023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮಾತ್ರ ಇದುವರೆಗೂ ಒಂದೇ ಒಂದು ಸೋಲು ಕಂಡಿಲ್ಲ. ಲೀಗ್ ಹಂತದ ಮೊದಲ 8 ಪಂದ್ಯಗಳನ್ನು ಗೆದ್ದು ಬೀಗಿರುವ ಟೀಂ ಇಂಡಿಯಾ, ಇದೀಗ ಬೆಂಗಳೂರಿನಲ್ಲಿ ನೆದರ್‌ಲೆಂಡ್ಸ್ ಎದುರಿನ ಪಂದ್ಯವನ್ನೂ ಗೆದ್ದು ಸೆಮೀಸ್ ಕಾದಾಟಕ್ಕೆ ಎದುರು ನೋಡುತ್ತಿದೆ.
ಬೆಂಗಳೂರು(ನ.11): ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅದ್ಭುತ ಪ್ರದರ್ಶನದ ಮೂಲಕ ಅಜೇಯವಾಗಿ ಸೆಮೀಸ್‌ಗೆ ಕಾಲಿಟ್ಟಿದೆ. ಇದೀಗ ಭಾರತ ಕ್ರಿಕೆಟ್ ತಂಡವು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನೆದರ್‌ಲೆಂಡ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ನವೆಂಬರ್ 12ರಂದು ಭಾರತ ಹಾಗೂ ನೆದರ್‌ಲೆಂಡ್ಸ್ ತಂಡಗಳ ನಡುವಿನ ಪಂದ್ಯಕ್ಕೆ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಈ ಪಂದ್ಯಕ್ಕೆ ಭಾರತದ ಆಡುವ ಹನ್ನೊಂದರ ಬಳಗ ಹೇಗಿರಲಿದ ಎನ್ನುವ ಬಗ್ಗೆ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಹೌದು, ಭಾರತ ತಂಡವು ನವೆಂಬರ್ 15ರಂದು ಮೊದಲ ಸೆಮಿಫೈನಲ್‌ನಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನೆದರ್‌ಲೆಂಡ್ಸ್ ತಂಡವನ್ನು ಎದುರಿಸಲಿದೆ. ನೆದರ್‌ಲೆಂಡ್ಸ್ ಎದುರಿನ ಪಂದ್ಯಕ್ಕೂ ಮುನ್ನ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ದ್ರಾವಿಡ್, ನೆದರ್‌ಲೆಂಡ್ಸ್ ಎದುರಿನ ಪಂದ್ಯಕ್ಕೂ ಮುನ್ನ ಭಾರತಕ್ಕೆ ಸಾಕಷ್ಟು ವಿಶ್ರಾಂತಿ ಸಿಕ್ಕಿದೆ. ಹೀಗಾಗಿ ತಂಡದ ಆಡುವ ಹನ್ನೊಂದರ ಬಳಗದ ಕಾಂಬಿನೇಷನ್‌ನಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎನ್ನುವ ಸುಳಿವು ಬಿಚ್ಚಿಟ್ಟಿದ್ದಾರೆ.
ಪಾಕಿಸ್ತಾನ ವಿಶ್ವಕಪ್‌ನಿಂದ ಔಟ್ ಖಚಿತ , ಮುಂಬೈನಲ್ಲಿ ಭಾರತ-ನ್ಯೂಜಿಲೆಂಡ್ ಮೊದಲ ಸೆಮಿಫೈನಲ್!
"ನಾವು ಕಳೆದ ಪಂದ್ಯವನ್ನಾಡಿ ಸುಮಾರು ಆರು ದಿನಗಳೇ ಕಳೆದಿವೆ. ಹೀಗಾಗಿ ನಮ್ಮ ಆಟಗಾರರಿಗೆ ತುಂಬಾ ಚೆನ್ನಾಗಿಯೇ ವಿಶ್ರಾಂತಿ ಸಿಕ್ಕಿದೆ. ನಮ್ಮ ತಂಡದ ಹುಡುಗರು ಒಳ್ಳೆಯ ಲಯದಲ್ಲಿದ್ದಾರೆ. ಆರು ದಿನಗಳ ವಿಶ್ರಾಂತಿ ನಂತರ ಸೆಮಿಫೈನಲ್‌ಗೂ ಮುನ್ನ ಕೊನೆಯ ಪಂದ್ಯವನ್ನಾಡುತ್ತಿದ್ದೇವೆ. ಎಲ್ಲಾ ಹುಡುಗರಿಗೆ ವಿಶ್ರಾಂತಿ ಸಿಕ್ಕಿದೆ. ಹೀಗಾಗಿ ಇದನ್ನಷ್ಟೇ ನಾನು ಹೇಳಬಲ್ಲೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
"ಪ್ರಾಮಾಣಿಕವಾಗಿ ಹೇಳಬೇಕಂದ್ರೆ...": ಭಾರತದ ಆತಿಥ್ಯದ ಬಗ್ಗೆ ಪಾಕ್ ನಾಯಕ ಬಾಬರ್ ಅಜಂ ಹೇಳಿದ್ದೇನು?
ನಾವೀಗ ಟೂರ್ನಿಯ ಕೊನೆಯ ಹಂತದತ್ತ ಬಂದಿದ್ದೇವೆ. ಹೀಗಾಗಿ ಆಡುವ ಹನ್ನೊಂದರ ಬಳಗದಲ್ಲಿ ಯಾರೆಲ್ಲಾ ಇರಬೇಕು ಎನ್ನುವುದು ಸ್ಪಷ್ಟವಾಗಿದೆ. ಸೆಮಿಫೈನಲ್‌ಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಫಿಟ್ ಇರುವ ಸ್ಥಾನ ಪಡೆಯುತ್ತಾರೆ ಹಾಗೂ ಫೈನಲ್‌ಗೆ ಸ್ಥಾನ ಪಡೆದರೇ ಅಲ್ಲೂ ಅದೇ ರೀತಿ ಸ್ಥಾನ ಪಡೆಯಲಿದ್ದಾರೆ ಎಂದು ಹೇಳುವ ಮೂಲಕ ಸೂಚ್ಯವಾಗಿ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮಾತ್ರ ಇದುವರೆಗೂ ಒಂದೇ ಒಂದು ಸೋಲು ಕಂಡಿಲ್ಲ. ಲೀಗ್ ಹಂತದ ಮೊದಲ 8 ಪಂದ್ಯಗಳನ್ನು ಗೆದ್ದು ಬೀಗಿರುವ ಟೀಂ ಇಂಡಿಯಾ, ಇದೀಗ ಬೆಂಗಳೂರಿನಲ್ಲಿ ನೆದರ್‌ಲೆಂಡ್ಸ್ ಎದುರಿನ ಪಂದ್ಯವನ್ನೂ ಗೆದ್ದು ಸೆಮೀಸ್ ಕಾದಾಟಕ್ಕೆ ಎದುರು ನೋಡುತ್ತಿದೆ. ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ನವೆಂಬರ್ 15ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫೈನಲ್‌ಗಾಗಿ ಕಾದಾಡಲಿದ್ದು, ಈ ಪಂದ್ಯಕ್ಕೆ ಮುಂಬೈನ ವಾಂಖೇಡೆ ಮೈದಾನ ಆತಿಥ್ಯ ವಹಿಸಿದೆ.