ್ಲಿಗೆ ಸೆಂಚುರಿ ಸಂಭ್ರಮ; ಈಡನ್‌ ಗಾರ್ಡನ್ಸ್‌ನಲ್ಲಿ ತೆಂಡುಲ್ಕರ್ ದಾಖಲೆ ಸರಿಸಮ..!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನದೆರ್ಲೆಂಡ್ ವಿರುದ್ದ ಪಂದ್ಯ ನಡೆಯಲಿದೆ. ಹೀಗಾಗಿ ಕೊಹ್ಲಿ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣ, ಕೊಹ್ಲಿ ಹಾಗೂ ಕನ್ನಡಿಗರು, ಕರ್ನಾಟಕದ ಕುರಿತ ವಿಡಿಯೋಗಳು ಇದೀಗ ಸಂಚಲನ ಮೂಡಿಸುತ್ತಿದೆ. 

click me!